Viral Video: ಈ ಬಾಲಗಂಧರ್ವ ನಿಮ್ಮೂರಲ್ಲಿದ್ದಾನೆಯೇ? ದಯವಿಟ್ಟು ತಿಳಿಸಿ

Singers : ಸಿಗ್ನಲ್​ನ ಕೆಂಪು, ಹಸಿರು ದೀಪಗಳ ನಡುವಿನ ಸೆಕೆಂಡುಗಳ ಲೆಕ್ಕದಲ್ಲಿ ಈತ ತನ್ನ ಪ್ರತಿಭೆಯನ್ನು ತೋರಿ ತುತ್ತಿನ ಚೀಲವನ್ನು ನಿತ್ಯವೂ ತುಂಬಿಸಿಕೊಳ್ಳಬೇಕು. ಕೈಲಾಶ್​ ಖೇರ್ ಹಾಡಿರುವ 'ಸಂಯಾ' ಹಾಡನ್ನು ಈತನ ಕಂಠದಲ್ಲಿ ಕೇಳಿ.

Viral Video: ಈ ಬಾಲಗಂಧರ್ವ ನಿಮ್ಮೂರಲ್ಲಿದ್ದಾನೆಯೇ? ದಯವಿಟ್ಟು ತಿಳಿಸಿ
ಕೈಲಾಶ ಖೇರ್ ಹಾಡಿರುವ ಹಾಡನ್ನು ಈ ಬಾಲಕ ಹಾಡಿದ್ದಾನೆ
Follow us
ಶ್ರೀದೇವಿ ಕಳಸದ
|

Updated on:Aug 01, 2023 | 5:00 PM

Artist: ‘ಕೆಲವರ್ಷಗಳ ಕಾಲ ನಾನು ಗುರುವಿನ ಹುಡುಕಾಟದಲ್ಲಿದ್ದೆ. ಆದರೆ ನನಗೆ ಸೂಕ್ತವೆನ್ನಿಸುವ ಗುರು ಅಥವಾ ಸಂಗೀತ ಶಾಲೆ ಸಿಗಲೇ ಇಲ್ಲ. ಹಾಗಾಗಿ ಪಂ. ಕುಮಾರ ಗಂಧರ್ವ, ಪಂ. ಭೀಮಸೇನ್ ಜೋಶಿ, ಪಂ. ಗೋಕುಲೋತ್ಸವ ಮಹಾರಾಜ್, ಉಸ್ತಾದ್ ನುಸ್ರತ್ ಫತೇ ಅಲೀ ಖಾನ್​ ಇವರೇ ನನ್ನ ನಿಜವಾದ ಮತ್ತು ಮಾನಸ ಗುರುಗಳು’ ಬಾಲಿವುಡ್ ಗಾಯಕ ಕೈಲಾಶ್ ಖೇರ್ (Kailash Kher)​ ಹೀಗೆ ಹೇಳಿದ್ದನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದು ಈ ವೈರಲ್ ವಿಡಿಯೋದಲ್ಲಿರುವ ಬಾಲಕ. ಕೈಲಾಶ್ ಹಾಡಿದ ಹಾಡನ್ನೇ ಈ ಬಾಲಕ ಈ ವಿಡಿಯೋದಲ್ಲಿ ಹಾಡಿದ್ದಾನೆ.  ಯಾರಿವನು, ಎಲ್ಲಿರುತ್ತಾನೆ, ಹೇಗೆ ಹಾಡಲು ಕಲಿತ? ಏನೊಂದರ ಸುಳಿವೂ ಇಲ್ಲಿಲ್ಲ. ಆದರೆ ಸಿಗ್ನಲ್​ನ ಕೆಂಪು ದೀಪ ಮತ್ತು ಹಸಿರು ದೀಪಗಳ ನಡುವಿನ ಸೆಕೆಂಡು, ಮಿನಿಟುಗಳ ಲೆಕ್ಕದಲ್ಲಿ ತನ್ನ ಪ್ರತಿಭೆಯನ್ನು ತೋರಿ ತುತ್ತಿನ ಚೀಲವನ್ನು ಈತ ನಿತ್ಯವೂ ತುಂಬಿಸಿಕೊಳ್ಳಬೇಕು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by INDIAN UNPLUGGED ?️ (@indian_unplugged.in)

ಸಂಯಾ… ಎಂಬ ಈ ಹಾಡು 2007ರಲ್ಲಿ ಝೂಮ್​ರೇ (Jhoom Re) ಆಲ್ಬಮ್​ನಲ್ಲಿ ಅಡಕವಾಗಿದೆ. ಈ ಹಾಡನ್ನು ಬರೆದು ಹಾಡಿದ್ದು ಕೈಲಾಶ್​ ಖೇರ್​. ಸಂಗೀತ ಸಂಯೋಜನೆ ಮಾಡಿದ್ದು ಪರೇಶ್ ಕಾಮತ್ ಮತ್ತು ನರೇಶ್ ಕಾಮತ್​. ಇದೀಗ ಈ ಬಾಲಕ ಹಾಡಿದ ರೀತಿ ಸುಶ್ರಾವ್ಯ ಮತ್ತು ಭಾವಪೂರ್ಣ ಅಷ್ಟೇ ಅಲ್ಲ ವೃತ್ತಿಪರ ಗಾಯಕರ ಮಟ್ಟಿದಲ್ಲಿದೆ. ಇಂಥ ಪ್ರತಿಭೆಗಳಿಗೆ ಮಾರ್ಗದರ್ಶನ ಮಾಡುವವರು ಯಾರು? ಬೆಳಗ್ಗೆ ಐದಕ್ಕೆ ಎಬ್ಬಿಸಿ ರಿಯಾಝ್ ಮಾಡು ಎಂದು ಹೇಳುವವರಾದರೂ ಯಾರು? ದೊಡ್ಡ ದೊಡ್ಡ ವೇದಿಕೆಗಳಲ್ಲಿ ಅವಕಾಶ ಕೊಡಿಸುವವರು ಯಾರು? ನಾವಿರುವ ಜಗತ್ತಿನಲ್ಲಿಯೇ ಇವರೂ ಇರುವುದಲ್ಲವೆ? ಎಲ್ಲಾ ಕೊರತೆಗಳ ಮಧ್ಯೆ, ವಿಚಲಿತಗೊಳಿಸುವ ಸಂಗತಿಗಳ ಮಧ್ಯೆಯೇ ಇಂಥವರು ಸಂಗೀತವನ್ನಷ್ಟೇ ಧೇನಿಸಲು ಸಾಧ್ಯವಾಗುವುದು ಹೇಗೆ?

ಇದನ್ನೂ ಓದಿ : Viral Video: ‘ಈ ಮಗು ಯಾರು, ಭೇಟಿಯಾಗಬೇಕು, ಅಪ್ಪಿಕೊಳ್ಳಬೇಕು’; ಶಂಕರ್ ಮಹಾದೇವನ್ 

ಹಸಿವು ಎನ್ನುವುದು ಜನ್ಮಕ್ಕಂಟಿರುವುದು, ಹೊಟ್ಟೆ ತುಂಬಬೇಕೆಂದರೆ ಕಿವಿಗೆ ಬಿದ್ದ ಹಾಡನ್ನು ಶ್ರದ್ಧೆಯಿಂದ ಕೇಳಿ ಕಲಿತು ಹಾಡಿ ಜನರ ಮನಸ್ಸನ್ನು ಗೆಲ್ಲಬೇಕು. ಇದರ ಹೊರತಾಗಿ ಬೇರೆ ದಾರಿ ಏನಿದೆ? ಹೀಗೆ ಇಂಥ ಪ್ರತಿಭೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಚಾನೆಲ್​​ಗಳ ಕಣ್ಣಿಗೆ ಬೀಳುತ್ತವೆ. ರಿಯಾಲಿಟಿ ಷೋಗಳ ನಂತರ ಬೆಳಕಿಗೆ ಬರುತ್ತವೆ. ಅನುಕೂಲವಿದ್ದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿಕೊಂಡಿರುತ್ತವೆ. ಆಮೇಲೆ?

ಕೈಲಾಶ್​ ಖೇರ್​ನಂತೆ ಈತನೂ ದೊಡ್ಡ ಕಲಾವಿದನಾಗಲಾರನೆ? ಸಂಗೀತ ಸಂಸ್ಥೆಗಳು, ಕಲಾಪ್ರೇಮಿಗಳು ಈತನನ್ನು ಹುಡುಕಿ ಸಹಾಯ ಮಾಡಬಹುದಲ್ಲವೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:56 pm, Tue, 1 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ