Viral: ಚಪಾತಿಯಲ್ಲಿ ಜಿರಳೆಮರಿ; ವಂದೇ ಭಾರತ್​​​ನಿಂದ ಪ್ರಯಾಣಿಕರೊಬ್ಬರಿಗೆ ‘ಉಚಿತ ಕೊಡುಗೆ’

IRCTC : ಸೇವೆ ಎಂಬ ಹೆಸರಲ್ಲಿ ಲಾಭ ಮಾಡಿಕೊಳ್ಳಲು ಹೋದರೆ ಹೀಗೇ ಆಗುವುದು. ಐಆರ್​ಸಿಟಿಸಿಯಿಂದಾಗಿ ಪ್ರಯಾಣಿಕರ ಒಟ್ಟಾರೆ ನೆಮ್ಮದಿ ಹಾಳಾಗಿದೆ, ಬದಲಿ ವ್ಯವಸ್ಥೆ ಮಾಡಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

Viral: ಚಪಾತಿಯಲ್ಲಿ ಜಿರಳೆಮರಿ; ವಂದೇ ಭಾರತ್​​​ನಿಂದ ಪ್ರಯಾಣಿಕರೊಬ್ಬರಿಗೆ 'ಉಚಿತ ಕೊಡುಗೆ'
ವಂದೇ ಭಾರತ ರೈಲಿನ ಚಪಾತಿಯಲ್ಲಿ ಜಿರಳೆಮರಿ
Follow us
|

Updated on:Jul 29, 2023 | 4:28 PM

Vande Bharath Express : ವಂದೇ ಭಾರತ ಎಕ್ಸ್​ಪ್ರೆಸ್​ ರೈಲಿನಲ್ಲಿ ಭೋಪಾಲ್​ನಿಂದ ಗ್ವಾಲಿಯರ್​ಗೆ ಪ್ರಯಾಣಿಸುತ್ತಿದ್ದ ಸುಬೋಧ್​ ಪಹಲಾಜನ್​ ಎಂಬ ಪ್ರಯಾಣಿಕರಿಗೆ ಎಸ್​ಆರ್​ಸಿಟಿಸಿ ಸಿಬ್ಬಂದಿಯಿಂದ ಊಟವನ್ನು ಪಡೆದುಕೊಂಡಿದ್ದಾರೆ. ಇನ್ನೇನು ಊಟ ಮಾಡಬೇಕು ಚಪಾತಿಯಲ್ಲಿ ಸತ್ತ ಜಿರಳೆಮರಿಯೊಂದು ಕಣ್ಣಿಗೆ ಬಿದ್ದಿದೆ. ಸುಬೋಧ ತಡಮಾಡದೆ ಟ್ವೀಟ್​ ಮೂಲಕ ಐಆರ್​ಸಿಟಿಸಿಯ ಕಳಪೆ ಸೇವೆಯ (IRCTC) ಕುರಿತು ರೈಲ್ವೇ ಇಲಾಖೆಯ ಗಮನ ಸೆಳೆದಿದ್ದಾರೆ. ನೆಟ್ಟಿಗರು ಈ ಟ್ವೀಟಿನಡಿ ತಾವು ಎದುರಿಸಿದ ಅನುಭವಗಳನ್ನೂ ಹಂಚಿಕೊಂಡು ಭಾರತೀಯ ರೈಲ್ವೆ ಇಲಾಖೆಯ ಬಗ್ಗೆ ಕಿಡಿಕಾರಿದ್ಧಾರೆ.

ರೈಲ್ವೆ ಸೌಲಭ್ಯ, ಸ್ವಚ್ಛತೆ ಮತ್ತು ಸೇವೆಗಳ ಬಗ್ಗೆ ತಕರಾರು ಹೊಸದೇನಲ್ಲ. ಅದರಲ್ಲೂ ಸಾಮಾಜಿಕ ಜಾಲತಾಣಗಳ ಮೂಲಕವಂತೂ ಆಗಾಗ ಇವು ಚರ್ಚೆಯಾಗುತ್ತಲೇ ಇರುತ್ತವೆ. ವಂದೇಭಾರತ ರೈಲುಗಳ ಅವ್ಯವಸ್ಥೆಯ ಬಗೆಗೂ ಮೇಲಿಂದ ಮೇಲೆ ತಕರಾರುಗಳು ಸಾಕ್ಷಿಸಮೇತ ಕೇಳಿಬರುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಅನ್ನು ಜು. 24ರಂದು ಟ್ವೀಟ್ ಮಾಡಲಾಗಿದೆ.

ಇದನ್ನೂ ಓದಿ : Viral Video: ದೆಹಲಿ ಮೆಟ್ರೋ; ಈ ಎರಡೂ ರೀಲ್​​ಗಳ ಬಗ್ಗೆ ನಿಮ್ಮ ಅಭಿಪ್ರಾಯ ಬೇಕಿದೆ

ಈ ಪೋಸ್ಟ್​ ಅನ್ನು ಸುಮಾರು 17,300 ಜನರು ನೋಡಿದ್ದಾರೆ. 90 ಜನರು ರೀಟ್ವೀಟ್ ಮಾಡಿದ್ದಾರೆ. ವಂದೇಭಾರತ ರೈಲಿನಲ್ಲಿ ಯಾವ ವ್ಯವಸ್ಥೆ ಸರಿ ಇದೆ ಹೇಳಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಈ ರೈಲಿನಲ್ಲಿರುವ ಆಹಾರಸೇವೆಗಳ ಪರವಾನಿಗೆಯನ್ನು ದಯವಿಟ್ಟು ರದ್ದುಪಡಿಸಿ. ಇಲ್ಲಿರುವವರೆಲ್ಲರೂ ಊಟವನ್ನೇನೋ ಮಾಡಿಯಾಗಿದೆ. ಈಗ ಹೆಚ್ಚೂ ಕಡಿಮೆಯಾದರೆ ಏನು ಮಾಡುವುದು ಎಂದು ಒಬ್ಬರು ಕೇಳಿದ್ದಾರೆ.

ಇದನ್ನೂ ಓದಿ : Viral Video: ವೈಪರ್ ವಿಥ್ ಸ್ಟಿಕರ್​; ಈ ಕಾರ್​ನಿಂದ ಅದೆಷ್ಟು ಅಪಘಾತಗಳಾಗಿವೆಯೋ

ಸೇವೆ ಎಂಬ ಪದವನ್ನು ‘ಲಾಭದಾಯಕತೆ’ಯು ಆವರಿಸಿದಾಗ ಇಂಥವೆಲ್ಲ ಸಂಭವಿಸುತ್ತವೆ. ಇದು ಪ್ರಪಂಚದಾದ್ಯಂತ ಆವರಿಸಿದೆ. ವಾಸ್ತವದ ಸಮಸ್ಯೆಗಳನ್ನು ಎದುರಿಸಲು ನೀವು ಸಿದ್ಧರಾಗಿ ಎಂದು ಮತ್ತೊಬ್ಬರು ಹೇಳಿದ್ದಾರೆ. ರಾಜಧಾನಿ ರೈಲಿನ ಎಸಿ ಕೋಚ್​ನಲ್ಲಿ ಊಟದ ವಿಷಯವಾಗಿ ಮಾತನಾಡುವುದೇ ಬೇಡ ಎಂದಿದ್ದಾರೆ ಮಗದೊಬ್ಬರು.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:26 pm, Sat, 29 July 23

ತಾಜಾ ಸುದ್ದಿ
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ
ಸೆಂಟ್ರಲ್ ಜೈಲಿನ ಬಳಿ ಬಂದ ಕುಡುಕನಿಗೆ ದರ್ಶನ್ ರನ್ನು ನೋಡಲೇಬೇಕೆಂಬ ಹಠ
ಸೆಂಟ್ರಲ್ ಜೈಲಿನ ಬಳಿ ಬಂದ ಕುಡುಕನಿಗೆ ದರ್ಶನ್ ರನ್ನು ನೋಡಲೇಬೇಕೆಂಬ ಹಠ
ರಾಹುಲ್ ಮಾತಾಡುವಾಗ ಮೈಕ್ ಆಫ್ ಮಾಡಲಾಯಿತೆಂಬ ಆರೋಪ ಸುಳ್ಳು: ಶೋಭಾ ಕರಂದ್ಲಾಜೆ
ರಾಹುಲ್ ಮಾತಾಡುವಾಗ ಮೈಕ್ ಆಫ್ ಮಾಡಲಾಯಿತೆಂಬ ಆರೋಪ ಸುಳ್ಳು: ಶೋಭಾ ಕರಂದ್ಲಾಜೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಾಟಿ ಕಾರಿಗೆ ಡಿಕ್ಕಿ ಹೊಡೆದ KSRTC ಬಸ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ದಾಟಿ ಕಾರಿಗೆ ಡಿಕ್ಕಿ ಹೊಡೆದ KSRTC ಬಸ
ನಿನ್ನೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಸೋಮಣ್ಣರಿಂದ ಇಂದು ಬೆಂಗಳೂರಲ್ಲಿ ಸಭೆ
ನಿನ್ನೆ ದೆಹಲಿಯಲ್ಲಿದ್ದ ಕೇಂದ್ರ ಸಚಿವ ಸೋಮಣ್ಣರಿಂದ ಇಂದು ಬೆಂಗಳೂರಲ್ಲಿ ಸಭೆ
ದೈವ ಕ್ಷೇತ್ರದಲ್ಲಿ ಪವಾಡ; ಆಫ್ ಮಾಡಿದ್ದರೂ ತನ್ನಂತಾನೆ ಚಲಿಸಿದ ಆಟೋ
ದೈವ ಕ್ಷೇತ್ರದಲ್ಲಿ ಪವಾಡ; ಆಫ್ ಮಾಡಿದ್ದರೂ ತನ್ನಂತಾನೆ ಚಲಿಸಿದ ಆಟೋ
ಸಿಎಂ/ಡಿಸಿಎಂ ಅಗಬೇಕೆನ್ನುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ:ಡಿಕೆ ಸುರೇಶ್
ಸಿಎಂ/ಡಿಸಿಎಂ ಅಗಬೇಕೆನ್ನುವವರು ಮತ್ತೊಮ್ಮೆ ಚುನಾವಣೆ ಎದುರಿಸಲಿ:ಡಿಕೆ ಸುರೇಶ್
ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ಹೇಳಿದ್ದು: ಚಂದ್ರಶೇಖರನಾಥ ಸ್ವಾಮೀಜಿ
ಶಿವಕುಮಾರ್ ಸಿಎಂ ಆಗಬೇಕು ಎಂದಷ್ಟೇ ಹೇಳಿದ್ದು: ಚಂದ್ರಶೇಖರನಾಥ ಸ್ವಾಮೀಜಿ