Viral Video: ಭೇಲ್ಪುರಿ, ಮಂಡಕ್ಕಿ ಸೂಸಲ, ಚುರುಮುರಿ ಒಗ್ಗರಣೆ ಪ್ರಿಯರಿಗೆ ಈ ವಿಡಿಯೋ ಸಮರ್ಪಣೆ
Puffed Rice : ನೀವೇನೇ ಹೇಳಿ ಈ ವಿಡಿಯೋ ನೋಡಿದ ಮೇಲೆಯೂ ನಾವು ಚುರುಮುರಿ ತಿಂದೇ ತಿನ್ನುತ್ತೇವೆ ಎಂದು ಕೆಲವರು. ಕೆಮಿಕಲ್ ಹಾಕಿದ ಆಹಾರ ತಿಂದು ಕ್ಯಾನ್ಸರ್ಗೆ ಈಡಾಗುವುದಕ್ಕಿಂತ ಇಂಥದನ್ನು ತಿನ್ನುವುದೇ ವಾಸಿ ಎಂದು ಕೆಲವರು. ನೀವು?
Murmure: ಕಟುಮ್ ಕುಟುಮ್ ಹಸಿರು ಬಟಾಣಿಯನ್ನು ರಾಶಿಗಟ್ಟಲೆ ಹೇಗೆ ತಯಾರಿಸುತ್ತಾರೆ ಎನ್ನುವ ವಿಡಿಯೋ ಅನ್ನು ಕೆಲವಾರಗಳ ಹಿಂದೆ ನೋಡಿದ್ದಿರಿ. ಬಾಲ್ಯದಿಂದ ಈತನಕವೂ ನಾನು ಮೋಸ ಹೋದೆ, ಜನ್ಮದಲ್ಲಿ ಕೆಂಪು ಹಸಿರು ಬಣ್ಣದ ಬಟಾಣಿಗಳನ್ನು ತಿನ್ನಲಾರೆ ಎಂದು ಅನೇಕ ನೆಟ್ಟಿಗರು ಶಪಥವನ್ನೂ ಮಾಡಿದರು. ಇದೀಗ ಈ ವಿಡಿಯೋ ಕಳ್ಳೆಪುರಿ (Puffed Rice) ಮಂಡಕ್ಕಿ, ಚುರುಮುರಿಪ್ರಿಯರಿಗಾಗಿ. ತೋಯಿಸಿ ಒಗ್ಗರಣೆ ಹಾಕಿದರೆ ಮಂಡಕ್ಕಿ ಸೂಸಲ. ಕಡಲೆಬೀಜ, ಹುರಿಗಡಲೆಯೊಂದಿಗೆ ಒಗ್ಗರಣೆ ಹಾಕಿದರೆ ಕುರುಮ್ ಕುರುಮ್ ಚುರುಮುರಿ, ಷಡ್ರಸಗಳಲ್ಲಿ ಗಿರಗಿರ ತಿರುಗಿಸಿದರೆ ಭಲೇ ಭೇಲ್ಪುರಿ. ನೋಡಿ ನಿಮ್ಮ ಪ್ರೀತಿಯ ಚುರುಮುರಿಯನ್ನು ತಯಾರಿಸುವ ಈ ವಿಧಾನವನ್ನು.
ಇದನ್ನೂ ಓದಿView this post on Instagram
ಈ ವಿಡಿಯೋ ಅನ್ನು ಈತನಕ ಸುಮಾರು 10 ಲಕ್ಷ ಜನರು ಲೈಕ್ ಮಾಡಿದ್ದಾರೆ. 10 ಮಿಲಿಯನ್ಗಿಂತಲೂ ಹೆಚ್ಚು ಜನರು ಇದನ್ನು ನೋಡಿದ್ದಾರೆ. 7,000 ಜನರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಮೆರಿಕದವರಂತೆ ಆಹಾರೋತ್ಪನ್ನಗಳಿಗೆ ಕೆಮಿಕಲ್ ಉಪಯೋಗಿಸಿ ಕ್ಯಾನ್ಸರ್ಗೆ ಈಡುಮಾಡುವುದಕ್ಕಿಂತ ಇದು ಎಷ್ಟೋ ವಾಸಿ ಎಂದಿದ್ದಾರೆ ಒಬ್ಬರು. ಹೀಗೆಲ್ಲ ಅಪಪ್ರಚಾರ ಮಾಡಿದರೆ ನಿಮ್ಮ ಅಕೌಂಟ್ ರಿಪೋರ್ಟ್ ಮಾಡಬೇಕಾಗುತ್ತದೆ, ಈ ರೀತಿ ತಯಾರಿಸುವುದು ಶೇ. 1 ಮಾತ್ರ. ಉಳಿದಂತೆ ಶುದ್ಧವಾಗಿ ಚುರುಮುರಿಯನ್ನು ತಯಾರಿಸುವ ಸಾಕಷ್ಟು ಫ್ಯಾಕ್ಟರಿಗಳು ಇವೆ ಎಂದಿದ್ದಾರೆ ಇನ್ನೊಬ್ಬರು.
ಇದನ್ನೂಓದಿ : Viral: ಹಡಗಿನಲ್ಲಿಯೂ ಸಂಧ್ಯಾವಂದನೆ ಮಾಡುವ ಕ್ಯಾಪ್ಟನ್; ಲಿಂಕ್ಡ್ಇನ್ನಲ್ಲಿ ಫೋಟೋ ವೈರಲ್
ಕಂಟೆಂಟ್ಗಾಗಿ, ಲೈಕ್ಸ್ಗಾಗಿ ವಿಡಿಯೋ ಮಾಡುವ ಬದಲಾಗಿ ಶುದ್ಧವಾಗಿ ಚುರುಮುರಿ ತಯಾರಿಸುವುದು ಹೇಗೆ ಎಂದು ಫ್ಯಾಕ್ಟರಿಗೆ ಹೋಗಿ ಪಾಠ ಮಾಡಿ ಎಂದಿದ್ದಾರೆ ಮತ್ತೊಬ್ಬರು. ಆದರೂ ನಾನು ಚುರುಮರಿಯನ್ನು ತಿಂದೇತಿನ್ನುತ್ತೇನೆ ಎಂದು ಮಗದೊಬ್ಬರು. ಈ ಚುರುಮುರಿಯ ಸ್ವಾದದ ಸೀಕ್ರೇಟ್ ಕಾಲುಗಳಲ್ಲಿದೆ ಎಂದಿದ್ದಾರೆ ಇನ್ನೊಬ್ಬರು. ಭಾರತದಲ್ಲಿ ಹೀಗೆಲ್ಲ ಮಾಡುವುದಿಲ್ಲ ಎಂದಿದ್ದಾರೆ ಕೆಲವರು. ಈ ರೀತಿಯಾಗಿ ಇದನ್ನು ತಯಾರಿಸುವ ಪರಿ ಮಾಂಸಾಹಾರ ತಿನ್ನುವವರಿಗೆ ಯಾವುದೇ ರೀತಿಯ ವ್ಯತ್ಯಾಸ ಉಂಟು ಮಾಡಲಾರದು ಎಂದಿದ್ದಾರೆ ಇನ್ನೂ ಕೆಲವರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:29 pm, Wed, 2 August 23