Viral Video: ಈ ಆನೆ ಇಲ್ಲಿ ಮಾಡಿದ್ದೇನು ಮತ್ತು ಓಡಿಹೋಗಿದ್ದು ಏಕೆ?

Wildlife : ಸದ್ಯ, ಈ ಜೀಪಿನೊಳಗೆ ಅರಣ್ಯ ಸಿಬ್ಬಂದಿ ಇರಲಿಲ್ಲ ಎನ್ನುವುದೊಂದೇ ಸಮಾಧಾನ. ಆದರೆ ಈ ಮುದ್ದಾನೆಗೆ ಇದು ಆಟಿಕೆಯಂತೆ ಕಂಡಿತ್ತೋ? ಅಥವಾ ಯಾವುದಕ್ಕಾದರೂ ಕೋಪ ಬಂದಿತ್ತೋ? ನೋಡಿ ನಿಮಗೇನಾದರೂ ಅರ್ಥವಾಗುವುದೋ?

Viral Video: ಈ ಆನೆ ಇಲ್ಲಿ ಮಾಡಿದ್ದೇನು ಮತ್ತು ಓಡಿಹೋಗಿದ್ದು ಏಕೆ?
ಹೇಗಿದೆ ನನ್ನ ಹೊಸ ಆಟಿಕೆ?
Follow us
ಶ್ರೀದೇವಿ ಕಳಸದ
|

Updated on:Aug 04, 2023 | 11:49 AM

Elephant: ಈ ಜೀಪ್, ಆನೆಗೆ ಆಟಿಕೆಯಂತೆ (Toy) ಕಂಡಿದೆಯೋ ಅಥವಾ ನನ್ನ ಜಾಗದಲ್ಲಿ ನೀವ್ಯಾಕೆ ಗಾಡಿ ನಿಲ್ಲಿಸಿದ್ದೀರಿ ಎಂದು ಗಲಾಟೆ ಮಾಡಿದೆಯೋ ಅಥವಾ ಸರಿಯಾಗಿ ಬಾಗಿಲು ಮುಚ್ಚಲು ಬರುವುದಿಲ್ಲವೇ ನಿಮಗೆ? ಎಂದು ಜೊರು ಮಾಡಿದೆಯೋ ಅಥವಾ ಇನ್ನೂ ಯಾವುದಾದರೂ ಕಿಟಕಿ ಗಾಜು ಉಳಿದಿದೆಯೋ ಎಂದು ಪರೀಕ್ಷಿಸಿದೆಯೋ ಗೊತ್ತಾಗುತ್ತಿಲ್ಲ. ಮಾಡುವುದೆಲ್ಲ ಮಾಡಿ ಓಡಿ ಬೇರೆ ಹೋಗಿದೆ ಈ ಮುದ್ದಾದ ಪುಂಡಾನೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದರದೇ ಗುಲ್ಲು. ನೋಡಿ ನಿಮಗೇನಾದರೂ ಇದರ ವರ್ತನೆ ಅರ್ಥವಾಗುವುದೆ?

ಐಎಫ್​ಎಸ್ ಅಧಿಕಾರಿ ಪರ್ವೀನ್​ ಕಸ್ವಾನ್​ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಅದೃಷ್ಟಕ್ಕೆ ಈ ಆನೆ ಈ ಜೀಪ್​ ಅನ್ನು ಡಿಕ್ಕಿ ಹೊಡೆಯುವಾಗ ಅರಣ್ಯ ಸಿಬ್ಬಂದಿ ಒಳಗೆ ಯಾರೂ ಇರಲಿಲ್ಲ. ಈ ವಿಡಿಯೋ ಅನ್ನು ಈತನಕ 1 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ಈತನಕ ಸುಮಾರು 2,000 ಜನರು ಲೈಕ್​ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : Viral Video: ಮುಂಬೈ; ‘ಡ್ಯಾನ್ಸ್ ನಿಲ್ಲಿಸಿದರೆ ಮಾತ್ರ ಪ್ರಮಾಣಪತ್ರ’ ಪ್ರಾಧ್ಯಾಪಕರ ತಾಕೀತು

ಬಾಗಿಲು ಮುಚ್ಚಿದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ ಸಾಹೇಬರು ಎಂದಿದ್ದಾರೆ ಒಬ್ಬರು. ಯಾಕೆ ಇವರು ಬಾಗಿಲನ್ನು ಮುರಿಯುತ್ತಿದ್ದಾರೆ ಎಂದು ಇನ್ಬೊಬ್ಬರು. ಸುರಕ್ಷತೆಗಾಗಿ ಬಾಗಿಲುಗಳನ್ನು ಮುಚ್ಚಬೇಕು ಎಂದು ಹೇಳುತ್ತಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಆಟವಾಡ್ತಾ ಇದೆ ಮಗು ಎಂದು ಮಗದೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Video: ದೆಹಲಿ ಮೆಟ್ರೋ; ಈ ಮಹಿಳೆಗೆ ತುರ್ತು ಸಹಾಯ ಬೇಕಿದೆ

ಅವನಿಗೆ ಒಂದು ಹಾಟ್​ ವೀಲ್​ ಅನ್ನು ಗಿಫ್ಟ್​ ಕೊಟ್ಟಿದ್ದೀರಿ ಎಂದುಕೊಂಡು ಅವನು ಆರಾಮಾಗಿ ಆಟವಾಡುತ್ತಿದ್ದಾನೆ ಎಂದಿದ್ದಾರೆ ಒಬ್ಬರು. ಈ ವಿಡಿಯೋ ನೋಡಿದ ನಿಮಗೆ ಏನೆನ್ನಿಸಿತು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:48 am, Fri, 4 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ