Viral Video: ‘ಈ ಮಗು ಯಾರು, ಭೇಟಿಯಾಗಬೇಕು, ಅಪ್ಪಿಕೊಳ್ಳಬೇಕು’ ಶಂಕರ್ ಮಹಾದೇವನ್

Child Prodigy : 'ಡೀಡೀಯಾಡ್ಯಾನೇ ರಂಗ' ಮೂಲಕ ಮಿಲಿಯನ್​ಗಟ್ಟಲೆ ಜನರ ಹೃದಯವನ್ನು ಕದ್ದ ಈ ಬಾಲೆಯನ್ನು ದೇಶದ ಸಂಗೀತ ವಿದ್ವಾಂಸರೆಲ್ಲ ಹುಡುಕುತ್ತಿದ್ದಾರೆ. ನೀವೂ ಈ ಬಾಲೆಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಿ, ಹಾಡುಗಳನ್ನೂ ಕೇಳಿ.

Viral Video: 'ಈ ಮಗು ಯಾರು, ಭೇಟಿಯಾಗಬೇಕು, ಅಪ್ಪಿಕೊಳ್ಳಬೇಕು' ಶಂಕರ್ ಮಹಾದೇವನ್
ಬಾಲಪ್ರತಿಭೆ ಶಾಲ್ಮಲೀ ಶ್ರೀನಿವಾಸ್
Follow us
ಶ್ರೀದೇವಿ ಕಳಸದ
|

Updated on:Aug 01, 2023 | 3:52 PM

Shankar Mahadevan : ‘ಹುಟ್ಟುತ್ತಲೇ ಟೀಚರ್ ಆಗಿರುವವರನ್ನು ನೀವು ನೋಡಬೇಕೆ? ನೋಡಿ ಇಲ್ಲಿದ್ದಾರೆ ಆಕೆ!ಇದನ್ನೇ ದೇವರ ಆಶೀರ್ವಾದ ಎನ್ನುವುದು. ಅಂದಹಾಗೆ ಈ ಮುದ್ದು ಯಾರು, ನಾನಿವಳನ್ನೊಮ್ಮೆ ಭೇಟಿಯಾಗಬೇಕು, ಗಟ್ಟಿಯಾಗಿ ಅಪ್ಪಿಕೊಳ್ಳಬೇಕು ಮತ್ತವಳಿಗೆ ಆಶೀರ್ವದಿಸಬೇಕು ಎಂದು ಬಯಸುತ್ತಿದ್ದೇನೆ. ಎಷ್ಟೊಂದು ಸ್ಪಷ್ಟವಾಗಿ ಮಧುರವಾಗಿ ಸ್ವರಸಂಗತಿಗಳನ್ನು ಪ್ರಸ್ತುತ ಪಡಿಸಿದ್ದಾಳೆ’ ಖ್ಯಾತ ಗಾಯಕ ಶಂಕರ ಮಹಾದೇವನ್​ ಹೀಗೊಂದು ಒಕ್ಕಣೆ ಬರೆದು ಈ ಕೆಳಗಿನ ವಿಡಿಯೋ ಅಪ್​ಲೋಡ್​ ಮಾಡಿ ಈ ಪುಟಾಣಿ ಸಂಗೀತ ಟೀಚರ್ (Music Teacher) ಅನ್ನು ಹುಡುಕುತ್ತಿದ್ದಾರೆ. ಇಷ್ಟೇ ಅಲ್ಲ ಕೆಲದಿನಗಳ ಹಿಂದೆ ಕರ್ನಾಟಕ ಸಂಗೀತ ಕಲಾವಿದೆಯರಾದ ರಂಜಿನಿ ಮತ್ತು ಗಾಯತ್ರಿ ಕೂಡ ಈಕೆಯ ಬಗ್ಗೆ ಟ್ವೀಟ್​ ಮಾಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ, ‘ಹುಷಾರಾಗಿರಬೇಕು, ಈಕೆ ನಾಳೆಯೊಂದಿನ ನಮ್ಮ ಕಛೇರಿ ನಡೆದಾಗ ಸಂಗೀತ ವಿಶ್ಲೇಷಣೆಗೆ ತೊಡಗಿಬಿಟ್ಟರೆ!’

View this post on Instagram
ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

A post shared by Shankar Mahadevan (@shankar.mahadevan)

ನಾಲ್ಕೂವರೆ ವರ್ಷದ ಶಾಲ್ಮಲೀ ಶ್ರೀನಿವಾಸ್ (Shalmalee Srinivas) ವಾಸವಾಗಿರುವುದು ಬೆಂಗಳೂರಿನಲ್ಲಿ. ಹಾಡುತ್ತ, ವೀಣೆ ಮತ್ತು ಕೀಬೋರ್ಡ್​ ನುಡಿಸುತ್ತ, ಕೇಳಿ ಬಂದ ಸಂಗೀತಕ್ಕೆ ಹೆಜ್ಜೆಯನ್ನೂ ಹಾಕುತ್ತ ಕಲೆಯನ್ನೇ ಉಸಿರಾಡುತ್ತಿರುವ ಈ ಪುಟಾಣಿ ಸಾಮಾಜಿಕ ಜಾಲತಾಣಗಳ ಮೂಲಕ ಈಗಾಗಲೇ ಅನೇಕ ಸಂಗೀತ ದಿಗ್ಗಜರ ಗಮನ ಸೆಳೆದಿದ್ದಾಳೆ. ಈಕೆ ಹಾಡಿದ ‘ಡೀಡೀಯಾಡ್ಯಾನೇ ತಂಗ’ ಹಾಡು 1 ಮಿಲಿಯನ್​ಗಿಂತಲೂ  ಹೆಚ್ಚು ಜನರಿಂದ ಕೇಳಲ್ಪಟ್ಟಿದೆ.

ಮೊಬೈಲ್​ ರಿಂಗ್​ಟೋನ್ ಆಗಲಿ, ಸಿನೆಮಾದ ಗೀತೆಯ ಸಾಲಾಗಲಿ ಕಿವಿಗೆ ಬಿದ್ದ ತಕ್ಷಣ ಓಡಿಬಂದು ಅದನ್ನು ಒಂದೇ ಬೆರಳಿನಿಂದ ಕೀಬೋರ್ಡ್​ನಲ್ಲಿ ನುಡಿಸುವ ಖಯಾಲಿಗೆ ಬಿದ್ದಾಗ ಈಕೆಗೆ ಕೇವಲ ಎರಡೂವರೆ ವರ್ಷ. ಹೀಗೆ ಕೀಬೋರ್ಡ್​ನೊಂದಿಗೆ ಮೋಹಕ್ಕೆ ಬಿದ್ದ ಈಕೆ ಕ್ರಮೇಣ ಅಮ್ಮ ಹೇಳಿಕೊಟ್ಟ ಹಾಡುಗಳನ್ನು ಕಲಿಯತೊಡಗಿದಳು.  ಹಿಂದೂಸ್ತಾನಿ ಗಾಯಕ ಮಹೇಶ ಕಾಳೆಯವರ (Mahesh Kale) ಸರಗಮ್​ ರೀಲನ್ನು ರೀಮಿಕ್ಸ್​ ಮಾಡಿದ ಅತೀ ಚಿಕ್ಕವಯಸ್ಸಿನ ಗಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ‘ಬುಕ್​ ಬ್ರಹ್ಮ’ ಶಾಲ್ಮಲಿ ಮತ್ತು ಈಕೆಯ ತಾಯಿಯನ್ನು ಸಂದರ್ಶಿಸಿದ ವಿಡಿಯೋ ಈ ಕೆಳಗಿದೆ.

ಆಧುನಿಕ ಜಗತ್ತಿನಲ್ಲಿ ಅದರಲ್ಲಿಯೂ ಮಹಾನಗರಗಳಲ್ಲಿ ಅನೇಕ ಪ್ರಭಾವಗಳಿಂದ ಮಕ್ಕಳ ಮನಸ್ಸನ್ನು, ಬುದ್ಧಿಯನ್ನು, ಹೃದಯವನ್ನು ಕಾಪಾಡುವುದು ದೊಡ್ಡ ಸವಾಲು. ಆದರೆ ತಂದೆಯೋ ತಾಯಿಯೋ ತಮ್ಮ ಗಮನವನ್ನು ಪೂರ್ತಿ ಮಗುವಿನ ಮೇಲೆ ಕೇಂದ್ರೀಕರಿಸಿದಾಗ ಖಂಡಿತ ಮಕ್ಕಳೊಳಗಿನ ಪ್ರತಿಭೆ, ಆಸಕ್ತಿಯನ್ನು ಪೋಷಿಸಬಹುದು. ಇದಕ್ಕೆ ಈ ಪುಟ್ಟ ಶಾಲ್ಮಲಿಯೇ ಉದಾಹರಣೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:20 pm, Tue, 1 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ