AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಲಿಸುವ ಜೀಪಿನ ಬಾನೆಟ್ ಮೇಲೆ ಕುಳಿತ ಯುವತಿ ಹೋಷಿಯಾರಪುರದ ಪೊಲೀಸರ ಅತಿಥಿ

Punjab : ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ ಮಾಡಲು ಸಂಚಾರಿ ನಿಯಮಗಳನ್ನು ಮುರಿದು ಮನಬಂದಂತೆ ವರ್ತಿಸಿದರೆ ಅಂಥವರಿಗೆ ತಕ್ಕ ಶಿಕ್ಷೆ ಕಾದಿರುತ್ತದೆ ಎನ್ನುವುದನ್ನು ಹೋಷಿಯಾರ್​ಪುರದ ಪೊಲೀಸರು ಸಾಬೀತುಗೊಳಿಸಿದ್ದಾರೆ.

Viral Video: ಚಲಿಸುವ ಜೀಪಿನ ಬಾನೆಟ್ ಮೇಲೆ ಕುಳಿತ ಯುವತಿ ಹೋಷಿಯಾರಪುರದ ಪೊಲೀಸರ ಅತಿಥಿ
ಚಲಿಸುತ್ತಿದ್ದ ಜೀಪಿನ ಬಾನೆಟ್ ಮೇಲೆ ಕುಳಿತು ಸಂಚರಿಸುತ್ತಿರುವ ಯುವತಿ
Follow us
ಶ್ರೀದೇವಿ ಕಳಸದ
|

Updated on:Aug 04, 2023 | 4:36 PM

Reels : ಈ ರೀಲಿಗರ ಹುಚ್ಚಿಗೆ ಕೊನೆಯೇ ಇಲ್ಲವಾಗಿದೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಚಲಿಸುವ ಜೀಪಿನ ಬಾನೆಟ್​ ಮೇಲೆ ಈ ಯುವತಿ ಕುಳಿತಿದ್ದಾಳೆ. ಅಕ್ಕಪಕ್ಕದಲ್ಲಿ ವಾಹನಗಳು ಓಡಾಡುತ್ತಿವೆಯಾದರೂ ಈಕೆ ನಿರ್ಭಿಡೆಯಿಂದ ತನ್ನದೇ ಲೋಕದಲ್ಲಿ ಮುಳುಗಿದ್ದಾಳೆ. ಎರಡೂ ಕೈಗಳನ್ನು ಮೇಲಕ್ಕೆತ್ತಿ ಬೀಸುತ್ತ ಯಾವುದೋ ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪಂಜಾಬ್​ನ ಹೋಷಿಯಾರ​ಪುರದ  (Hoshiarpur) ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ.

25 ವರ್ಷದ ಈ ಯುವತಿ ಎಸ್​​ಯುವಿ ಜೀಪಿನ ಮೇಲೆ ಕುಳಿತು ರೀಲ್ ಮಾಡಿದ್ದು ಜಲಂಧರ್-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದಾಸುಯಾ ಬಳಿ. ದಾಸುಯಾದ ಪೊಲೀಸ್ ಅಧಿಕಾರಿ ಬಲ್ವಿಂದರ್ ಸಿಂಗ್, ”ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಾಹನದ ನೋಂದಣಿ ಸಂಖ್ಯೆಯ ಮೂಲಕ ಈ ಜೀಪಿನ ಮಾಲಿಕರನ್ನು ಹುಡುಕಲಾಯಿತು. ನಂತರ ಈ ಜೀಪನ್ನು ವಶಕ್ಕೆ ಪಡೆಯಲಾಯಿತು” ಎಂದಿದ್ದಾರೆ.

ಇದನ್ನೂ ಓದಿ : Viral: ಆನ್​ಲೈನ್​ ಆರ್ಡರ್​; ಈ ಸ್ಟಿಕರ್​ಗೆ ಕೂದಲು ಅಂಟಿಕೊಂಡಿರುವುದು ಹೇಗೆ?

ಹೋಷಿಯಾರಪುರ ಪೊಲೀಸರ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಈ ಟ್ವೀಟ್ ನೋಡಬಹುದಾಗಿದೆ; ”ಸಾಮಾಜಿಕ ಜಾಲತಾಣಗಳ ಮೂಲಕ ಬಂದ ಮಾಹಿತಿಯ ಪ್ರಕಾರ ಹೋಷಿಯಾರಪುರ ಪೊಲೀಸರು ತಕ್ಷಣವೇ ಈ ಯುವತಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ದಾಸುಹಾದಲ್ಲಿ ಜೀಪ್​ನ ಬಾನೆಟ್​ ಮೇಲೆ ಕುಳಿತು ಈಕೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಜೀಪ್​ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಪುನರಾವರ್ತಿಸದಂತೆ ಈಕೆಗೆ ಎಚ್ಚರಿಕೆ ನೀಡಲಾಗಿದೆ”

ಇದನ್ನೂ ಓದಿ : Viral: ಈ ಕಾಲದಲ್ಲಿಯೂ ಇದೇನಿದು ಕಾರಿನ ಮೇಲೆ ಚೀಟಿ ಸಂಭಾಷಣೆ? 

ಈ ಪೋಸ್ಟ್​ ಅನ್ನು ಆ.2ರಂದು ಟ್ವೀಟ್ ಮಾಡಲಾಗಿದೆ. ಈತನಕ ಸುಮಾರು 10,000 ಜನರು ಇದನ್ನು ನೋಡಿದ್ದಾರೆ. 100ಕ್ಕಿಂತಲೂ ಹೆಚ್ಚು ಲೈಕ್ ಮಾಡಿದ್ದಾರೆ. ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕ್ರಮ ಕೈಗೊಂಡಿರುವುದು ಒಳ್ಳೆಯದಾಯಿತು. ಪ್ರಭಾವಿ ವ್ಯಕ್ತಿಗಳು ಕಾನೂನನ್ನು ಕಡೆಗಣಿಸಿ ಹೀಗೆ ಸಾರ್ವಜನಿಕವಾಗಿ ಮನಬಂದಂತೆ ವರ್ತಿಸುತ್ತಿದ್ದಾರೆ. ಈ ಮೂಲಕ ಉಳಿದವರು ಪಾಠ ಕಲಿಯಲಿ ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಈ ಆನೆ ಇಲ್ಲಿ ಮಾಡಿದ್ದೇನು ಮತ್ತು ಓಡಿಹೋಗಿದ್ದು ಏಕೆ? 

ನಿಮ್ಮ ಸುರಕ್ಷತೆ ನಿಮಗೆ ಬೇಡವಾಗಿದ್ದರೆ ಸರಿ. ರಸ್ತೆಯಲ್ಲಿ ಸಂಚಾರ ಮಾಡುವರ ಸುರಕ್ಷತೆಗಾದರೂ ಗಮನ ಕೊಡಿ. ಸಂಚಾರಿ ನಿಯಮಗಳನ್ನು ಪಾಲಿಸಿ ಎಂದಿದ್ದಾರೆ ಮತ್ತೊಬ್ಬರು. ಸಾರ್ವಜನಿಕ ಸ್ಥಳಗಳಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸುವವರನ್ನು ಜೈಲಿಗೆ ಹಾಕಬೇಕು ಎಂದಿದ್ದಾರೆ ಇನ್ನೊಬ್ಬರು. ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್​ನಂತೆ ಮೆರೆಯುತ್ತಿರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಮಗದೊಬ್ಬರು ಹೇಳಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:36 pm, Fri, 4 August 23

ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ