Viral: ಬಾರ್ಬಿ ಕೇಕ್; ದೆಹಲಿ ಕೇರಳದ ಬೇಕರ್​ಗಳಿಗೆ ಅಂಟಿದ ಗುಲಾಬಿ ಜ್ವರ!

Barbie Cake : ಅಂತೂ ಎಐ ಕಲಾವಿದರನ್ನು ಈ ಪಿಂಕ್​ ಫಿವರ್ ಬಿಟ್ಟಿತು ಎಂದುಕೊಳ್ಳುತ್ತಿರುವಾಗಲೇ ಇದು ಬೇಕರಿಗಳಿಗೆ ಹಿಡಿದುಕೊಂಡುಬಿಟ್ಟಿದೆ. ದೆಹಲಿ ಯುವತಿಯರು ತಮ್ಮ ಬರ್ತಡೇ ಥೀಮ್​ಗಾಗಿ ಬೇಕರಿಗಳ ಹಿಂದೆ ಬಿದ್ದಿದ್ದಾರೆ.

Viral: ಬಾರ್ಬಿ ಕೇಕ್; ದೆಹಲಿ ಕೇರಳದ ಬೇಕರ್​ಗಳಿಗೆ ಅಂಟಿದ ಗುಲಾಬಿ ಜ್ವರ!
ಕೇರಳದ ಸಾರಾ ಝಿಯಾ ಎಂಬ ಹೋಮ್​ ಬೇಕರ್ ಗ್ರಾಹಕರ ಹುಟ್ಟುಹಬ್ಬಕ್ಕೆ ತಯಾರಿಸಿದ ಬಾರ್ಬಿ ಕೇಕ್
Follow us
ಶ್ರೀದೇವಿ ಕಳಸದ
|

Updated on:Aug 03, 2023 | 2:30 PM

Baking : ಜಗತ್ತಿನಲ್ಲಿರುವ ಪ್ರಸಿದ್ಧ ವ್ಯಕ್ತಿಗಳನ್ನು, ಸಿನೆಮಾ ತಾರೆಯರನ್ನು, ರಾಜಕಾರಣಿಗಳನ್ನು ತಿಂಗಳಾನುಗಟ್ಟಲೆ ಗುಲಾಬಿಯಲ್ಲಿ ಅದ್ದಿ ತೆಗೆದಿಡುತ್ತಿದ್ದ ಎಐ ಕಲಾವಿದರು ವಿಶ್ರಾಂತಿ ತೆಗೆದುಕೊಳ್ಳುತ್ತಿರಬಹುದು. ಆದರೆ ಈ ಜ್ವರ ಸುಳಿವಿಲ್ಲದಂತೆ ಇದೀಗ ಬೇಕರಿಯವರಿಗೆ ಹರಡಿಕೊಂಡಿದೆ! ದೆಹಲಿಯಲ್ಲಿ ಬಾರ್ಬಿ ಥೀಮ್​ ಕೇಕ್​ ಟ್ರೆಂಡಿಂಗ್​ನಲ್ಲಿದ್ದು 18ರಿಂದ 30 ವರ್ಷದೊಳಗಿನ ಯುವತಿಯರನ್ನು ಆಕರ್ಷಿಸುತ್ತಿದೆ. ಅಂತೂ ಬಾರ್ಬಿ ಸಿನೆಮಾ (Barbie Movie) ಥಿಯೇಟರುಗಳಲ್ಲಿ ಬಿಡುಗಡೆಯಾದಾಗಿನಿಂದ ವ್ಯಾಪಾರ ಜಗತ್ತು ಮತ್ತು ಅಂತರ್ಜಾಲ ಜಗತ್ತು ಗುಲಾಬಿ ನಶೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಇಷ್ಟು ದಿನ ಕಣ್ಣಿಗಷ್ಟೇ ಕಾಣುತ್ತಿದ್ದ ಈ ಗುಲಾಬಿ ಇದೀಗ ಕೇಕ್​ ಮೂಲಕ ಗುಲಾಬಿ ನಾಲಗೆಯನ್ನೂ ಆಳಲು ಹೊರಟಿದೆ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
After AI Artists Barbie Pink Fever spread to Delhi Bakers

ಬಾರ್ಬಿ ಥೀಮ್​ನಡಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ದೆಹಲಿ ಯುವತಿಯರು

ದೆಹಲಿಯ ಹೋಮ್​ ಬೇಕರ್​ಗಳು #ComeOnBarbieLetsGoBake ಎಂದು ಬಾರ್ಬಿ ಕೇಕ್​ಗಳನ್ನು ಉತ್ಸಾಹದಿಂದ ತಯಾರಿಸುತ್ತಿದ್ದಾರೆ. ಗ್ರೇಟರ್ ಕೈಲಾಶ್​ನ ಗೃಹಿಣಿ ಜಿಯಾ ಮಲ್ಹೋತ್ರಾ, ‘ಜು. 29ರಂದು ನನ್ನ 30ನೇ ಹುಟ್ಟುಹಬ್ಬವಿತ್ತು. ಅದಕ್ಕಿಂತ ಮೊದಲು ಬಾರ್ಬಿ ಸಿನೆಮಾ ನೋಡಿದ್ದೆ. ನನಗೆ ನಾನು ಚಿಕ್ಕವಳಂತೆ ಭಾಸವಾಗಬೇಕು ಅಂಥ ಥೀಮ್ ಪಾರ್ಟಿಯಡಿ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕು ಎಂದುಕೊಳ್ಳುತ್ತಿದ್ದೆ. ಆಗ ಕೈಹಿಡಿದವಳೇ ಬಾರ್ಬಿ! ದೆಹಲಿಯ ಬೇಕರ್​ಗೆ ಫೋನ್ ಮಾಡಿ ಮಾತನಾಡಿದೆ. ಅದಕ್ಕೆ ಅವರು, ನೀವಷ್ಟೇ ಅಲ್ಲ ಇದೇ ಥೀಮಿನಡಿ ಇಂದು 7 ಜನರು ಆರ್ಡರ್ ಮಾಡಿದ್ದನ್ನು ಹೇಳಿದರು” ಎಂದಿದ್ದಾರೆ.

ಜಿಯಾ ಮಲ್ಹೋತ್ರಾ ಮಾಲವೀಯನಗರದ ಬೇಕರಿಯಲ್ಲಿ ಕೇಕ್ ಆರ್ಡರ್ ಮಾಡಿದ್ದಾರೆ. ಇದರ ಮಾಲೀಕ ಸಾರಾ ತನೇಜಾ, ”ಮಕ್ಕಳ ಹುಟ್ಟುಹಬ್ಬದ ಪಾರ್ಟಿಗಳಿಗೆ ಬಾರ್ಬಿ ಕೇಕ್​ಗಳ ಬೇಡಿಕೆ ಇತ್ತು. ಆದರೆ ಈ ಸಿನೆಮಾ ಬಂದ ಮೇಲೆ 18ರಿಂದ 30 ವರ್ಷದೊಳಗಿನ ಹೆಣ್ಣುಮಕ್ಕಳಿಂದ ಆರ್ಡರ್ ಸ್ವೀಕರಿಸುತ್ತಿದ್ದೇವೆ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಲ್ಲಿ ಈ ಕೇಕ್​ಗಳು ವಿಶೇಷ ಪಾತ್ರ ವಹಿಸುತ್ತಿವೆ. ಈ ಸಿನೆಮಾ ಬಿಡುಗಡೆಯಾದಾಗಿನಿಂದಲೂ ನಾನು ಈ ಥೀಮ್​ನಡಿ 24 ಕೇಕ್​ಗಳನ್ನು ತಯಾರಿಸಿದ್ದೇನೆ’ ಎಂದಿದ್ದಾರೆ.

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 2:17 pm, Thu, 3 August 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್