Viral Video: ಇವರುಗಳ ಶ್ರಮಕ್ಕೆ ವಿಜ್ಞಾನವೂ ವಿಚಾರವೂ ಕೌಶಲವೂ ಸೇರಿದಾಗ
Construction : ವಿಚಾರ ಶಕ್ತಿಯಿಂದ, ಅರಿವಿನಿಂದ, ಒಮ್ಮೊಮ್ಮೆ ತಕ್ಕುದಾದ ಸಲಕರಣೆಗಳ ಸಹಾಯದಿಂದ ಕಠಿಣವಾದ ಕೆಲಸಗಳನ್ನು ಚೊಕ್ಕ ಮತ್ತು ಛಂದಗೊಳಿಸುವ ಜಾಣ್ಮೆ ಇವರಿಗಲ್ಲದೆ ಇನ್ನ್ಯಾರಿಗಿದೆ? ನೋಡಿ ಈ ವಿಡಿಯೋ.
Workers : ಎಂಜಿನಿಯರುಗಳು ಮತ್ತು ಕಾರ್ಮಿಕರ ಕೌಶಲ ಜಾಣತನಗಳನ್ನು ಎತ್ತಿ ತೋರಿಸಿ ಸಂಭ್ರಮಿಸುವ ವಿಡಿಯೋ ಒಂದು ವೈರಲ್ ಆಗಿದೆ. ‘ಇಂಜಿನಿಯರುಗಳು ಮತ್ತು ಕಾರ್ಮಿಕರ ಉಚ್ಚಮಟ್ಟದ ಕಸುಬುದಾರಿಕೆ’ ಎಂಬ ಒಕ್ಕಣೆಯಿರುವ ಈ ವಿಡಿಯೋವನ್ನು ತನ್ಸುಯೆಗೆನ್ ಎನ್ನುವವರು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಕಟ್ಟಡ ಕಟ್ಟುವವರು, ರಸ್ತೆ ನಿರ್ಮಿಸುವವರು, ಕೈಗಾರಿಕೆಯ ಕೆಲಸಗಾರದು ಹೀಗೆ ಒಟ್ಟಾರೆ ಶ್ರಮಜೀವಿಗಳು ಭೌತಶಾಸ್ತ್ರದ ತತ್ವಗಳ ಪ್ರಾತ್ಯಕ್ಷಿಕ ಬಳಕೆಯಿಂದ, ತಮ್ಮ ವಿಚಾರ ಶಕ್ತಿಯಿಂದ, ಅರಿವಿನಿಂದ, ಒಮ್ಮೊಮ್ಮೆ ತಕ್ಕುದಾದ ಸಲಕರಣೆಗಳನ್ನು ಸಹಾಯಕ್ಕೆ ತೆಗೆದುಕೊಂಡು ತಮ್ಮ ಕಠಿಣವಾದ ಕೆಲಸಗಳನ್ನು ಅಚ್ಚರಿಯೆನ್ನಿಸುವಷ್ಟು ಸುಲಭವಾಗಿಯೂ ಅಚ್ಚುಕಟ್ಟಾಗಿಯೂ ನೆರವೇರಿಸುವ ತುಣುಕುಗಳು ಕಾಣುತ್ತವೆ.
Engineers and builders at the professional level?
ಇದನ್ನೂ ಓದಿ— Tansu YEĞEN (@TansuYegen) July 27, 2023
ಕಬ್ಬಿಣದ ಪೈಪುಗಳನ್ನು ಒಂದೊಂದಾಗಿ ಎತ್ತಿಳಿಸಿ ಸಾಗಿಸುವ ಬದಲು ಅವುಗಳ ಮೇಲೆಯೇ ಸ್ಕೇಟಿಂಗ್ ಮಾಡಿ ಉರುಳಿಸುತ್ತ ಸಾಗಿಸುವುದನ್ನು ಕಾಣುತ್ತೇವೆ. ಗೋಡೆಗೆ ಬಣ್ಣ ಉಗ್ಗಿ ಸೂಕ್ತ ಅಳತೆಯ ಹಲಗೆಯಿಂದ ಕ್ಷಣಾರ್ಧದಲ್ಲಿ ಬಣ್ಣ ಹಚ್ಚಿ ಮುಗಿಸುವುದು, ಅರೆನಿರ್ಮಿತ ಕಟ್ಟಡದ ಬೇರೆ ಬೇರೆ ಹಂತಗಳಲ್ಲಿ ನಿಂತ ಕೆಲಸಗಾರರು ತಮ್ಮ ಚಲನೆಗಳನ್ನು ಮೇಳೈಸಿ ಚಕಚಕನೇ ನೆಲದಿಂದ ಆರಾಳೆತ್ತರಕ್ಕೆ ಕಲಸಿದ ಸಿಮೆಂಟ್ ಸಾಗಿಸುವುದು, ಹೇಗೆ ನೋಡಿದರೆ ನೊಡುತ್ತಲೇ ಇರಬೇಕೆನ್ನುವ ಕಲಾಗಾರಿಕೆ ಉದ್ದಕ್ಕೂ ತೋರುತ್ತದೆ.
ಇದನ್ನೂ ಓದಿ : Viral Video: ನಾಯಿಗೂ ಒಂದು ದಿನ ಬರುತ್ತದೆ ಎಂದು ಕೇಳಿದ್ದಿರಲ್ಲ, ಈಗ ನೋಡಿ!
ಈ ವಿಡಿಯೋ ಅನ್ನು ಈತನಕ ಸುಮಾರು 4.6 ಮಿಲಿಯನ್ ಜನರು ನೋಡಿದ್ದಾರೆ. 1000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. 18 ಸಾವಿರಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಇಂಥ ಕೆಲಸಗಳನ್ನು ಮಾಡುವುದು ನನಗೂ ಇಷ್ಟ ಎಂದು ಅನೇಕರು ಹೇಳಿದ್ದಾರೆ. ಅಯ್ಯೋ ಇಷ್ಟು ದೊಡ್ಡ ವಿಡಿಯೋ ಅನ್ನು ಕೊನೇತನಕ ನೋಡಲು ಯಾರಿಗೆಲ್ಲ ತಾಳ್ಮೆ ಇತ್ತು ಎಂದು ಮತ್ತೊಂದಿಷ್ಟು ಜನ ಕೇಳಿದ್ದಾರೆ.
ಇದನ್ನೂ ಓದಿ : Viral: ಬಿಹಾರ್; ತನಗೆ ಎರಡೇ ಮಕ್ಕಳು ಎಂದು ಸುಳ್ಳು ಹೇಳಿದ್ದ ಛಾಪ್ರಾ ಮೇಯರ್ ಇದೀಗ ವಜಾ
ಎಂಥದ್ದೇ ಶ್ರಮದ ಅಥವಾ ದಿನನಿತ್ಯದ ಬೇಸರದ ಕೆಲಸಗಳನ್ನೂ ದಕ್ಷತೆಯಿಂದಷ್ಟೇ ಅಲ್ಲ ಆಟವಾಡುತ್ತ ಉಲ್ಲಾಸದಿಂದ ಮಾಡಬಹುದು ಎಂಬುದಕ್ಕೆ ಇದು ನಿದರ್ಶನವೇ? ನೋಡಿ ನಿಮಗೇನೆನ್ನಿಸಿತು ತಿಳಿಸಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ