Viral Video: ಟ್ವಿಟರ್ ಪ್ರಧಾನ ಕಚೇರಿಯ ಮೇಲೆ ಎಕ್ಸ್​ ಲೋಗೋ; ಭವಿಷ್ಯ ಉಜ್ವಲವಾಗಿದೆ ಎಂದ ನೆಟ್ಟಿಗರು

Elon Musk : ಸ್ಯಾನ್​ ಫ್ರಾನ್ಸಿಸ್ಕೋದ ಟ್ವಿಟರ್​ ಪ್ರಧಾನ ಕಚೇರಿಯ ಮೇಲೆ ಟ್ವಿಟರ್​ನ ಹೊಸ ಲಾಂಛನ ಸ್ಥಾಪನೆಗೆ ಸಂಬಂಧಿಸಿದವರ ಪರವಾನಿಗೆಯನ್ನು ಕಂಪೆನಿಯು ತೆಗೆದುಕೊಂಡಿಲ್ಲ ಎಂಬ ತಕರಾರು ಕೇಳಿಬಂದಿದೆ.

Viral Video: ಟ್ವಿಟರ್ ಪ್ರಧಾನ ಕಚೇರಿಯ ಮೇಲೆ ಎಕ್ಸ್​ ಲೋಗೋ; ಭವಿಷ್ಯ ಉಜ್ವಲವಾಗಿದೆ ಎಂದ ನೆಟ್ಟಿಗರು
ಸ್ಯಾನ್​ಫ್ರಾನ್ಸಿಸ್ಕೋದ ಟ್ವಿಟರ್ ಪ್ರಧಾನ ಕಚೇರಿಯ ಮೇಲೆ ಹೊಸ ಲಾಂಛನ X ಸ್ಥಾಪನೆಗೊಂಡಿದೆ.
Follow us
|

Updated on:Jul 29, 2023 | 6:09 PM

San Francisco : ಟ್ವಿಟರ್​​​ ತೆರೆದಾಕ್ಷಣ ಆಕಾಶನೀಲಿಯ ಪುಟ್ಟ ಪಕ್ಷಿ ಎದುರುಗೊಳ್ಳುತ್ತಿತ್ತು. ಆದರೆ ಎಲಾನ್ ಮಸ್ಕ್​​  (Elon Musk) ಒಡೆತನದಲ್ಲೀಗ ಕಪ್ಪು ಹಿನ್ನೆಲೆಯ ಬಿಳಿಗೆಂಪಿನ X ಲಾಂಛನ ಸ್ವಾಗತಿಸುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಶನಿವಾರ ರಾತ್ರಿ ಸ್ಯಾನ್​​ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟರ್​ ಮುಖ್ಯ ಕಚೇರಿಯ ಮೇಲೆ ದೈತ್ಯಾಕಾರದ ಈ ಹೊಸ ಲಾಂಛನವು ಎಲ್​ಇಡಿ ಲೈಟಿನಿಂದ ಝಗಮಗಿಸಲಾರಂಭಿಸಿದೆ. ಮಸ್ಕ್​ ಈ ವಿಡಿಯೋ ಅನ್ನು ಟ್ವಿಟ್ ಮಾಡಿದ್ದಾರೆ. ಈ ವಿಡಿಯೋದಡಿ ನೆಟ್ಟಿಗರು ಪ್ರತಿಕ್ರಿಯಿಸುತ್ತ, ‘ಭವಿಷ್ಯ ಉಜ್ವಲವಾಗಿದೆ!’ ಎಂದಿದ್ದಾರೆ.

ಇಂದು ಮಧ್ಯಾಹ್ನ 2.21 ನಿಮಿಷಕ್ಕೆ ಟ್ವೀಟ್ ಮಾಡಿದ ಈ ವಿಡಿಯೋ ಅನ್ನು ಈಗಾಗಲೇ 4.6 ಮಿಲಿಯನ್ ಜನರು ನೋಡಿದ್ದಾರೆ. ಸುಮಾರು 80,000ಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 10,000 ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ಕೂಲ್​, ಗಾರ್ಜಿಯಸ್, ಬ್ರೈಟ್​​ ಎಂದು ಪ್ರತಿಕ್ರಿಯಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Viral: ಬಾರ್ಬಿ: ಗುಲಾಬಿ ಜ್ವರ ಮೋದಿ, ಸೋನಿಯಾ, ರಾಹುಲ್, ಲಾಲೂ ಇನ್ನ್ಯಾರಿಗೆಲ್ಲ?

ಆದರೆ, ಯಾವುದೇ ಕಂಪೆನಿಯು ಕಟ್ಟಡದ ಮೇಲೆ ಬೃಹತ್​ಗಾತ್ರದ ಲಾಂಛನವನ್ನು ಸ್ಥಾಪಿಸುವ ಮುನ್ನ ಕಟ್ಟಡದ ಪಾರಂಪರಿಕತೆಗೆ  ಧಕ್ಕೆ ಬರದಂತೆ ಸಂಬಂಧಿಸಿದ ಇಲಾಖೆಯಿಂದ ಪರವಾನಿಗೆ ತೆಗೆದುಕೊಳ್ಳಬೇಕಾಗುತ್ತದೆ. ಕಂಪೆನಿಯ ಅಕ್ಷರ ಅಥವಾ ಲಾಂಛನವು ಬದಲಾವಣೆಯಾದಾಗ ಬೃಹತ್​ ಗಾತ್ರದ ಲಾಂಛನವನ್ನು ಸ್ಥಾಪಿಸುವಾಗಲೂ ಇದೇ ನಿಯಮವನ್ನು ಅನುಸರಿಸಬೇಕಾಗುತ್ತದೆ. ಆದರೆ ಪ್ರಸ್ತುತ ಲಾಂಛನ X ಸ್ಥಾಪನೆಯು ಅನುಮತಿ ಇಲ್ಲದೆಯೇ ಆಗಿದೆ. ಈ ಹಿನ್ನೆಲೆಯಲ್ಲಿ ನಗರಾಡಳಿತವು ಈ ಕುರಿತು ತನಿಖೆ ಶುರು ಮಾಡಿತ್ತು.

ಇದನ್ನೂ ಓದಿ : Viral: ಚಪಾತಿಯಲ್ಲಿ ಜಿರಳೆಮರಿ; ವಂದೇ ಭಾರತ್​​​ನಿಂದ ಪ್ರಯಾಣಿಕರೊಬ್ಬರಿಗೆ ಉಚಿತ ಕೊಡುಗೆ

ಲಾಂಛನವನ್ನು ಬದಲಾಯಿಸುವ ವಿಷಯವನ್ನು ಮಸ್ಕ್ ಕಳೆದವಾರ ಘೋಷಿಸಿದಾಗ ಪೊಲೀಸರು ಸೋಮವಾರದಂದು ಕಟ್ಟಡದ ಮೇಲಿದ್ದ ನೀಲಿಹಕ್ಕಿಯ ಹಳೆಯ ಲಾಂಛನವನ್ನು ತೆಗೆಯದಂತೆ ತಡೆಹಿಡಿದಿದ್ದರು. ಆದಾಗ್ಯೂ ಶುಕ್ರವಾರ ಎಲ್‌ಇಡಿ ಲೈಟ್​ವುಳ್ಳ ಹೊಸ ಲಾಂಛನ X ಕಟ್ಟಡದ ಮೇಲೆ ಸ್ಥಾಪನೆಗೊಂಡಿತ್ತು. ಇದು ಎಷ್ಟೊಂದು ಭದ್ರವಾಗಿ ಸ್ಥಾಪಿತಗೊಂಡಿದೆ ಎನ್ನುವುದು ತಿಳಿದು ಬಂದಿಲ್ಲ, ಅಕಸ್ಮಾತ್​ ಅದು ಬಿದ್ದರೆ ಪಾದಚಾರಿಗಳಿಗೆ ತೊಂದರೆಯಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದರು.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 6:08 pm, Sat, 29 July 23

ತಾಜಾ ಸುದ್ದಿ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ದರ್ಶನ್​ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ಭಾವನಾ
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಆಟೋರಿಕ್ಷಾ ದರವೂ ಹೆಚ್ಚಳವಾಗಲಿದೆಯೇ? ರಾಮಲಿಂಗಾರೆಡ್ಡಿ ಹೇಳುವಂತೆ ಹೌದು!
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹೈಕಮಾಂಡ್ ಹೇಳಿದ್ದನ್ನು ರಾಜ್ಯದ ನಾಯಕರಿಗೆ ಜ್ಞಾಪಿಸುತ್ತಿದ್ದೇನೆ: ರಾಜಣ್ಣ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಹಾಲಿನ ದರ ಏರಿಕೆ ಹಣ ರೈತರಿಗೆ ಹೋಗೋದು ಬಿಜೆಪಿ ನಾಯಕರಿಗೆ ಇಷ್ಟವಿಲ್ಲ:ಡಿಕೆಶಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಕೆಂಪೇಗೌಡ ಜಯಂತಿ; ನಮ್ಮ ಹೆಸರಿಲ್ಲದಿರುವುದು ದೊಡ್ಡ ವಿಷಯವಲ್ಲ: ಕುಮಾರಸ್ವಾಮಿ
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಮುಸ್ಲಿಂ ವೋಟು ವನ್-ಸೈಡೆಡ್ ಆಗಿ ಸಾಗರ್ ಸಿಕ್ಕಿದ್ದು ಅಂತ ಹೇಳಿದ್ದು: ಜಮೀರ್
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಉಡುಪಿ: ಬಿರುಸುಗೊಂಡ ಮುಂಗಾರು ಮಳೆ; ಕಾಪು, ಮಲ್ಪೆ ಕಡಲ ಕಿನಾರೆ ಪ್ರಕ್ಷುಬ್ಧ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
ಸಂಸತ್ ಭವನದಲ್ಲಿ ಪರಸ್ಪರ ಕೈ ಕುಲುಕಿದ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
‘ದರ್ಶನ್ ಇರುವ ಫ್ಲೋರ್​ನಲ್ಲಿ ಹೆಣ್ಣು ಮಕ್ಕಳು ಇರುವಂತಿರಲಿಲ್ಲ’
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್
ವಿರೋಧ ಪಕ್ಷದ ನಾಯಕ ಆರ್ ಅಶೋಕರನ್ನು ತರಾಟೆಗೆ ತೆಗೆದುಕೊಂಡ ಹೆಚ್ ವಿಶ್ವನಾಥ್