Viral Video: ಬಂಡೀಪುರ; ಸ್ಕ್ರೀನ್ ಬಿಟ್ಟು ಕಾಡಿನ ದಾರಿ ಹಿಡಿಯಬೇಕು ಎನ್ನಿಸುತ್ತಿಲ್ಲವೆ?

Tiger : ಗುಬ್ಬಿಯಿಂದ ಆನೆಯವರೆಗೂ ಮಳೆ ಎನ್ನುವುದು ಪುಳಕ ತರುವಂಥದ್ದು. ಈಗ ಬಂಡೀಪುರಕ್ಕೆ ಹೋದರೆ ಹುಲಿ, ಚಿರತೆ, ಕರಡಿಯಂಥ ದೈತ್ಯಪ್ರಾಣಿಗಳು ಮಳೆಗಾಲವನ್ನು ಹೇಗೆ ಕಳೆಯುತ್ತಿವೆ ಎಂದು ನೋಡಬಹುದಾಗಿದೆ.

Viral Video: ಬಂಡೀಪುರ; ಸ್ಕ್ರೀನ್ ಬಿಟ್ಟು ಕಾಡಿನ ದಾರಿ ಹಿಡಿಯಬೇಕು ಎನ್ನಿಸುತ್ತಿಲ್ಲವೆ?
ಬಂಡೀಪುರದ ರಾಷ್ಟ್ರೀಯ ಉದ್ಯಾನವನದಲ್ಲಿ ಮಳೆನೀರು ಕುಡಿಯುತ್ತಿರುವ ಹುಲಿ
Follow us
|

Updated on:Jul 29, 2023 | 2:06 PM

Bandipur : ಬಾಲ್ಯದಲ್ಲಿ ಧೋ ಎಂದು ಸುರಿದು ನಿಂತ ಮಳೆಗೆ ಅಂಗಳದಲ್ಲಿ ಅಲ್ಲಲ್ಲಿ ಸಣ್ಣಸಣ್ಣ ನೀರಗುಂಡಿಗಳು ಸೃಷ್ಟಿಯಾಗುತ್ತಿದ್ದವು. ಆಕಾಶ ಕಾಣುವಷ್ಟು ತಿಳಿಯಾದ ಆ ನೀರಿನಲ್ಲಿ ಗುಬ್ಬಚ್ಚಿಗಳು ಸ್ನಾನ ಮಾಡಿ ನೀರು ಕುಡಿದು ಪುರ್ ಎಂದು ಹಾರಿ ಹೋಗುತ್ತಿದ್ದವು. ಪ್ರಕೃತಿಯ ಇಂಥ ಸಣ್ಣಪುಟ್ಟ ಬೆರಗು  ಮೈಮನಸ್ಸೆಲ್ಲ ಪುಳಕಗೊಳಿಸುತ್ತಿತ್ತು. ಈ ದೃಶ್ಯಗಳು ಈಗಲೂ ಇವೆ. ಆದರೆ ನಾವು ಎಲ್ಲಿ ಕಳೆದುಹೋಗಿದ್ದೇವೆ? ಮತ್ತೆ ಮತ್ತೆ ಹೇಳಬೇಕಿಲ್ಲ. ಚೈತನ್ಯ ತುಂಬುವ ಇಂಥ ದೃಶ್ಯಗಳಿಗಾಗಿ ಖಂಡಿತ ಸಮಯ ಮಾಡಿಕೊಳ್ಳಲೇಬೇಕು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ, ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ (Bandkpur National Park) ಬಿದ್ದ ಮಳೆ ಮತ್ತು ಅದರಿಂದ ಉಂಟಾದ ನೀರಗುಂಡಿಯಲ್ಲಿ ಹುಲಿಯೊಂದು ನೀರು ಕುಡಿಯುತ್ತಿದೆ.

ಐಎಫ್‌ಎಸ್ ಅಧಿಕಾರಿ ರಮೇಶ್ ಪಾಂಡೆ ಇದನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈತನಕ 3,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದು, ಸುಮಾರು 400 ಜನರು ರೀಟ್ವೀಟ್ ಮಾಡಿದ್ದಾರೆ. ಮಳೆಗಾಲದಲ್ಲಿ ವನ್ಯಜೀವಿಗಳನ್ನು ಮತ್ತು ಅವುಗಳ ಜೀವನಶೈಲಿಯನ್ನು ನೋಡಬೇಕೆಂದರೆ ಬಂಡೀಪುರಕ್ಕೆ ಹೋಗಲೇಬೇಕು ಎನ್ನುವಂತಿದೆ ಈ ವಿಡಿಯೋ.

ಇದನ್ನೂ ಓದಿ : Viral Video: ಡಿಜಿಟಲ್ ಭಿಕ್ಷೆ; ಸ್ಲೀಪರ್ ಕೋಚ್​ನಲ್ಲಿಯೂ ರೀಲಿಗರ ಹಾವಳಿ; ಕಿಡಿಕಾರಿದ ನೆಟ್ಟಿಗರು

ಇಡೀ ದೇಶದಲ್ಲಿ ಅತೀ ಹೆಚ್ಚು ಹುಲಿಗಳನ್ನು ಹೊಂದಿದ ರಾಜ್ಯ ಕರ್ನಾಟಕ. ಅಷ್ಟೇ ಏಕೆ ಚಿರತೆ, ಆನೆ, ಕರಡಿ, ಸಾಂಬಾರ್​​ ಪ್ರಾಣಿಗಳನ್ನು ಬಂಡೀಪುರ ಅರಣ್ಯದಲ್ಲಿ ಕಾಣಬಹುದು. ಹಲವಾರು ಥರದ ಪಕ್ಷಿಗಳನ್ನೂ. ತಂಪಾದ ವಾತಾವರಣ ಮತ್ತು ಪ್ರಯಾಣ ಜೊತೆಗೆ ಪ್ರಾಣಿ ಪಕ್ಷಿಗಳ ಅಪರೂಪದ ದೃಶ್ಯಗಳನ್ನೂ ಇಲ್ಲಿ ನೋಡಬಹುದಾಗಿದೆ.

ಇದನ್ನೂ ಓದಿ : Viral Video: ವೈಪರ್ ವಿಥ್ ಸ್ಟಿಕರ್​; ಈ ಕಾರ್​ನಿಂದ ಅದೆಷ್ಟು ಅಪಘಾತಗಳಾಗಿವೆಯೋ

ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. ಇದು ಅಪರೂಪದ ದೃಶ್ಯ, ಹೀಗೆ ಸೆರೆಹಿಡಿದಿರುವ ಅರಣ್ಯ ಸಿಬ್ಬಂದಿ ಕಾರ್ಯ ಮೆಚ್ಚುವಂಥದ್ದು. ಕಾಡಿನ ಸೌಂದರ್ಯವನ್ನು ಸೆರೆಹಿಡಿಯಲು ಅಪಾರ ತಾಳ್ಮೆ ಮತ್ತು ಜ್ಞಾನ ಬೇಕು, ಇದು ಕೆಲವರಿಗಷ್ಟೇ ಸಿದ್ಧಿಸುತ್ತದೆ. ಈ ವಿಡಿಯೋಗಾಗಿ ಧನ್ಯವಾದ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:03 pm, Sat, 29 July 23

ತಾಜಾ ಸುದ್ದಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು