Viral Video: ನಾಯಿಗೂ ಒಂದು ದಿನ ಬರುತ್ತದೆ ಎಂದು ಕೇಳಿದ್ದಿರಲ್ಲ, ಈಗ ನೋಡಿ!

Dogs : ಓಹೋ, ಶ್ವಾನಮಹಾರಾಜರು ಅಜಯ್​ ದೇವಗನ್​ ಅವರಿಂದ ತರಬೇತಿ ಪಡೆದಿರುವ ಹಾಗಿದೆ ಎಂದು ಹಲವರು. ಹಾಗಿದ್ದರೆ ಇನ್ನು ಮುಂದೆ ನಮ್ಮ ರಾಷ್ಟ್ರೀಯ ಪ್ರಾಣಿ ಯಾವುದು ಎಂದು ಕೆಲವರು. ಈ ವಿಡಿಯೋದ ಬಗ್ಗೆ ನೀವು ಏನು ಹೇಳುತ್ತೀರಿ?

Viral Video: ನಾಯಿಗೂ ಒಂದು ದಿನ ಬರುತ್ತದೆ ಎಂದು ಕೇಳಿದ್ದಿರಲ್ಲ, ಈಗ ನೋಡಿ!
ಎಮ್ಮೆಸವಾರಿ ಮಾಡುತ್ತಿರುವ ನಾಯಿ
Follow us
ಶ್ರೀದೇವಿ ಕಳಸದ
|

Updated on:Jul 28, 2023 | 4:06 PM

Dog : ಶ್ವಾನಮಹಾರಾಜರು ಎಮ್ಮೆಯ (Buffalo) ಮೇಲೇರಿ ಘನಗಾಂಭೀರ್ಯವಾಗಿ ಪ್ರಜೆಗಳ ಕ್ಷೇಮಸಮಾಚಾರ ತಿಳಿದುಕೊಳ್ಳಲು ಪುರಸಂಚಾರಕ್ಕೆ ಹೊರಟಿದ್ದಾರೆ. ನೆಟ್ಟಿಗ ಮಹಾಶಯರಲ್ಲಿ ಕೆಲವರು ಇವರಿಗೆ ಬಗೆಬಗೆಯ ಸವಾಲುಗಳನ್ನೆಸೆದು ಇವರ ಪಾಂಡಿತ್ಯ ಪರೀಕ್ಷೆ ಮಾಡುತ್ತಿದ್ದಾರೆ. ಕೆಲವರಷ್ಟೇ ಇವರ ಬಗ್ಗೆ ಹೆಮ್ಮೆಯಾಡಿದ್ದಾರೆ. ಇನ್ನೂ ಕೆಲವರು ಅಪಹಾಸ್ಯದಿಂದ ಕಾಲೆಳೆಯುತ್ತಿದ್ದಾರೆ. ಈ ಎಳೆತಂದಿದಾಗಿಯೇ ಈ ಮೂವರೂ ಸಾಮಾಜಿಕ ಜಾಲತಾಣದ ತುಂಬೆಲ್ಲ ತಮ್ಮ ಕೀರ್ತಿಪತಾಕೆ ಹಾರಿಸುತ್ತಿದ್ದಾರೆ. ಇವರಿಗೆ ಜಯವಾಗಲಿ, ಈ ಅಪರೂಪದ ಸಂಚಾರಕ್ಕೆ ನೀವೂ ಸಾಕ್ಷಿಯಾಗಿ ಪುನೀತರಾಗಿ.

‘ಪ್ರತೀ ನಾಯಿಗೂ ಅದರದೇ ಆದ ದಿನವೊಂದು ಬಂದೇ ಬರುತ್ತದೆ ಎಂದು ಕೇಳಿದ್ದೆ, ಆದರೆ ಅದನ್ನು ಇಂದು ನೋಡಿಯೇ ಬಿಟ್ಟೆ’ ಎಂದಿದ್ದಾರೆ ಈ ವಿಡಿಯೋ ಟ್ವೀಟ್ ಮಾಡಿದ ಶಾಝಿಯಾ ಚೌಧರಿ. ಈ ವಿಡಿಯೋ ಅನ್ನು ಈತನಕ 9 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. 8,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 1,600 ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಇನ್ನು ಇನ್​ಸ್ಟಾಗ್ರಾನಲ್ಲಿಯೂ ಈ ವಿಡಿಯೋ ಇದ್ದು ಈತನಕ 16 ಮಿಲಿಯನ್​ ಜನರು ಇದನ್ನು ನೋಡಿದ್ದಾರೆ.

ಇದನ್ನೂ ಓದಿ : Viral: ಬಿಹಾರ್; ತನಗೆ ಎರಡೇ ಮಕ್ಕಳು ಎಂದು ಸುಳ್ಳು ಹೇಳಿದ್ದ ಛಾಪ್ರಾ ಮೇಯರ್ ಇದೀಗ ವಜಾ

ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ವೈರಲ್ ವಿಡಿಯೋ ಯಾವ ಚಿತ್ರದ ಶೂಟಿಂಗ್? ಎಂದಿದ್ದಾರೆ ಒಬ್ಬರು. ಶಭಾಷ್​! ಅಜಯ್​ ದೇವಗನ್​ ಎಂದಿದ್ದಾರೆ ಮತ್ತೊಬ್ಬರು. ಆನೆಗಳ ಮೇಲೆ ಸವಾರಿ ಮಾಡುತ್ತಿರುವ ನಾಯಿಗೆ ಜಯವಾಗಲಿ ಎಂದಿದ್ದಾರೆ ಇನ್ನೊಬ್ಬರು. ಗೋಲ್ಮಾಲ್​ 1ನೇ ಡ್ರಾಫ್ಟ್​ ಇದು ಎಂದಿದ್ದಾಎರ ಇನ್ನೂ ಒಬ್ಬರು.

ಇದನ್ನೂ ಓದಿ : Viral: ಚಿಪ್ಪುಮೀನಿನ ಖಾದ್ಯದಲ್ಲಿ ಸಿಕ್ಕ ಮುತ್ತು; ಅದನ್ನಾಕೆ ನಿಶ್ಚಿತಾರ್ಥದ ಉಂಗುರವಾಗಿಸಿಕೊಂಡಳು

ಅಯ್ಯೋ ನಾನೂ ನಿಮ್ಮೊಂದಿಗೆ ಈಗ ಇರಬೇಕಿತ್ತು ಎಂದಿದ್ದಾರೆ ಒಬ್ಬರು. ಇನ್ನುಮುಂದೆ ರಾಷ್ಟ್ರೀಯ ಪ್ರಾಣಿ ನಾಯಿಯಾಗಲಿ ಎಂದಿದ್ದಾರೆ ಮತ್ತೊಬ್ಬರು. ನಮ್ಮ ಬಾಹುಬಲಿ ಬಂದಾ ಎಂದಿದ್ದಾರೆ ಇನ್ನೂ ಒಬ್ಬರು. ಅವಕಾಶವಾದಿಗಳು ಎಲ್ಲೆಡೆಯೂ ಇರುತ್ತಾರೆ ಎಂದಿದ್ದಾರೆ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:01 pm, Fri, 28 July 23

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ