Viral Video: ಫಿಟ್​ನೆಸ್​; 68ನೇ ವಯಸ್ಸಿಗೆ ಜಿಮ್ ವರ್ಕೌಟ್ ಶುರು ಮಾಡಿದ ಮಹಿಳೆ

Gym : ಯಾವ ನಿರ್ಧಾರಕ್ಕೂ ಮನಸೇ ಕಾರಣ. ಜೀವನಶೈಲಿಯನ್ನು ಬದಲಾಯಿಸಿಕೊಳ್ಳಲೇಬೇಕು ಎಂದು ದೃಢ ನಿರ್ಧಾರ ಮಾಡಿದರೆ ಖಂಡಿತ ಸಾಧ್ಯವಾಗುತ್ತದೆ. ಈ ವಿಡಿಯೋ ನೋಡಿ, ಈ ದಿಕ್ಕಿನತ್ತ ಯೋಚಿಸಲು ನೀವೂ ಸ್ಪೂರ್ತಿಗೊಳ್ಳುವಿರಿ.

Viral Video: ಫಿಟ್​ನೆಸ್​; 68ನೇ ವಯಸ್ಸಿಗೆ ಜಿಮ್ ವರ್ಕೌಟ್ ಶುರು ಮಾಡಿದ ಮಹಿಳೆ
68 ವರ್ಷದ ತಾಯಿಗೆ ಮಗನೇ ತರಬೇತುದಾರ
Follow us
ಶ್ರೀದೇವಿ ಕಳಸದ
|

Updated on:Aug 02, 2023 | 5:14 PM

Fitness : ಯಾರಿಗೆ ಯಾವಾಗ ಫಿಟ್​ನೆಸ್​ ಬಗ್ಗೆ ಆಸಕ್ತಿ ಮತ್ತು ಅರಿವು ಹುಟ್ಟುತ್ತದೆಯೋ ಹೇಳಲಾಗದು. ಅದರಲ್ಲೂ  ಸಾಕಷ್ಟು ಮಹಿಳೆಯರು ತೊಡಗಿಕೊಳ್ಳುವುದು ಹೋಗಲಿ ಈ ಬಗ್ಗೆ ಯೋಚಿಸಲು ಕೂಡ ಅವರಿಗೆ ಪುರುಸೊತ್ತೇ ಇರುವುದಿಲ್ಲ. ಆದರೂ ಅಪರೂಪಕ್ಕೆ ಕೆಲವರು ತಡವಾಗಿಯಾದರೂ ಈ ಬಗ್ಗೆ ಗಮನಹರಿಸಲು ಶುರು ಮಾಡುತ್ತಾರೆ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋದಲ್ಲಿರುವ 68 ವರ್ಷದ ಮಹಿಳೆ ತನ್ನ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಜಿಮ್​ ತರಬೇತುದಾರನೂ ಆಗಿರುವ ಇವರ ಮಗ ಅಜಯ್​ ಸಂಗ್ವಾನ್​ ಈ ವಿಡಿಯೋ ಅನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Choudhary Ajay Sangwan (@weightliftermummy)

ಜೂ. 9ರಂದು ಈಕೆ ತಮ್ಮ ಮಗನ ಜಿಮ್​ನಲ್ಲಿ ಫಿಟ್​ನೆಸ್​ ಪ್ರಯಾಣವನ್ನು ಆರಂಭಿಸಿದ್ದಾರೆ. ಇದೀಗ ಈ ವಿಡಿಯೋದಲ್ಲಿ ಅವರು 100 ಕಿ.ಗ್ರಾಂ ಭಾರ ಎತ್ತುವ ಪ್ರಯತ್ನವನ್ನು ನೋಡಬಹುದಾಗಿದೆ. ಈ ವಿಡಿಯೋ ಅನ್ನು ಜು. 27 ರಂದು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಲಾಗಿದೆ. ಈತನಕ ಸುಮಾರು 30,000 ಜನರು ಈ ವಿಡಿಯೋ ನೋಡಿದ್ದಾರೆ. 1,600 ಲೈಕ್‌ಗಳನ್ನು ಇದು ಪಡೆದಿದೆ. ಅನೇಕರು ಈ ಮಹಿಳೆಯ ನಿರ್ಧಾರವನ್ನು ಮೆಚ್ಚಿ ಹುರಿದುಂಬಿಸಿದ್ದಾರೆ.

ಇದನ್ನೂ ಓದಿ : Viral Video: ಭೇಲ್​ಪುರಿ, ಮಂಡಕ್ಕಿ ಸೂಸಲ, ಚುರುಮುರಿ ಒಗ್ಗರಣೆ ಪ್ರಿಯರಿಗೆ ಈ ವಿಡಿಯೋ ಸಮರ್ಪಣೆ

ವಾಹ್ ಆಂಟೀ, ನೀವು ಹೀಗೆ ಮುಂದುವರಿಯಿರಿ. ಈ ಮೂಲಕ ಮತ್ತಷ್ಟು ಜನರಿಗೆ ಸ್ಪೂರ್ತಿಯಾಗಿರಿ ಎಂದಿದ್ದಾರೆ ಅನೇಕರು. ನಾನು 46ನೇ ವಯಸ್ಸಿನಲ್ಲಿ ಏರೋಬಿಕ್ಸ್​ ಜಿಮ್​ ವರ್ಕೌಟ್ ಶುರು ಮಾಡಿದೆ, 74 ವಯಸ್ಸಿನಲ್ಲಿಯೂ ನಾನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಮನಸ್ಸು ದೃಢವಾಗಿದ್ದರೆ ಏನನ್ನೂ ಮಾಡಬಹುದು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ಹಡಗಿನಲ್ಲಿಯೂ ಸಂಧ್ಯಾವಂದನೆ ಮಾಡುವ ಕ್ಯಾಪ್ಟನ್​; ಲಿಂಕ್ಡ್ಇನ್​ನಲ್ಲಿ ಫೋಟೋ ವೈರಲ್

ನಿಮ್ಮ ವಿಡಿಯೋ ನೋಡಿ ನನಗೂ ಜಿಮ್​ಗೆ ಸೇರಬೇಕು ಎಂದೆನ್ನಿಸುತ್ತಿದೆ ಎಂದು ಅನೇಕರು ಹೇಳಿದ್ದಾರೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:12 pm, Wed, 2 August 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್