Viral Video: ಈ ಎಲೆಕ್ಟ್ರಿಕ್ ಬೈಕ್‌ನ ಹಾರ್ನ್ ಕೇಳಿ ನಗುತ್ತೀರೋ ಅಥವಾ…
Horns : ಹಿಂದಿರುಗಿ ನೋಡದೆಯೇ ಯಾವ ಹಾರ್ನ್ ಯಾವ ಗಾಡಿಯದು ಎನ್ನುವುದು ನಮಗೆ ಗೊತ್ತಾಗಿಬಿಡುತ್ತದೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ, ಇಲ್ಲಿರುವ ಹಾರ್ನ್ ಕೇಳಿ, ನಿಮ್ಮ ಅಭಿಪ್ರಾಯ ತಿಳಿಸಿ.
Bikes : ಬಾಲ್ಯದಿಂದಲೂ ನೀವು ಕೇಳಿದಂತ ಹಾರ್ನ್ ಶಬ್ದಗಳನ್ನು ನೆನಪಿಸಿಕೊಳ್ಳಿ; ಸೈಕಲ್, ದ್ವಿಚಕ್ರವಾಹನ ಆಟೋ, ಟಂಟಂ, ಟೆಂಪೋ, ಟ್ರಕ್, ಬಸ್ ಹೀಗೆ… ಥರಥರದ ಶಬ್ದಗಳು ನಿಮ್ಮ ಸ್ಮೃತಿಪಟಲದ ಮೇಲೆ ಹಾಗೇ ಅಚ್ಚೊತ್ತಿಯೇ ಇವೆ, ಯಾವ ಹಾರ್ನ್ ಶಬ್ದ ಯಾವ ವಾಹನದ್ದು ಎನ್ನುವುದನ್ನು ಶಬ್ದದ ಮೂಲಕವೇ ಗ್ರಹಿಸುವಷ್ಟು. ಆದರೆ ‘ಜಲ್ದೀ ವಹಾಂ ಸೇ ಹಠೋ’ ಎಂಬ ಧ್ವನಿ ನಿಮ್ಮನ್ನು ತಲುಪಿದರೆ ನೀವು ಏನು ಮಾಡುತ್ತೀರಿ? ಇದೀಗ ವೈರಲ್ ಆಗಿರುವ ಈ ಎಲೆಕ್ಟ್ರಿಕ್ ಬೈಕ್‌ನ (Electric Bike) ಹಾರ್ನ್ ನಿಮ್ಮನ್ನು ನಗಿಸುತ್ತದೆಯೋ, ಭಯ ಬೀಳಿಸುತ್ತದೆಯೋ?
If u own a electric vehicle this has to be ur horn ??? pic.twitter.com/I9F3U9Pvhi
ಇದನ್ನೂ ಓದಿ— Munna (@dakuwithchaku) July 30, 2023
ಎಲೆಕ್ಟ್ರಿಕ್ ದ್ವಿಚಕ್ರವಾಹನದ ಈ ಹಾರ್ನ್ನೆ ನೆಟ್ಟಿಗರನ್ನು ಪ್ರತಿಕ್ರಿಯಿಸುವಂತೆ ಮಾಡುತ್ತಿದೆ. ಈ ವಿಡಿಯೋ ಅನ್ನು @dakuwithchaku ಎಂಬ ಟ್ವಿಟರ್ ಖಾತೆದಾರರು ಟ್ವೀಟ್ ಮಾಡಿದ್ದಾರೆ. ಸುರಿಯುತ್ತಿರುವ ಮಳೆಯಲ್ಲಿ ಈ ಬೈಕ್ ಸವಾರ ಹಾರ್ನ್ ಒತ್ತಿದಾಗ ‘ಬೇಗನೇ ಎಲ್ಲರೂ ಇಲ್ಲಿಂದ ಸರಿಯಿರಿ’ ಎಂದು ಕೂಗುತ್ತದೆ. ಎರಡು ದಿನಗಳ ಹಿಂದೆ ಮಾಡಲಾದ ಈ ಪೋಸ್ಟ್ ಅನ್ನು ಈತನಕ 1.1 ಮಿಲಿಯನ್ಗಿಂತಲೂ ಹೆಚ್ಚು ಜನರು ನೋಡಿದ್ದಾರೆ.
ಇದನ್ನೂ ಓದಿ : Viral Video: ಈ ಬಾಲಗಂಧರ್ವ ನಿಮ್ಮೂರಲ್ಲಿದ್ದಾನೆಯೇ? ದಯವಿಟ್ಟು ತಿಳಿಸಿ
ಯಾಕೆಂದು ಗೊತ್ತಿಲ್ಲ ನಾನಂತೂ ಈ ವಿಡಿಯೋ ಅನ್ನು ಬಹಳ ಪ್ರೀತಿಸುತ್ತಿದ್ದೇನೆ, ನಗುತ್ತಲೇ ಇದ್ದೇನೆ ಎಂದಿದ್ದಾರೆ ಒಬ್ಬರು. ನನ್ನ ಐಡಿಯಾ ಕದಿಯುವುದನ್ನು ನಿಲ್ಲಿಸಿ ಎಂದು ಇನ್ನೊಬ್ಬರು ಹೇಳಿದ್ದಾರೆ. ಛೆ ಎಂಥ ಕಿರಿಕಿರಿಯಾಗುತ್ತದೆ ಇದು ಎಂದಿದ್ದಾರೆ ಮತ್ತೊಬ್ಬರು. ಇಷ್ಟೊಂದು ಶಬ್ದ ಬೇಕೆ? ಮೊದಲೇ ಶಬ್ದಮಾಲಿನ್ಯದಿಂದ ಸಾಕಾಗಿದೆ ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Video: ‘ಈ ಮಗು ಯಾರು, ಭೇಟಿಯಾಗಬೇಕು, ಅಪ್ಪಿಕೊಳ್ಳಬೇಕು’; ಶಂಕರ್ ಮಹಾದೇವನ್
ಉಳಿದವರಿಗೇನೋ ಇದು ನಗು ತರಿಸಬಹುದು. ಆದರೆ ಮಕ್ಕಳು, ಮುದುಕರು ಮತ್ತು ಸೂಕ್ಷ್ಮ ಮನಸ್ಸಿನವರು ಈ ಗಾಡಿಯ ಹಾರ್ನ್ ಕೇಳಿದರೆ ಇಡೀ ದಿನ ಅವರನ್ನಿದು ಕಾಡದೇ ಬಿಡದು.
ಈ ವಿಡಿಯೋ ನೋಡಿದ ನೀವೇನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ