Viral: ಹಡಗಿನಲ್ಲಿಯೂ ಸಂಧ್ಯಾವಂದನೆ ಮಾಡುವ ಕ್ಯಾಪ್ಟನ್​; ಲಿಂಕ್ಡ್ಇನ್​ನಲ್ಲಿ ಫೋಟೋ ವೈರಲ್

Sanatana : ನಮ್ಮ ಮೂಲಸಂಸ್ಕೃತಿಯನ್ನು ಎಲ್ಲಿ ಹೋದರೂ ಮರೆಯಬಾರದು, ಇಂದಿನ ಯುವಪೀಳಿಗೆಗೆ ಇಂಥವರ ಮಾರ್ಗದರ್ಶನದ ಅಗತ್ಯವಿದೆ ಎಂದು ಒಬ್ಬರು. ಇದಕ್ಕಾಗಿ ಕ್ಯಾಪ್ಟನ್​ ಹೆಚ್ಚುವರಿಯಾಗಿ ಏನನ್ನಾದರೂ ಪಡೆಯುತ್ತಾರೆಯೇ? ಎಂದು ಇನ್ನೊಬ್ಬರು.

Viral: ಹಡಗಿನಲ್ಲಿಯೂ ಸಂಧ್ಯಾವಂದನೆ ಮಾಡುವ ಕ್ಯಾಪ್ಟನ್​; ಲಿಂಕ್ಡ್ಇನ್​ನಲ್ಲಿ ಫೋಟೋ ವೈರಲ್
ಹಡಗಿನಲ್ಲಿ ಸಂಧ್ಯಾವಂದನೆ ಮಾಡುತ್ತಿರುವ ಕ್ಯಾಪ್ಟನ್ ಗಣೇಶ (ಸೌಜನ್ಯ : ಲಿಂಕ್ಡ್​ಇನ್​)
Follow us
|

Updated on:Aug 02, 2023 | 12:45 PM

Captain : ‘ವೃತ್ತಿನಿಮಿತ್ತ ಸದಾಕಾಲ ಹಡಗಿನಲ್ಲಿಯೇ ವಾಸಿಸುವ ಕ್ಯಾಪ್ಟನ್ ಗಣೇಶ (Captain Ganesh), ಸಂಧ್ಯಾವಂದನೆ ಮತ್ತು ಅನುಷ್ಠಾನವನ್ನು (Sandhyavandhana and Anushtana) ತಪ್ಪದೆಯೇ ಮಾಡುತ್ತಾರೆ. ನಿಜಕ್ಕೂ ಇಂಥವರು ಸ್ಪೂರ್ತಿದಾಯಕ. ನಿಮ್ಮ ಸಂಸ್ಕೃತಿಯನ್ನು ಎಂದಿಗೂ ಮರೆಯಬೇಡಿ, ನಿಮ್ಮ ಬೇರುಗಳನ್ನು ಎಂದಿಗೂ ಮರೆಯಬೇಡಿ, ನಿಮ್ಮ ಪೂರ್ವಜರನ್ನು ಎಂದಿಗೂ ಮರೆಯಬೇಡಿ, ನಾವು ಯಾರು ಎಂಬುದನ್ನು ಎಂದಿಗೂ ಮರೆಯಬೇಡಿ. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ’ ಆಶು ಸಿಂಘ್​ ಎನ್ನುವವರು ಈ ಫೋಟೋಗೆ ಹೀಗೆ ಒಕ್ಕಣೆ ಬರೆದು ಲಿಂಕ್ಡ್​ಇನ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ಈ ಮಗು ಯಾರು, ಭೇಟಿಯಾಗಬೇಕು, ಅಪ್ಪಿಕೊಳ್ಳಬೇಕು; ಶಂಕರ್ ಮಹಾದೇವನ್

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈತನಕ ಸುಮಾರು 1,500 ಜನರು ಈ ಪೋಸ್ಟ್​ ಅನ್ನು ಲೈಕ್ ಮಾಡಿದ್ದಾರೆ. ಸುಮಾರು 32 ಜನರು ಪ್ರತಿಕ್ರಿಯಿಸಿದ್ದಾರೆ. ಇಂಥ ಸಮಯದಲ್ಲಿಯೂ ನಿಮ್ಮ ಮೂಲ ಮತ್ತು ಸಂಪ್ರದಾಯಗಳಿಗೆ ನಿಷ್ಠರಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಒಬ್ಬರು ಹೇಳಿದ್ದಾರೆ. ನಿಜಕ್ಕೂ ಇದು ಚೈತನ್ಯದಾಯಕವಾಗಿದೆ, ತಾಯಿ ಗಾಯತ್ರಿ ನಮ್ಮನ್ನು ಕಾಪಾಡುತ್ತಾಳೆ ಎಂದಿದ್ದಾರೆ ಇನ್ನೊಬ್ಬರು. ಗ್ರೇಟ್​! ಕೆಲವೊಮ್ಮೆ ಜನರನ್ನು ನಿರ್ಲಕ್ಷಿಸಿ ನಮ್ಮ ನಿತ್ಯಚಟುವಟಿಕೆಗಳಿಗೆ ಗಮನ ಕೊಡುವುದೊಂದೇ ದಾರಿ ಎಂದು ಮತ್ತೊಬ್ಬರು ಹೇಳಿದ್ಧಾರೆ.

ಇದನ್ನೂ ಓದಿ : Viral Video: ತೋಳದಂತೆ ಕಾಣಿಸಿಕೊಳ್ಳಲು ರೂ 20 ಲಕ್ಷ ಖರ್ಚು ಮಾಡಿದ ವ್ಯಕ್ತಿಯ ವಿಡಿಯೋ

ಅವರು ಇದಕ್ಕಾಗಿ ಹೆಚ್ಚುವರಿಯಾಗಿ ಏನನ್ನಾದರೂ ಪಡೆಯುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ ಒಬ್ಬರು. ನಾವು ಎಲ್ಲಿಯೇ ಹೋದರೂ ನಮ್ಮ ಮೂಲಬೇರುಗಳನ್ನು ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು, ಧನ್ಯವಾದಗಳು ಈ ಪೋಸ್ಟ್​ ಅನ್ನು ಹಂಚಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ಇನ್ನೊಬ್ಬರು. ನಮ್ಮ ಸಂಸ್ಕೃತಿಯನ್ನು ಹೇಗೆ ಅಳವಡಿಸಿಕೊಳ್ಳಬೇಕು ಮತ್ತು ನಾವು ಹೇಗಿರಬೇಕು ಎಂಬುದನ್ನು ಇಂಥ ಆತ್ಮಗಳು ಪ್ರೇರೇಪಿಸುತ್ತವೆ. ವಿಶೇಷವಾಗಿ ಇಂದಿನ ಯುವಪೀಳಿಗೆಗೆ ಇಂಥವರ ಮಾರ್ಗದರ್ಶನ ಬೇಕು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ಈ ಬಾಲಗಂಧರ್ವ ನಿಮ್ಮೂರಲ್ಲಿದ್ದಾನೆಯೇ? ದಯವಿಟ್ಟು ತಿಳಿಸಿ 

ಕೆಲ ವಾರಗಳ ಹಿಂದೆ ಕರ್ತವ್ಯ ನಿರತ ಬಿಎಂಟಿಸಿ ಬಸ್​ ಕಂಡಕ್ಟರ್​ ಒಬ್ಬರ ಮುಖಕ್ಕೆ ಮೊಬೈಲ್​ ಹಿಡಿದ ‘ನೀತಿಶಿಕ್ಷಕಿ’ಯೊಬ್ಬರು, ‘ಸರ್ಕಾರಿ ನೌಕರರಾಗಿ ನೀವು ನಮಾಜ್​ ಟೋಪಿ (Muslim skullcap) ಧರಿಸಿದ್ದು ತಪ್ಪು’ ಎಂದು ತರಾಟೆಗೆ ತೆಗೆದುಕೊಂಡರಷ್ಟೇ ಅಲ್ಲ, ಬಲವಂತವಾಗಿ ಆ ಟೋಪಿಯನ್ನು ತೆಗೆಸುವಲ್ಲಿ ಯಶಸ್ವಿಯೂ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು. ಅಕಸ್ಮಾತ್​ ಕ್ಯಾಪ್ಟನ್​ ಗಣೇಶ ಅವರ ಹಡಗಿನಲ್ಲಿ ಈ ಮಹಿಳೆ ಪ್ರಯಾಣಿಸುತ್ತಿದ್ದರೆ?

ಈ ವಿಷಯವಾಗಿ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 12:38 pm, Wed, 2 August 23

ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ
ಸದ್ಯಕ್ಕೆ ಜಾಮೀನಿಗೆ ಅರ್ಜಿ ಹಾಕಲ್ಲ ನಟ ದರ್ಶನ್: ವಕೀಲರಿಂದ ಮಾಹಿತಿ
ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಪ್ಯಾರಾ ಅಥ್ಲೀಟ್ಸ್
ಪ್ರಧಾನಿ ಮೋದಿಯನ್ನು ಮನಸಾರೆ ಹೊಗಳಿದ ಪ್ಯಾರಾ ಅಥ್ಲೀಟ್ಸ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ವಿಡಿಯೋ: ಕ್ಯಾಮೆರಾ ನೋಡಿ, ಅಸಹ್ಯವಾಗಿ ಸಂಜ್ಞೆ ಮಾಡಿದ ದರ್ಶನ್
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಐಫೋನ್ 15 ಮೇಲೆ ₹10,000 ದರ ಕಡಿತ ಘೋಷಿಸಿದ ಆ್ಯಪಲ್!
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ಬೇಸರ
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಮಂಡ್ಯ ಗಣೇಶ ಮೆರವಣಿಗೆ ವೇಳೆ ಗಲಾಟೆ ವಿಚಾರ: ಸಚಿವ ಜಮೀರ್ ಹೇಳಿದ್ದೇನು?
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಪ್ಯಾರಾಲಿಂಪಿಕ್ಸ್ ಸ್ಪರ್ಧಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಹೊಸದಾಗಿ ಸೇರ್ಪಡೆಯಾದ ಬಿಎಂಟಿಸಿ ಬಸ್​ಗಳ ವಿಶೇಷತೆ ಏನೇನು ಗೊತ್ತಾ?
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ಮೆರವಣಿಗೆ ವೇಳೆ ಕಲ್ಲೆಸೆತ: ಪ್ರತ್ಯಕ್ಷದರ್ಶಿಗಳಿಂದ ವಿವರವಾದ ಮಾಹಿತಿ
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?
ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ನಾಗಮಂಗಲದಲ್ಲಿ ಹೇಗಿದೆ ಈಗ ಪರಿಸ್ಥಿತಿ?