Viral Video: ಅಲ್ಝೈಮರ್​; ‘ಅಪ್ಪಾ, ನಮ್ಮ ನೌಕಾಯಾನದ ನೆನಪಿದೆಯೇ, ಈ ಟ್ಯಾಟೂ ನೋಡಿ’

Father Daughter : ಈಕೆಯ ಈ ಸೃಜನಶೀಲ ಮತ್ತು ಆಪ್ತ ಆಲೋಚನೆ ನೆಟ್ಟಿಗರನ್ನು ಪ್ರೇರೇಪಿಸುತ್ತಿದೆ. ಈಕೆಗೆ ತನ್ನ ತಂದೆಯ ಬಗೆಗೆ ಇರುವ ಪ್ರೀತಿ, ಕರುಣೆಯನ್ನು ಕಂಡು ಅವರು ಮೂಕರಾಗುತ್ತಿದ್ದಾರೆ. ಕೆಲವರಂತೂ ಕಣ್ಣೀರಾಗಿದ್ದಾರೆ.

Viral Video: ಅಲ್ಝೈಮರ್​; 'ಅಪ್ಪಾ, ನಮ್ಮ ನೌಕಾಯಾನದ ನೆನಪಿದೆಯೇ, ಈ ಟ್ಯಾಟೂ ನೋಡಿ'
ಅಲ್ಝೈಮರ್​ಗೆ ಈಡಾದ ತನ್ನ ತಂದೆಗೆ ತನ್ನ ಟ್ಯಾಟೂ ತೋರಿಸುತ್ತಿರುವ ಮಗಳು
Follow us
ಶ್ರೀದೇವಿ ಕಳಸದ
|

Updated on:Aug 05, 2023 | 1:06 PM

Alzheimer : ‘ನಾನು ಕೇವಲ 17 ವರ್ಷದವಳಿದ್ದಾಗ ನನ್ನ ತಂದೆ ಅಲ್ಝೈಮರ್​ಗೆ (ಮರೆವಿನ ಕಾಯಿಲೆ) ಈಡಾದರು. ಬಹಳ ಬೇಸರವಾಯಿತು. ನಾನು ಹಾಕಿಸಿಕೊಳ್ಳಬೇಕಾದ ಟ್ಯಾಟೂವನ್ನು (Tattoo) ಕ್ಲಾಸಿನಲ್ಲಿ ಕುಳಿತೇ ವಿನ್ಯಾಸ ಮಾಡಿದೆ. ಎರಡು ಅಲೆಗಳನ್ನು ಆ ವಿನ್ಯಾಸ ಸಾಂಕೇತಿಸುತ್ತಿತ್ತು. ನಾನು ಅಪ್ಪನೊಂದಿಗೆ ಮಾಡಿದ ನೌಕಾಯಾನದ ನೆನಪು ಅದಾಗಿತ್ತು. ಅಪ್ಪನ ಪ್ರೀತಿಯನ್ನು ಎಂದಿಗೂ ಅಮೂಲ್ಯ, ಮರೆಯಲಾಗದು’; ಮಗಳೀಗ ತನ್ನ ಬಲತೋಳಿನ ಮೇಲೆ ಟ್ಯಾಟೂಹಾಕಿಸಿಕೊಂಡು ಅಪ್ಪನಿಗೆ ತೋರಿಸಿ ವಿವರಿಸಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ಆಪ್ತ ಮತ್ತು ಅಪೂರ್ವವಾದ ವಿಡಿಯೋ ನೆಟ್ಟಿಗರ ಹೃದಯವನ್ನು ಮೆತ್ತಗಾಗಿಸುತ್ತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Good News Movement (@goodnews_movement)

ಈ ಪೋಸ್ಟ್​ ಅನ್ನು ಆ.1 ರಂದು ಇನ್​ಸ್ಟಾನಲ್ಲಿ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 4 ಮಿಲಿಯನ್ ಜನರು ಇದನ್ನು ನೋಡಿದ್ದಾರೆ. 3.6 ಲಕ್ಷಕ್ಕಿಂತ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ತಂದೆಗಾಗಿ ನೀವು ಇದನ್ನು ಮಾಡಿದ್ದು ಬಹಳ ಸೂಕ್ತವಾಗಿದೆ, ನೀವು ಕರುಣಾಮಯಿಗಳು ಎಂದಿದ್ದಾರೆ ಒಬ್ಬರು. ನನ್ನ ಅಜ್ಜಿ ಬುದ್ಧಿಮಾಂದ್ಯತೆಯಿಂದ ತೀರಿದರು, ಈ ವಿಡಿಯೋ ನೋಡಿ ಅಜ್ಜಿ ನೆನಪಾದರು ಎಂದಿದ್ದಾರೆ ಮತ್ತೊಬ್ಬರು. ನಿಜಕ್ಕೂ ನಾನಿಲ್ಲಿ ಅಳುತ್ತಿದ್ದೇನೆ, ಇದಕ್ಕಿಂತ ದೊಡ್ಡ ಗೌರವ ಬೇಕೆ ತಂದೆಗೆ? ನಿಮ್ಮ ಆಲೋಚನೆ ಬಹಳ ಸುಂದರ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral: ತಮ್ಮನ ಡೈರಿ ಪುಟ ಹಂಚಿಕೊಂಡ ಅಕ್ಕ; ನಿಜವಾಗಲೂ ನೀವೀಗ ಮೂರ್ಖ ಅಕ್ಕನೇ ಎನ್ನುತ್ತಿರುವ ನೆಟ್ಟಿಗರು

ಈ ಹಚ್ಚೆಯಿಂದ ಅವರಿಗೆ ಕ್ಷಣಕಾಲವಾದರೂ ನೆನಪು ಮರಳಿ ಕಣ್ಣುಕ್ಕಿತ್ತಲ್ಲ ಇದಕ್ಕಿಂತ ಹೆಚ್ಚಿನದು ಒಂದು ಸಂಬಂಧದಲ್ಲಿ ಏನಿದೆ? ಎಂದಿದ್ದಾರೆ ಮತ್ತೊಬ್ಬರು. ನನ್ನ ತಂದೆ ಕೂಡ ಅಲ್ಝೈಮರ್​ನಿಂದ ತೀರಿದರು, ಅವರ ನೆನಪನ್ನು ಮರಳಿಸುವಲ್ಲಿ ನನ್ನ ಎಲ್ಲಾ ಪ್ರಯತ್ನಗಳು ವಿಫಲವಾದವು. ಆದರೆ ಇಂಥ ಸೃಜನಾತ್ಮಕವಾದ ಈ ಆಲೋಚನೆ ನನಗಾಗ ಹೊಳೆಯಲಿಲ್ಲ, ನಿಮಗೆ ಒಳ್ಳೆಯದಾಗಲಿ ಮಗಳೇ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:05 pm, Sat, 5 August 23

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್