Viral Video: ಆಫೀಸಿನಲ್ಲಿ ಭಾಂಗ್ರಾ; ನಿಜಕ್ಕೂ ಇದು ಉತ್ತಮ ಸ್ಟ್ರೆಸ್ ಬಸ್ಟರ್​ ಎನ್ನುತ್ತಿರುವ ನೆಟ್ಟಿಗರು

Bhangra : ಕಂಪೆನಿಯೊಂದು ತನ್ನ ಉದ್ಯೋಗಿಗಳ ಸ್ವಾಸ್ಥ್ಯಕ್ಕಾಗಿ ಭಾಂಗ್ರಾ ಕಲಾವಿದರಿಂದ ತರಬೇತಿ ಕೊಡಿಸುತ್ತಿದೆ. ಡೆಡ್​ಲೈನ್​ನಿಂದಾಗಿ ಕಾರ್ಯದೊತ್ತಡ ನಿರ್ವಹಿಸಿಕೊಳ್ಳಲು ನಿಮ್ಮ ಕಂಪೆನಿ ನಿಮಗೆ ಹೇಗೆ ಸಹಕರಿಸುತ್ತಿದೆ?

Viral Video: ಆಫೀಸಿನಲ್ಲಿ ಭಾಂಗ್ರಾ; ನಿಜಕ್ಕೂ ಇದು ಉತ್ತಮ ಸ್ಟ್ರೆಸ್ ಬಸ್ಟರ್​ ಎನ್ನುತ್ತಿರುವ ನೆಟ್ಟಿಗರು
ಆಫೀಸೊಂದರಲ್ಲಿ ಉದ್ಯೋಗಿಗಳು ಭಾಂಗ್ರಾ ನೃತ್ಯದಲ್ಲಿ ತೊಡಗಿಕೊಂಡಿರುವುದು
Follow us
|

Updated on:Aug 01, 2023 | 11:33 AM

Stress Buster : ಶಾಲೆ ಮುಗಿಯುವತನಕ ದೇಹಕ್ಕೆ ವ್ಯಾಯಾಮವಿರುತ್ತದೆ. ಕಾಲೇಜು ಮುಗಿದು ಉದ್ಯೋಗಕ್ಕೆ ಸೇರುತ್ತಿದ್ದಂತೆ ಮೈ ಜಡತ್ವಕ್ಕಿಳಿಯುತ್ತದೆ. ದಿನಗಟ್ಟಲೇ ಆಫೀಸಿನಲ್ಲಿ ಸ್ಕ್ರೀನ್​ ಮುಂದೆ ಕುಳಿತು ಕೆಲಸ ಮಾಡುವುದು ಅನಿವಾರ್ಯವಾದಾಗ ಮತ್ತು ಇದರೊಂದಿಗೆ ಡೆಡ್​ಲೈನ್​ನ ಒತ್ತಡವೂ ಸೇರಿದಾಗ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಿಗಡಾಯಿಸಲಾರಂಭಿಸುತ್ತದೆ. ಈ ಕಾರಣಕ್ಕೆ ಕೆಲ ಕಂಪೆನಿಗಳು ತಮ್ಮ ಉದ್ಯೋಗಿಗಳ ಉತ್ತಮ ಸ್ವಾಸ್ಥ್ಯಕ್ಕಾಗಿ ಯೋಗ, ವ್ಯಾಯಾಮ, ಜಿಮ್​ ತರಬೇತುದಾರನ್ನು ನೇಮಿಸಿಕೊಂಡಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ಮಾತ್ರ ಇದೇ ವಿಷಯಕ್ಕೆ ಸಂಬಂಧಿಸಿದ್ದಾಗಿದ್ದು ಭಿನ್ನವೂ ಮತ್ತು ವಿಶೇಷವೂ ಆಗಿದೆ. ಭಾಂಗ್ರಾ (Bhangra) ನೃತ್ಯ ತರಬೇತುದಾರರೊಬ್ಬರು ಕಂಪೆನಿಯ ಉದ್ಯೋಗಿಗಳಿಗೆ ಈ ನೃತ್ಯವನ್ನು ಹೇಳಿಕೊಡುತ್ತಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Sahil sharma (@sahil_sharma0007)

‘ಇಂಥ ಆಫೀಸು ಸಿಗಬೇಕು’ ಎಂಬ ಒಕ್ಕಣೆಯೊಂದಿಗೆ ಕಲಾವಿದ ಸಾಹಿಲ್ ಶರ್ಮಾ ಇದನ್ನು ಇನ್​ಸ್ಟಾನಲ್ಲಿ ಹಂಚಿಕೊಂಡಿದ್ದಾರೆ. ಶರ್ಮಾ ಕಂಪೆನಿಯೊಂದರ ಉದ್ಯೋಗಿಗಳಿಗೆ ಭಾಂಗ್ರಾ ನೃತ್ಯ ಹೇಳಿಕೊಡುತ್ತಿದ್ದಾರೆ. ಉದ್ಯೋಗಿಗಳು ಶಾಲಾಮಕ್ಕಳಂತೆ ಮೈಚಳಿ ಬಿಟ್ಟು ನರ್ತಿಸಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಸ್ಫೂರ್ತಿಗೊಂಡಿದ್ದಾರೆ.

ಇದನ್ನೂ ಓದಿ : Viral: ಅಮೇಝಾನ್​; ಆರ್ಡರ್ ಮಾಡದೆಯೂ 100ಕ್ಕೂ ಹೆಚ್ಚು ಪಾರ್ಸೆಲ್​​ ಮಹಿಳೆಯನ್ನು ತಲುಪಿದಾಗ

ಈ ವಾತಾವರಣ ನನಗೆ ಇಷ್ಟವಾಗುತ್ತಿದೆ. ಇಂಥ ಕಂಪೆನಿಯಲ್ಲಿ ನಾನು ಉಚಿತವಾಗಿ ಕೆಲಸ ಮಾಡಲು ಇಚ್ಛಿಸುತ್ತಿದ್ದೇನೆ ಎಂದು ಒಬ್ಬರು. ನಿಜಕ್ಕೂ ಇದು ಸ್ಟ್ರೆಸ್​ ಬಸ್ಟರ್​​, ಎಲ್ಲ ಆಫೀಸುಗಳಲ್ಲಿಯೂ ಇಂಥ ಚಟುವಟಿಕೆಗಳಿಗೆ ಆದ್ಯತೆ ಕೊಡಬೇಕು ಎಂದು ಇನ್ನೊಬ್ಬರು. ನನಗೂ ಇಂಥ ಆಫೀಸು ಬೇಕು ಎಂದು ಮತ್ತೊಬ್ಬರು. ನಾನು ಈ ಸೆಷನ್​ ಅನ್ನು ನಿಜಕ್ಕೂ ಎಂಜಾಯ್ ಮಾಡಿದೆ, ಕೆಲಸ ಮಾಡಲು ಇದು ನನಗೆ ಚೈತನ್ಯವನ್ನು ತಂದುಕೊಟ್ಟಿತು ಎಂದಿದ್ದಾರೆ ಈ ಕಂಪೆನಿಯ ಉದ್ಯೋಗಿಯೊಬ್ಬರು.

ಇದನ್ನೂ ಓದಿ : Viral Video;ತೊರೆದು ಜೀವಿಸಬಹುದೇ ನಿಮ್ಮ ಸಿರಿಕಂಠವ; 5 ಮಿಲಿಯನ್ ಕೇಳುಗರನ್ನು ತಲುಪಿದ ಈ ದಾಸರಪದ

ಮೂರು ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಅನ್ನು ಸುಮಾರು 3 ಮಿಲಿಯನ್​ ಜನರು ನೋಡಿದ್ದಾರೆ. 1.7 ಲಕ್ಷದಷ್ಟು ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 11:26 am, Tue, 1 August 23

ತಾಜಾ ಸುದ್ದಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ