Viral: ಶರ್ಟ್​ಲೆಸ್​ ಜೋ ಬೈಡೆನ್​; ಸೂರ್ಯಸ್ನಾನದ ವೇಳೆ ಕ್ಯಾಮೆರಾಗೆ ಸಿಕ್ಕಿಬಿದ್ದಾಗ

Joe Biden : 80 ವರ್ಷದವರು ಬೇಸ್​ಬಾಲ್ ಕ್ಯಾಪ್​ ಅನ್ನು ಹೀಗೆ ಧರಿಸುತ್ತಾರೆಯೇ? ಈ ಫೋಟೋ ಮುಜುಗರ ತರಿಸುತ್ತಿದೆ. ಮುಂದಿನ ಚುನಾವಣೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೇನೆ... ಅಂತೆಲ್ಲ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

Viral: ಶರ್ಟ್​ಲೆಸ್​ ಜೋ ಬೈಡೆನ್​; ಸೂರ್ಯಸ್ನಾನದ ವೇಳೆ ಕ್ಯಾಮೆರಾಗೆ ಸಿಕ್ಕಿಬಿದ್ದಾಗ
ಅಮೆರಿಕದ ಅಧ್ಯಕ್ಷ ಜೋ ಬೈಡೆನ್​ ಬೀಚ್​ ವಿಹಾರದಲ್ಲಿ
Follow us
ಶ್ರೀದೇವಿ ಕಳಸದ
|

Updated on: Aug 01, 2023 | 12:38 PM

US President : ಈ ಹಿಂದೆ ವ್ಲಾಡಿಮಿರ್ ಪುಟಿನ್​ ಶರ್ಟ್​ ಇಲ್ಲದೆಯೇ ಕುದುರೆ ಸವಾರಿ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು. ನಂತರ ಡೊನಾಲ್ಡ್​ ಟ್ರಂಪ್ (Donald Trump) ಅಮೆರಿಕದ ಪ್ರಸಿದ್ಧ ನಟ ​ಸಿಲ್ವೆಸ್ಟರ್​​ ಸ್ಟಲ್ಲೋನ್​ ದೇಹಕ್ಕೆ ತಮ್ಮ ರುಂಡವನ್ನು ಫೋಟೋಶಾಪ್​ ಮಾಡಿಕೊಂಡು ನಾನೇನು ಕಮ್ಮಿ ಎಂದಿದ್ದರು. ಇದೀಗ ಅಮೆರಿಕದ ಅಧ್ಯಕ್ಷ ಜೋ ಬೈಡೆನ್​ (Joe Biden) ತಮ್ಮ ಮನೆಯ ಬಳಿ ಇರುವ ರೆಹೊಬೋತ್ ​(Rehoboth) ಬೀಚ್​ನಲ್ಲಿ ಶರ್ಟ್​ ಇಲ್ಲದೆ ವಿಹರಿಸುತ್ತ ನಾನೇನು ಕಮ್ಮಿ ಎನ್ನುತ್ತಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗುತ್ತಿವೆ.

80 ವರ್ಷದ ಜೋ ಬೈಡೆನ್​ ಭಾನುವಾರದಂದು ಸೂರ್ಯಸ್ನಾನಕ್ಕಾಗಿ ರೆಹೊಬೋತ್​ ಬೀಚಿಗೆ ಹೋದರು. ಈ ಸಂದರ್ಭಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ಅವರ ಶರ್ಟ್​ಲೆಸ್​ ಫೋಟೋಗಳು ವೈರಲ್ ಆಗಿವೆ. ಬೀಚ್​ಗೆ ಬಂದ ಪತ್ರಕರ್ತ ಎರಿಕ್​ ಗೆಲ್ಲರ್​ ಬೈಡೆನ್​ ಫೋಟೋಗಳನ್ನು ತೆಗೆದು, ಅವುಗಳನ್ನು ಸೋಮವಾರದಂದು X (Twitter) ನಲ್ಲಿ ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Viral Video: ಆಫೀಸಿನಲ್ಲಿ ಭಾಂಗ್ರಾ; ನಿಜಕ್ಕೂ ಇದು ಉತ್ತಮ ಸ್ಟ್ರೆಸ್ ಬಸ್ಟರ್​ ಎನ್ನುತ್ತಿರುವ ನೆಟ್ಟಿಗರು

ನೆಟ್ಟಿಗರು ಅನೇಕ ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ವಯಸ್ಸಿನಲ್ಲಿಯೂ ಬೈಡೆನ್​ ಆಕರ್ಷಕವಾಗಿ ಕಾಣಿಸುತ್ತಾರೆ ಎಂದು ನಿಮಗೆ ಅನ್ನಿಸುತ್ತಿಲ್ಲವೇ? ಎಂದು ಕೇಳಿದ್ದಾರೆ ಒಬ್ಬರು. ಇದು ಹದಿನೈದು ವರ್ಷಗಳ ಹಿಂದೆ ಇವರು 85ನೇ ವಯಸ್ಸಿನಲ್ಲಿದ್ಧಾಗ ತೆಗೆದ ಫೋಟೋ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ಈ ವಯಸ್ಸಿನಲ್ಲಿ ಅವರು ಹೀಗಿರಲು ಬಯಸುತ್ತಾರೆಂದರೆ ಅದು ಅವರ ಇಷ್ಟ ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral: ಅಮೇಝಾನ್​; ಆರ್ಡರ್ ಮಾಡದೆಯೂ 100ಕ್ಕೂ ಹೆಚ್ಚು ಪಾರ್ಸೆಲ್​​ ಮಹಿಳೆಯನ್ನು ತಲುಪಿದಾಗ

ನಿಜಕ್ಕೂ ಇವರು ಬೈಡೆನ್​? ಎಂದು ಕೆಲವರು ಕೇಳಿದ್ದಾರೆ. ಮುಂದಿನ ಚುನಾವಣೆಯವರೆಗೆ ನಾನು ಏನು ಮಾಡಬೇಕೆಂದು ನನಗೆ ಅರ್ಥವಾಗುತ್ತಿಲ್ಲ, ನಮ್ಮ ದೇಶದ ಸ್ಥಿತಿಯ ಬಗ್ಗೆ ನಿಜಕ್ಕೂ ನಾಚಿಕೆ ಎನ್ನಿಸುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ಒಂದು ಕುಟುಂಬವು ನಿಮ್ಮ ವಿಮಾನದಲ್ಲಿ ಪ್ರಯಾಣ ಮಾಡಬೇಕೆಂದು ಇಚ್ಛಿಸಿದರೆ ನೀವು ನಿಮ್ಮ ವಿಮಾನವನ್ನು ಬಿಟ್ಟು ಕೊಡುತ್ತೀರಾ? ಎಂದು ಬೈಡೆನ್​ಗೆ ಕೇಳಿದ್ದಾರೆ ಮಗದೊಬ್ಬರು.

ಈ ಚಿತ್ರವನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ