Viral Video: ಕರ್ನಾಟಕ ಸಂಗೀತ ಶೈಲಿಯಲ್ಲಿ ಅರಳಿದ ಬಾರ್ಬಿ​; ಅಪ್ಪಿಕೊಂಡ ನೆಟ್ಟಿಗರು

South Indian Barbie : ಐ ಆ್ಯಮ್ ಅ ಬಾರ್ಬೀ ಗರ್ಲ್​ ಇನ್​ ಅ ಬಾರ್ಬೀ ವರ್ಲ್ಡ್​ ಹಾಡು ನೆನಪಿದೆಯೇ? ಈ ಹಾಡಿನ ಮೂಲಕ ದಕ್ಷಿಣ ಭಾರತದ ಬಾರ್ಬಿಯನ್ನು ಸೃಜನಶೀಲವಾಗಿ ಅನಾವರಣಗೊಳಿಸಿದ್ದಾರೆ ಸಂಗೀತ ಕಲಾವಿದ ಮಹೇಶ ರಾಘವನ್.

Viral Video: ಕರ್ನಾಟಕ ಸಂಗೀತ ಶೈಲಿಯಲ್ಲಿ ಅರಳಿದ ಬಾರ್ಬಿ​; ಅಪ್ಪಿಕೊಂಡ ನೆಟ್ಟಿಗರು
ಕರ್ನಾಟಕ ಸಂಗೀತ ಕಲಾವಿದ ಮಹೇಶ್ ರಾಘವನ್
Follow us
|

Updated on: Aug 03, 2023 | 5:49 PM

Barbie: ಗುಲಾಬಿ ಜ್ವರ ಇದೀಗ ತಾತ್ಕಾಲಿಕವಾಗಿ ಮೆಲ್ಲಗೆ ಕೆಂಪಿಗೆ ತಿರುಗಿದ ಲಕ್ಷಣವನ್ನು ಹೊಮ್ಮಿಸುತ್ತಿದೆ. ಮೇಲಿನ ಚಿತ್ರವನ್ನು ನೋಡಿದಿರಲ್ಲ? ಅಕಸ್ಮಾತ್ ಬಾರ್ಬಿ ಏನಾದರೂ ದಕ್ಷಿಣ ಭಾರತದವಳಾಗಿದ್ದರೆ ಹೇಗಿರುತ್ತಿತ್ತು… ಎಂಬ ಕಲ್ಪನೆಯನ್ನು ಸಂಗೀತದ ಮೂಲಕ ಅನಾವರಣಗೊಳಿಸಿದ್ದಾರೆ ಕರ್ನಾಟಕ ಸಂಗೀತ ಕಲಾವಿದ ಮಹೇಶ್ ರಾಘವನ್.​ 1997ರಲ್ಲಿ ಬಿಡುಗಡೆಯಾದ ಬಾರ್ಬಿ ಗರ್ಲ್​ (Barbie Girl- Aqua) ಹಾಡಿಗೆ ಟ್ವಿಸ್ಟ್​ ನೀಡಿ ಬಾರ್ಬಿ ಟ್ರೆಂಡ್​ಗೆ ಈ ಮೂಲಕ ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ ಅವರು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Mahesh Raghvan (@followingmahesh)

I’m a Barbie girl in a Barbie world. Life in plastic, it’s fantastic. You can brush my hair, undress me everywhere. Imagination, life is your creation; ಈ ಹಾಡನ್ನು ಕೇಳಿದ ನೆನಪಿದೆಯಲ್ಲವೆ? ಕೆಲವರು ನರ್ಸರಿಯಲ್ಲಿ, ಶಾಲೆಯಲ್ಲಿ, ಕಾಲೇಜಿನಲ್ಲಿ, ಪಾರ್ಟಿಯಲ್ಲಿ ಈ ಹಾಡಿಗೆ ಹೆಜ್ಜೆ ಹಾಕಿರಬಹುದು. ಈಗಲೂ ಈ ಹಾಡು ಎವರ್​ಗ್ರೀನ್​! ಕಲಾವಿದ ಮಹೇಶ್ ರಾಘವನ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ಹಾಡನ್ನು ಕರ್ನಾಟಕ ಸಂಗೀತಕ್ಕೆ ರೂಪಾಂತರಿಸಿದ್ದಾರೆ. ಸುಮಾರು 4 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದು ಸುಮಾರು 2.8 ಲಕ್ಷ ಜನರು ಇದನ್ನು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ನಿಮ್ಮ ಈ ಪ್ರಯೋಗವನ್ನು ತಮಿಳು ಮತ್ತು ಮಲಯಾಳಂ ಸಾಹಿತ್ಯದೊಂದಿಗೆ ಮಾಡಿದರೆ ಕೇಕ್​ನಲ್ಲಿರುವ ಚೆರ್ರಿಯಂತೆ ಅದ್ಭುತವಾಗಿರುತ್ತದೆ ಎಂದಿದ್ದಾರೆ ಒಬ್ಬರು. ನೀವು ಅತ್ಯಂತ ಪ್ರತಿಭಾವಂತ ಮತ್ತು ಸೃಜನಶೀಲ ಕಲಾವಿದರು, ನಿಮಗೆ ಸಾಕಷ್ಟು ಅವಕಾಶಗಳು ಸಿಗಬೇಕು ಎಂದು ಹಾರೈಸುವೆ ಎಂದಿದ್ದಾರೆ ಮತ್ತೊಬ್ಬರು. ಅದ್ಭುತ! ಇಂಥ ಪ್ರಯೋಗವನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ, ಈ ಭಾರತೀಯ ಬಾರ್ಬಿ ವರ್ಷನ್​ ಬಹಳ ಆಪ್ತವಾಗಿದೆ ಎಂದಿದ್ದಾರೆ ಇನ್ನೊಬ್ಬರು. ಇದು ನಮ್ಮ ಕರ್ನಾಟಕ ಸಂಗೀತದ ಸೌಂದರ್ಯ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ರೆಸ್ಟ್​ ಲೈಕ್​ ಬಾರ್ಬಿ; ಇದೀಗ ಶವಪೆಟ್ಟಿಗೆಗಳಿಗೂ ಹರಡಿದ ಗುಲಾಬಿ ಜ್ವರ! ನೋಡಿ ಈ ವಿಡಿಯೋ

ಬಾರ್ಬಿಯಂತೆ ಶವಪೆಟ್ಟಿಗೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ! ಎಂಬ ವರದಿಯನ್ನು ಓದಿ ಸ್ವಲ್ಪ ಸುಸ್ತಾಗಿದ್ದಿರಲ್ಲವೆ? ಈಗ ಈ ಹಾಡು ಕೇಳಿ ಚೈತನ್ಯ ಪಡೆದುಕೊಳ್ಳಿ. ಈ ಗುಲಾಬಿ ಜ್ವರ ಇನ್ನೂ ಎಷ್ಟು ದಿನ ಇರುತ್ತದೆ ಮತ್ತು ಏನೆಲ್ಲ ರೂಪಾಂತರಗಳನ್ನು ಪಡೆದಕೊಳ್ಳುತ್ತದೆ ಎಂದು.

ಏನಂತೀರಿ ನೀವು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ