AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ತಮ್ಮನ ಡೈರಿ ಪುಟ ಹಂಚಿಕೊಂಡ ಅಕ್ಕ; ನಿಜವಾಗಲೂ ನೀವೀಗ ಮೂರ್ಖ ಅಕ್ಕನೇ ಎನ್ನುತ್ತಿರುವ ನೆಟ್ಟಿಗರು

Privacy : ಈ ವಿಷಯ ನಿಮ್ಮ ತಮ್ಮನಿಗೆ ತಿಳಿದರೆ ನಿಮ್ಮನ್ನು ಅವ ಎಂದಿಗೂ ಕ್ಷಮಿಸಲಾರ, ನಂಬಿಕೆ ಕಳೆದುಕೊಳ್ಳುತ್ತೀರಿ, ಬದುಕಿನಲ್ಲಿ ಇದು ದೊಡ್ಡ ಸಮಸ್ಯೆಗಳನ್ನು ತಂದಿಡುತ್ತದೆ. ಅವರವರ ವೈಯಕ್ತಿಕವನ್ನು ಗೌರವಿಸಿ ಎನ್ನುತ್ತಿದ್ದಾರೆ ನೆಟ್ಟಿಗರು.

Viral: ತಮ್ಮನ ಡೈರಿ ಪುಟ ಹಂಚಿಕೊಂಡ ಅಕ್ಕ; ನಿಜವಾಗಲೂ ನೀವೀಗ ಮೂರ್ಖ ಅಕ್ಕನೇ ಎನ್ನುತ್ತಿರುವ ನೆಟ್ಟಿಗರು
ತಮ್ಮನೊಬ್ಬ ಬರೆದ ಡೈರಿ
ಶ್ರೀದೇವಿ ಕಳಸದ
|

Updated on:Aug 05, 2023 | 12:01 PM

Share

Diary : ಯಾರ ಬಳಿಯೂ ಹೇಳಿಕೊಳ್ಳಲಾಗದ ಭಾವನೆಗಳನ್ನು ವಿಷಯಗಳನ್ನು ಇವನ/ಇವಳ ಹೊಟ್ಟೆಗೆ ಹಾಕಿ ತುಸುಹೊತ್ತು ನಿರಾಳವಾಗಿ ಇರಬಹುದು. ಡೈರಿ ಎಂಬ ಇಂಥ ಆಪ್ತಮಿತ್ರ/ಮಿತ್ರೆ ಈಗಲೂ ನಿಮ್ಮ ಬಳಿ ಇದ್ದಾರೆಯೇ? ಈಗಲೂ ಇವರೊಂದಿಗೆ ನಿಮ್ಮ ಒಡನಾಟ ಮುಂದುವರೆದಿದೆಯೇ? ಎಂದಾದರೂ ನಿಮ್ಮ ಡೈರಿಯನ್ನು ಯಾರಾದರೂ ತೆರೆದು ನೋಡಿದ್ದಿದೆಯೇ? ಇದೀಗ ವೈರಲ್ ಆಗಿರುವ ಈ ಫೋಟೋ ನೋಡಿ. ಅಕ್ಕ ತನ್ನ ತಮ್ಮನ ಡೈರಿ ಪುಟವನ್ನು ರೆಡ್ಡಿಟ್​ನಲ್ಲಿ (Reddit) ಹಂಚಿಕೊಂಡು, ತಾನೊಬ್ಬಳು ಮೂರ್ಖ ಅಕ್ಕ ಎಂದೆನ್ನಿಸುತ್ತಿದೆ ಎಂದಿದ್ದಾಳೆ.

Found this in my brothers diary. Feeling like a fool sister 🙂 by u/cartboarding in indiasocial

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಡೈರಿಯಲ್ಲಿ ಏನಿದೆ?

ನನ್ನ ಈ ನಡೆವಳಿಕೆಗಳನ್ನು ನಾನು ತೊರೆಯಬೇಕು;

ಒರಟಾಗಿ ಮಾತನಾಡುವುದು.

ಬೆಳಗ್ಗೆ ತಡವಾಗಿ ಏಳುವುದು.

ಅಭ್ಯಾಸ ಮಾಡದೇ ಇರುವುದು.

ಮೊಬೈಲ್ ನೋಡುವುದು.

ಟಿವಿ ನೋಡುವುದು.

ಮೂರ್ಖ ಅಕ್ಕನ ಮೇಲೆ ಕೋಪ ಮಾಡಿಕೊಳ್ಳುವುದು.

ತುಂಬಾ ಮಾತನಾಡುವುದು.

ಇದನ್ನೂ ಓದಿ : Viral Video: ಚುಂಬನವೃತ್ತಾಂತ; ಆಕೆ ಕೊಟ್ಟಿದ್ದನ್ನು ಆಕೆಗೇ ಮರಳಿಸಿತು ಹಾವು, ಮುಂದೆ?

ನೆಟ್ಟಿಗರ ಪ್ರತಿಕ್ರಿಯೆ

ಎಲ್ಲಾ ಸರಿ ಆದರೆ ನೀವು ಯಾಕೆ ಈ ಡೈರಿ ಓದುತ್ತಿದ್ದೀರಿ? ಮೂರ್ಖ ಸಹೋದರಿಯರು ಮಾಡುವ ಅಪರಾಧವಿದು! ಎಂದಿದ್ದಾರೆ ನೆಟ್ಟಿಗರು. ಡೈರಿ ಎಂದರೆ ಖಾಸಗೀ ಅಲ್ಲವೆ, ನೀವು ಹೀಗೆ ಓದಿದ್ದು ಸರಿಯಲ್ಲ, ಜತೆಗೆ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಕೂಡ ಎಂದಿದ್ದಾರೆ ಒಬ್ಬರು. ಎಂಥ ಮುದ್ದು, ನಿಮ್ಮ ತಮ್ಮನಿಗೆ ಎಷ್ಟು ವಯಸ್ಸು? ಎಂದು ಕೇಳಿದ್ದಾರೆ ಇನ್ನೊಬ್ಬರು. ಪ್ರತಿಯೊಬ್ಬರೂ ಇಂಥ ಸಹೋದರ ಅಥವಾ ಸಹೋದರಿಯರನ್ನು ತಮ್ಮ ಜೀವನದಲ್ಲಿ ಬಯಸುತ್ತಾರೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಮಕ್ಕಳಿಂದಾಗಿ ಫಜೀತಿಗೆ ಬಿದ್ದ ಕರಡಿಯಮ್ಮ; ಅಪ್ಪನೆಲ್ಲಿ ಎನ್ನುತ್ತಿರುವ ನೆಟ್ಟಿಗರು

ಹೀಗೆ ನೀವು ಅವನ ಡೈರಿ ಹಂಚಿಕೊಂಡಿದ್ದು ಅವನಿಗೆ ಗೊತ್ತಾದರೆ ನೀವು ನಿಜವಾಗಲೂ ಮೂರ್ಖ ಅಕ್ಕನಾಗುತ್ತೀರಿ ಎಂದಿದ್ದಾರೆ ಒಬ್ಬರು. ಮೂರ್ಖ ಎಂದು ಕರೆಯಲು ಕಾರಣ ಇದೆ, ಇನ್ನೊಬ್ಬರ ಡೈರಿಯನ್ನು ಯಾವತ್ತೂ ಓದಬಾರದು, ಇದು ಆ ಮಗುವಿಗೆ ಗೊತ್ತಾದರೆ ನಂಬಿಕೆಯನ್ನು ಕಳೆದುಕೊಳ್ಳುತ್ತೀರಿ, ದಯವಿಟ್ಟು ನಿಲ್ಲಿಸಿ ಇಲ್ಲವಾದಲ್ಲಿ ಬದುಕಿನುದ್ದಕ್ಕೂ ಇದು ಸಮಸ್ಯೆಯಾಗುತ್ತದೆ ಎಂದಿದ್ದಾರೆ ಮತ್ತೊಬ್ಬರು.

ನೀವೇನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 11:58 am, Sat, 5 August 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ