Viral: ರೆಸ್ಟ್ ಲೈಕ್ ಬಾರ್ಬಿ; ಇದೀಗ ಶವಪೆಟ್ಟಿಗೆಗಳಿಗೂ ಹರಡಿದ ಗುಲಾಬಿ ಜ್ವರ! ನೋಡಿ ಈ ವಿಡಿಯೋ
Rest Like Barbie: ಈ ಬಾರ್ಬಿ ಟ್ರೆಂಡ್ನ ಪ್ರಯೋಜನ ಪಡೆಯಲು ಜಾಗತಿಕ ಮಾರುಕಟ್ಟೆ ಏನೆಲ್ಲಾ ಹರಸಾಹಸ ಮಾಡುತ್ತಿದೆ ನೋಡಿ; ನಮ್ಮೂರ ಜಾತ್ರೆಗಳ ಸೆಗಣಿಗೊಂಬಿ, ಕಿಸಗಾಲಗೊಂಬಿ, ಚನ್ನಪಟ್ಟಣ, ಕಿನ್ನಾಳದಗೊಂಬಿಗಳೇ ಏನಂತೀರಿ ನೀವು?

Barbie: ಬಾರ್ಬಿ ಸಿನೆಮಾ ಥಿಯೇಟರ್ಗಳಲ್ಲಿ ಬಂದಾಗಿನಿಂದ ಈ ಗುಲಾಬಿ ಜ್ವರದ ಟ್ರೆಂಡ್ ಗಂಟೆಗೊಂದರಂತೆ ಶಿಫ್ಟ್ ಆಗುತ್ತಲೇ ಇದೆ. ಬಾರ್ಬಿ ಥೀಮ್ನಡಿ ಯುವತಿಯರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ದೆಹಲಿ ಕೇರಳದ ಬೇಕರ್ಗಳಿಗೆ ಗುಲಾಬಿ ಜ್ವರ ವರ್ಗಾಯಿಸಲ್ಪಟ್ಟಿದೆ ಎಂಬ ಸುದ್ದಿಯನ್ನು ಕೆಲ ಗಂಟೆಗಳ ಹಿಂದೆಯಷ್ಟೇ ಓದಿದಿರಿ, ಫೋಟೋಗಳನ್ನೂ ನೋಡಿದಿರಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ ನಗುತ್ತೀರೋ ಅಳುತ್ತೀರೋ ಸಂಭ್ರಮಿಸುತ್ತೀರೋ ನಿಮಗೇ ಬಿಟ್ಟಿದ್ದು . ‘ರೆಸ್ಟ್ ಲೈಕ್ ಬಾರ್ಬಿ’ (Rest Like Barbie) ಪರಿಕಲ್ಪನೆಯಲ್ಲಿ ಗುಲಾಬಿ ಬಣ್ಣದ ಶವಪೆಟ್ಟಿಗೆಗಳು (Hot Pink Coffins) ಈಗ ಮಾರುಕಟ್ಟೆಗೆ ಬಂದಿವೆ!
ಬಾರ್ಬಿ ಟ್ರೆಂಡ್ನ ಪ್ರಯೋಜನ ಪಡೆದುಕೊಳ್ಳಲು ಜಾಗತಿಕ ಮಾರುಕಟ್ಟೆ ಪ್ರಪಂಚ ಏನೆಲ್ಲಾ ಹರಸಾಹಸಗಳನ್ನು ಮಾಡುತ್ತಿದೆ! ಎಐ ಚಿತ್ರಗಳು, ಉಡುಪುಗಳು, ಆಟಿಕೆಗಳು, ಕೇಕುಗಳು ಎಲ್ಲ ಓಕೆ. ಆದರೆ ಗುಲಾಬಿ ಶವಪೆಟ್ಟಿಗೆಗಳು!? ಇದು ಶೋಚನೀಯವೋ, ಅತಿರೇಕವೋ, ರೋಮಾಂಚಕವೋ? ಆದರೆ ಅಮೆರಿಕನ್ನರು ಈ ಕುರಿತು ತಮ್ಮದೇ ಸಮರ್ಥನೆ ನೀಡುತ್ತಿದ್ದಾರೆ; ಗಾಢ ಗುಲಾಬಿವರ್ಣವು ಚೈತನ್ಯ, ಶಕ್ತಿ ಮತ್ತು ರೋಮಾಂಚನವನ್ನು ಸಾಂಕೇತಿಸುತ್ತದೆ. ವ್ಯಕ್ತಿಗಳು ನಮ್ಮಿಂದ ದೂರವಾದ ಮೇಲೆಯೂ ಅವರ ಬದುಕಿನ ಕಥಾನಕಗಳು, ನೆನಪುಗಳು ಈ ವರ್ಣದಷ್ಟೇ ನಮ್ಮೆದೆಯಲ್ಲಿ ಗಾಢವಾಗಿರಬೇಕು.
ಇದನ್ನೂ ಓದಿ : Viral Video: ದೆಹಲಿ ಮೆಟ್ರೋ; ಈ ಮಹಿಳೆಗೆ ತುರ್ತು ಸಹಾಯ ಬೇಕಿದೆ
ಮೆಕ್ಸಿಕೋ ಎಲ್, ಸಲ್ವಡಾರ್ ಮತ್ತು ಲ್ಯಾಟಿನ್ ಅಮೆರಿಕದ ಕೆಲ ಭಾಗಗಳಲ್ಲಿ ವಿಶಿಷ್ಟ, ವರ್ಣರಂಜಿತ ರೀತಿಯಲ್ಲಿ ಅಂತ್ಯಸಂಸ್ಕಾರ ವಿಧಿವಿಧಾನವನ್ನು ಪೂರೈಸಲಾಗುತ್ತದೆ. ಅಲ್ಲಿ ಗಾಢ ಗುಲಾಬಿವರ್ಣದ ಶವಪೆಟ್ಟಿಗೆಯೊಳಗೆ ತಮ್ಮ ಪ್ರೀತಿಪಾತ್ರರಿಗೆ ವಿದಾಯ ಹೇಳಲು ಆಯ್ಕೆ ಮತ್ತು ಅವಕಾಶವಿದೆ. ನ್ಯೂಯಾರ್ಕ್ ಪೋಸ್ಟ್ನ ಪ್ರಕಾರ, ಒಲಿವಾರೆಸ್ ಫ್ಯೂನರಲ್ ಹೋಮ್ ‘ಬಾರ್ಬಿ ಥೀಮಿನ ಶವಪೆಟ್ಟಿಗೆ’ಯನ್ನು ತಯಾರಿಸಿದೆ. ನೀವೂ ಕೂಡ ಬಾರ್ಬಿಯಂತೆ ‘ವಿಶ್ರಾಂತಿ’ ಪಡೆಯಬಹುದು ಎಂಬ ಘೋಷವಾಕ್ಯದೊಂದಿಗೆ ಇದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಗಾಢಗುಲಾಬಿ ವರ್ಣದ ಹೊಳೆಯುತ್ತಿರುವ ಈ ಶವಪೆಟ್ಟಿಗೆಗಳನ್ನು ಹೊತ್ತೊಯ್ಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ : Viral Video: ಗಿನ್ನೀಸ್ ವಿಶ್ವ ದಾಖಲೆ; ಈಕೆ ತೇಗು ತೆಗೆದ ಶಬ್ದ ದ್ವಿಚಕ್ರವಾಹನದ ಸದ್ದಿಗೆ ಸಮ!
ಐಸಾಕ್ ವಿಲ್ಲೆಗಾಸ್ ನಿರ್ವಹಿಸುತ್ತಿರುವ ಎಲ್ ಸಾಲ್ವಡಾರ್‌ನ ಅಹುವಾಚಾಪಾನ್‌ನಲ್ಲಿರುವ (Ahuachapan) ಆಲ್ಫಾ ಮತ್ತು ಒಮೆಗಾ ಫ್ಯೂನರಲ್ ಹೋಮ್ ಇದಕ್ಕೆ ಉದಾಹರಣೆಯಾಗಿದೆ. ಸುಮಾರು ಒಂದು ವರ್ಷದಿಂದ ಗುಲಾಬಿ ಶವಪೆಟ್ಟಿಗೆಯನ್ನು ಪೂರೈಸುತ್ತಿದ್ದಾರೆ. ಇದೀಗ ಹೆಚ್ಚುತ್ತಿರುವ ಬೇಡಿಕೆಯಿಂದಾಗ ವಿಲ್ಲೆಗಾಸ್ನ ಶವಾಗಾರದಲ್ಲಿ ಈ ಗುಲಾಬಿ ಶವಪೆಟ್ಟಿಗೆಯ ಮೇಲೆ ಶೇ. 30 ವಿನಾಯಿತಿಯನ್ನು ನೀಡುತ್ತಿದ್ದಾರೆ. ಈಗಾಗಲೇ 10 ಜನರು ಈ ಹೊಸ ವಿನ್ಯಾಸದ ಶವಪೆಟ್ಟಿಗೆಗೆ ಆರ್ಡರ್ ಕೊಟ್ಟಿದ್ದಾರೆ. ಗ್ರಾಹಕರ ಬೇಡಿಕೆ ಹೆಚ್ಚುತ್ತಲೇ ಇದೆ.
ನೋಡಿ ಹೇಗಿದೆ ಬಾರ್ಬಿ ಮಹಾತ್ಮೆ! ಏನಂತೀರಿ ನೀವು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:01 pm, Thu, 3 August 23