Viral Video: ಮಕ್ಕಳಿಂದಾಗಿ ಫಜೀತಿಗೆ ಬಿದ್ದ ಕರಡಿಯಮ್ಮ; ಅಪ್ಪನೆಲ್ಲಿ ಎನ್ನುತ್ತಿರುವ ನೆಟ್ಟಿಗರು
Road Crossing : ವನ್ಯಪ್ರಾಣಿಗಳ ಓಡಾಟಕ್ಕೆ ಅನುಕೂಲವಾಗುವಂತೆ ಅರಣ್ಯಪ್ರದೇಶಗಳ ಸುತ್ತಮುತ್ತ ಸೇತುವೆ, ಸುರಂಗ ಮಾರ್ಗವನ್ನು ಕಡ್ಡಾಯವಾಗಿ ನಿರ್ಮಿಸಬೇಕು. ಇಲ್ಲವಾದರೆ ಅವು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.
Bear: ಅತ್ತಿಂದಿತ್ತ ಇತ್ತಿಂದಿತ್ತ ಗಾಡಿಗಳ ಓಡಾಟ. ಒಂದನ್ನು ಹಿಡಿದರೆ ಇನ್ನೊಂದು ಓಡಿಹೋಗುತ್ತದೆ, ಇನ್ನೊಂದನ್ನು ಹಿಡಿದರೆ ಒಂದು ಓಡಿಹೋಗುತ್ತದೆ. ಕರಡಿಯಮ್ಮನಿಗೆ (Mother) ಇರುವುದೊಂದೇ ಬಾಯಿ. ಹೇಗೆ ಅದು ಎರಡೂ ಮರಿಗಳನ್ನು ರಸ್ತೆ ದಾಟಿಸೀತು? ಇನ್ನು ಪುಟ್ಟಮಕ್ಕಳಿಗಾದರೂ ತಾವು ರಸ್ತೆಯ ಮೇಲೆ ಹೀಗೆ ಓಡಾಡುತ್ತಿರುವುದು ಅಪಾಯ ಎಂದು ತಿಳಿಯುವುದಾದರೂ ಹೇಗೆ? ಹೀಗಿರುವಾಗ ಅಮ್ಮನ ಕಷ್ಟ ಅವುಗಳಿಗೆ ಅರ್ಥವಾಗುವುದು ದೂರವೇ! ಚಿಣ್ಣಾಟದ ವಯಸ್ಸು. ಆದರೆ ಅಮ್ಮನ ಪರದಾಟ!?
ಇದನ್ನೂ ಓದಿView this post on Instagram
ಈತನಕ ಈ ವಿಡಿಯೋ ಅನ್ನು ಸುಮಾರು 20 ಮಿಲಿಯನ್ ಜನರು ನೋಡಿದ್ದಾರೆ. 8 ಲಕ್ಷಕ್ಕಿಂತಲೂ ಹೆಚ್ಚು ಜನರು ಇದನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿದ್ದಾರೆ. ವನ್ಯಜೀವಿಗಳ ಅನುಕೂಲಕ್ಕೆ ತಕ್ಕಂತೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಿದ್ದು ನಿಜಕ್ಕೂ ಅಪ್ಯಾಯಮಾನ, ಇಂತ ದಯಾಮಯಿಗಳಿಗೆ ಯಾವಾಗಲೂ ನಾನು ಕೃತಜ್ಞ ಎಂದಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ಭಾರತವನ್ನು ತೊರೆಯುವ ಕನಸು; ಟ್ರೋಲ್ಗೆ ಒಳಗಾದ ವಿದ್ಯಾರ್ಥಿನಿಗೆ ಟ್ರ್ಯೂಕಾಲರ್ ಸಿಇಒ ಉದ್ಯೋಗ ಭರವಸೆ
ಈ ವನ್ಯಜೀವಿಗಳು ಮಕ್ಕಳೊಂದಿಗೆ ಹೀಗೆ ನಾಡಿಗೆ ಬಂದಿದ್ದಾದರೂ ಎಲ್ಲಿ? ಇವುಗಳ ಓಡಾಟಕ್ಕೆ ಪ್ರತ್ಯೇಕವಾದ ಸುರಂಗ ಮಾರ್ಗ, ಸೇತುವೆಗಳನ್ನು ನಿರ್ಮಿಸಿ ಅವುಗಳು ನಿರಾತಂಕವಾಗಿ ಬದುಕುವಂತೆ ಮಾಡಬೇಕು ಎಂದಿದ್ದಾರೆ ಇನ್ನೊಬ್ಬರು. ಅವಳಿ ಮಕ್ಕಳ ತಾಯಿಯಾಗಿರುವ ನಾನು ಪ್ರತೀ ದಿನವು ಇಂಥ ಸವಾಲುಗಳನ್ನು ಎದುರಿಸುತ್ತೇನೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಚಲಿಸುವ ಜೀಪಿನ ಬಾನೆಟ್ ಮೇಲೆ ಕುಳಿತ ಯುವತಿ ಹೋಷಿಯಾರಪುರದ ಪೊಲೀಸರ ಅತಿಥಿ
ಪಾಪ ಕರಡಿಯಮ್ಮನ ಎದೆಯಲ್ಲಿ ಅಷ್ಟೂ ಹೊತ್ತು ಅದೆಂಥ ಆತಂಕ ಮನೆಮಾಡಿತ್ತೋ ಏನೋ. ತಾಯ್ತನವೆಂದರೆ ಸುಮ್ಮನೇ ಅಲ್ಲವಲ್ಲ? ನೊಂದು ಬೆಂದೇ ತಾಯಿಯಾಗುವುದು. ಪ್ರಾಣಿಯಾದರೇನು ಮನುಷ್ಯರಾದರೇನು ಜವಾಬ್ದಾರಿ ಜವಾಬ್ದಾರಿಯೇ. ಹಂತಹಂತವಾಗಿ ಎದುರಾಗುವ ಸವಾಲುಗಳನ್ನು ಎದುರಿಸುತ್ತ ಮಕ್ಕಳಿಗೂ ಅದನ್ನು ಕಲಿಸುತ್ತ ಸಾಗಬೇಕು.
ಏನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ