AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಓಲಾ ಎಲೆಕ್ಟ್ರಿಕ್​ನ ಉದ್ಯೋಗಿ ‘ಬಿಜ್ಲಿ’ಯ ಐಡಿ ಕಾರ್ಡ್​ ವೈರಲ್

Ola Electric: ಹೊಸ ಉದ್ಯೋಗಿಗೆ ಐಡಿ ಕೊಡಲಾಗಿದೆ ಎನ್ನುವುದನ್ನು ಓಲಾ ಎಲೆಕ್ಟ್ರಿಕ್​ನ ಸಿಇಓ ಭವೀಶ ಅಗರ್ವಾಲ್​ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ನೆಟ್ಟಿಗರು ಓಲಾ ಸ್ಕೂಟರ್​ಗೆ ಸಂಬಂಧಿಸಿ ಅನೇಕ ತಕರಾರುಗಳನ್ನು ಎತ್ತಿದ್ದಾರೆ.

Viral: ಓಲಾ ಎಲೆಕ್ಟ್ರಿಕ್​ನ ಉದ್ಯೋಗಿ 'ಬಿಜ್ಲಿ'ಯ ಐಡಿ ಕಾರ್ಡ್​ ವೈರಲ್
ಓಲಾ ಎಲೆಕ್ಟ್ರಿಕ್​ನ ಉದ್ಯೋಗಿ ಬಿಜ್ಲಿಯ ಐಡಿ ಕಾರ್ಡ್​
ಶ್ರೀದೇವಿ ಕಳಸದ
|

Updated on:Aug 01, 2023 | 1:32 PM

Share

Ola : ಪ್ರಾಣಿಗಳಿಗೂ ಐಡಿ ಕಾರ್ಡ್,​ ಆಸ್ಪತ್ರೆಯಲ್ಲಿ ಕೊಡುತ್ತಾರೆ ಸರಿ. ಆದರೆ ಕಂಪೆನಿಯಲ್ಲಿ? ಹೌದು ಬಿಜ್ಲಿ ಎಂಬ ನಾಯಿಯನ್ನು ಓಲಾ ಕಂಪೆನಿಯು ಅಧಿಕೃತ ಉದ್ಯೋಗಿಯನ್ನಾಗಿ ಸ್ವೀಕರಿಸಿದ್ದು ಎಂಪ್ಲಾಯಿ ಐಡಿ ಕಾರ್ಡ್ (ID Card) ಕೂಡ ಕೊಟ್ಟಿದೆ. ಈ ವಿಷಯವನ್ನು ಓಲಾ ಸಂಸ್ಥಾಪಕ ಮತ್ತು ಓಲಾ ಎಲೆಕ್ಟ್ರಿಕ್​ನ ಸಿಇಒ ಭವೀಶ್ ಅಗರ್ವಾಲ್ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ನೆಟ್ಟಿಗರನೇಕರು ಓಲಾ ಎಲೆಕ್ಟ್ರಿಕ್ ಸ್ಕೂಟರ್​​​ನೊಂದಿಗೆ ಇರುವ ತಮ್ಮ ತಕರಾರುಗಳ ಪಟ್ಟಿಯನ್ನು ನೀಡಿದ್ದಾರೆ. ಕೆಲವರನ್ನಷ್ಟೇ ಬಿಜ್ಲಿ ಸೆಳೆದಿದೆ.

ಸದ್ಯ ಬಿಜ್ಲಿಯ ಉದ್ಯೋಗಿಯಾಗ ನೇಮಕಗೊಂಡಿರುವುದು ಕೋರಮಂಗಲದ ಓಲಾ ಕಚೇರಿಯಲ್ಲಿ. ಇವರ ಎಂಪ್ಲಾಯಿ ‘440 V’. ಇದರೊಂದಿಗೆ ಬಿಜ್ಲಿಯ ರಕ್ತದ ಗುಂಪು ಮತ್ತು ಅದರ ಪಂಜಗಳ ವಿವರವನ್ನೂ ನಮೂದಿಸಲಾಗಿದೆ. ಮನುಷ್ಯ ಸಹೋದ್ಯೋಗಿಗಳು ಬಿಜ್ಲಿಗೆ ಏನಾದರೂ ತುರ್ತು ಸಂದೇಶ ಕಳಿಸಬೇಕೆಂದರೆ ಬಿಎ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

ಇದನ್ನೂ ಓದಿ : Viral: ಶರ್ಟ್​ಲೆಸ್​ ಜೋ ಬೈಡೆನ್​; ಸೂರ್ಯಸ್ನಾನದ ವೇಳೆ ಕ್ಯಾಮೆರಾಗೆ ಸಿಕ್ಕಿಬಿದ್ದಾಗ

ಹೊಸ ಸಹೋದ್ಯೋಗಿ ಈಗ ಅಧಿಕೃತವಾಗಿ! ಎಂದು ಭವೀಶ್ ಮಾಡಿದ ಈ ಟ್ವೀಟ್​ ಅನ್ನು ಸುಮಾರು 1.5 ಲಕ್ಷ ಜನರು ನೋಡಿದ್ದಾರೆ. 1,000ಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ ಮತ್ತು 100ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

ಕೆಲವರಷ್ಟೇ ಬಿಜ್ಲಿಯನ್ನು ಸ್ವಾಗತಿಸಿದ್ದಾರೆ. ಉಳಿದವರು ಓಲಾ ಸ್ಕೂಟರ್ ಬುಕ್​ ಮಾಡಿ ಎಷ್ಟು ದಿನಗಳಾದರೂ ತಲುಪಿಲ್ಲ ಎಂದೋ, ಸರ್ವಿಸ್​ ತಡವಾಗುತ್ತಿದೆ ಎಂದೋ, ಆರ್ಡರ್​ ಮರಳಿಸಿದ್ದಕ್ಕೆ ಹಣ ಇನ್ನೂ ತಮ್ಮನ್ನು ತಲುಪಿಲ್ಲವೆಂದೋ… ಹೀಗೆ ನೂರಾರು ಜನರು ಸಾಕ್ಷಿ ಸಮೇತ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:31 pm, Tue, 1 August 23