Viral Video: ದೊಡ್ಡಣ್ಣ ಮತ್ತು ಪುಟ್ಟಣ್ಣನ ದೋಸ್ತಿ ಕ್ಷಣಗಳು ವೈರಲ್

Friendship : ಭಿನ್ನ ಜಾತಿಯ ಪ್ರಾಣಿಗಳು ಎಷ್ಟೊಂದು ಸಾಮರಸ್ಯದಿಂದ ಬದುಕುತ್ತಿವೆ ಎಂದು ಅಚ್ಚರಿಯಿಂದ ಈ ವಿಡಿಯೋ ನೋಡುತ್ತಿದ್ದಾರೆ ನೆಟ್ಟಿಗರು. ಎಂಥ ಸಾರ್ಥಕ ಕ್ಷಣಗಳು ಇವು ಎಂದು ಸಮಾಧಾನಗೊಳ್ಳುತ್ತಿದ್ದಾರೆ. ನೀವು?

Viral Video: ದೊಡ್ಡಣ್ಣ ಮತ್ತು ಪುಟ್ಟಣ್ಣನ ದೋಸ್ತಿ ಕ್ಷಣಗಳು ವೈರಲ್
ಬೆಕ್ಕನ್ನು ಮುದ್ದಿಸುತ್ತಿರುವ ಕುದುರೆ
Follow us
ಶ್ರೀದೇವಿ ಕಳಸದ
|

Updated on:Jul 31, 2023 | 6:49 PM

Pets : ಮನುಷ್ಯನಿಗೊಂದು ಸಾಕುಪ್ರಾಣಿ ಬೇಕು. ಆ ಸಾಕುಪ್ರಾಣಿಗಳಿಗೊಂದು ಸಾಕುಪ್ರಾಣಿ ಬೇಕು. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಕುದುರೆಯೊಂದು ಬೆಕ್ಕಿನ ತಲೆಯನ್ನು ನೆಕ್ಕಿ ಕಾಳಜಿ ವ್ಯಕ್ತಪಡಿಸುತ್ತಿದೆ. ಬೆಕ್ಕಿಗಿದು (Cat) ಇಷ್ಟವಾಗುತ್ತಿದೆಯೋ, ಅನಿವಾರ್ಯವಾಗಿ ತಡೆದಕೊಂಡಿದೆಯೋ, ಹಿತವೆನ್ನಿಸುತ್ತಿದೆಯೋ ಅದಂತೂ ಹೇಳಿಲ್ಲ. ಆದರೆ ನೆಟ್ಟಿಗರಂತೂ ಬೆಕ್ಕಿನ ಮೈಯಲ್ಲಿ ತಾವೇ ಹೊಕ್ಕಿದ್ದೇವೇನೋ ಎಂಬಂತೆ ಉತ್ಸಾಹದಿಂದ ಈ ವಿಡಿಯೋ ನೋಡಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by cats land (@itscatsland)

ನಾಲ್ಕು ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಅನ್ನು ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಮನುಷ್ಯರು ಇಂಥ ವಿಡಿಯೋಗಳನ್ನು ನೋಡಿ ಪಾಠ ಕಲಿಯಬೇಕು ಎಂದಿದ್ದಾರೆ.  ಕುದುರೆಯು ಗುಟ್ಟಿನಿಂದ ಕೊಡುತ್ತಿರುವ ಮುತ್ತನ್ನು ಬೆಕ್ಕು ಸ್ವೀಕರಿಸುತ್ತಿದೆ ಎಂದಿದ್ದಾರೆ ಒಬ್ಬರು. ಇದು ಬಹಳ ಮುದ್ದಾದ ದೃಶ್ಯ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral: ಅಮೇಝಾನ್​; ಆರ್ಡರ್ ಮಾಡದೆಯೂ 100ಕ್ಕೂ ಹೆಚ್ಚು ಪಾರ್ಸೆಲ್​​ ಮಹಿಳೆಯನ್ನು ತಲುಪಿದಾಗ 

ಬೆಕ್ಕು ಓಡಿಹೋಗದೆ ಸುಮ್ಮನೇ ಕುಳಿತಿರುವುದನ್ನು ನೋಡಿದರೆ ಅದಕ್ಕೂ ಇಷ್ಟವಾಗಿದೆ ಎಂದರ್ಥ ಎಂದಿದ್ದಾರೆ ಒಬ್ಬರು. ಚೆನ್ನಾಗೇನೋ ಇದೆ ಆದರೆ ನನ್ನ ಕಿವಿಗಳಲ್ಲಿ ಕಿರಿಕಿರಿ ಉಂಟಾಗುತ್ತಿದೆ ಎಂದಿದ್ದಾರೆ ಮತ್ತೊಬ್ಬರು. ಕುದುರೆಗೆ ಇದರೊಂದಿಗೆ ಆಟವಾಡಬೇಕು ಎನ್ನಿಸುತ್ತಿದೆ. ಯಾರಾದರೂ ಬ್ಯಾಟ್​ ಬಾಲ್​ ತಂದುಕೊಡಿ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ತೊರೆದು ಜೀವಿಸಬಹುದೇ ನಿಮ್ಮ ಸಿರಿಕಂಠವ; 5 ಮಿಲಿಯನ್ ಕೇಳುಗರನ್ನು ತಲುಪಿದ ಈ ದಾಸರಪದ

ತಮ್ಮ ಪಾಡಿಗೆ ತಾವು ಸುಖದಿಂದ ಇದ್ದಾವೆ. ಮನುಷ್ಯರು ಲೈಕ್ಸ್​ಗಾಗಿ ಅವುಗಳ ಏಕಾಂತವನ್ನು ಹೀಗೆ ಕದಿಯುತ್ತಾರೆ ಎಂದಿದ್ದಾರೆ ಕೆಲವರು. ಹೌದು, ಇದೂ ಒಂದು ರೀತಿ ಪ್ರಾಣಿಹಿಂಸೆಯೇ ಎಂದಿದ್ದಾರೆ ಒಂದಿಷ್ಟು ಜನ. ಅನೇಕರು ತಮ್ಮ ಪ್ರಾಣಿಪ್ರಿಯ ಸ್ನೇಹಿತರನ್ನೆಲ್ಲ ಟ್ಯಾಗ್ ಮಾಡಿ ಈ ವಿಡಿಯೋ ನೋಡಲು ಆಹ್ವಾನಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 6:43 pm, Mon, 31 July 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ