Viral Video: ರಷ್ಯಾ; ‘ನಾಲ್ಕು ವರ್ಷದ ನನ್ನ ಮಗಳಷ್ಟೇ ಎತ್ತರ ಈ ನನ್ನ ಬೆಕ್ಕು’
Big Cat : ಅಮೆರಿಕದ ಮೈನೆ ಕೂನ್ಸ್ ಎಂಬ ದೊಡ್ಡ ತಳಿಯ ಈ ಬೆಕ್ಕು ದಟ್ಟ ಮತ್ತು ಹೊಳೆಯುವ ರೋಮದಿಂದಾಗಿ ಎಂಥ ಶೀತಲ ಹವಾಮಾನಕ್ಕೂ ಒಗ್ಗಿಕೊಳ್ಳುತ್ತದೆ. ಇದೀಗ ತನ್ನ ದೈತ್ಯಾಕಾರದಿಂದ ಜಾಲತಾಣಿಗರ ಗಮನ ಸೆಳೆಯುತ್ತಿದೆ.
Cat : ಈತನಕ ನೀವು ನೋಡಿದ ಬೆಕ್ಕುಗಳಲ್ಲಿ ಇಷ್ಟು ದೊಡ್ಡ ಗಾತ್ರದ ಬೆಕ್ಕನ್ನು ನೋಡಿದ್ದಿದೆಯೇ? ಇಲ್ಲವಾದಲ್ಲಿ ನೋಡಿ. ರಷ್ಯಾದ ಬೆಲ್ಗೊರೋಡ್ನ ಸ್ಟಾರಿ ಓಸ್ಕೋಲ್ನಲ್ಲಿ ವಾಸವಾಗಿರುವ ಯುಲಿನಾ ಮಿನಿನಾ ಅವರು ಸಾಕಿದ ಬೆಕ್ಕು ಇದು. ದೈತ್ಯದೇಹಿಯಾದ ಇದು ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ಗಮನ ಸೆಳೆಯುತ್ತಿದೆ. ನನ್ನ ನಾಲ್ಕು ವರ್ಷದ ಮಗಳು ಅನೆಚ್ಕಾಳಷ್ಟೇ ದೊಡ್ಡದಾಗಿದೆ ನಮ್ಮ ಈ ಬೆಕ್ಕು ಎಂದು ಯುಲಿನಾ ಈ ಕೆಳಗಿನ ವಿಡಿಯೋ ಅನ್ನು ಇನ್ಸ್ಟಾನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿView this post on Instagram
ಕೆಫೀರ್ ಎಂಬ ಹೆಸರಿನ ಈ ಬೆಕ್ಕು ದೊಡ್ಡ ಬೆಕ್ಕುಗಳ ತಳಿಗಳಿಗೆ ಸೇರುತ್ತದೆ. ಅಮೆರಿಕಾದ ಅತ್ಯಂತ ಹಳೆಯ ತಳಿಯಾದ ಮೈನೆ ಕೂನ್ಸ್ (Maine Coons) ತಳಿಯು ಇದರ ಮೂಲ. ಜೂ. 4 ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದ್ದು ಅನೇಕರು ಈ ಬೆಕ್ಕನ್ನು ನೋಡಿ ಅಚ್ಚರಿಗೊಳಗಾಗಿದ್ದಾರೆ. ಇದು ತುಂಬಾ ಮುದ್ದಾದ ಮಗು, ಮನುಷ್ಯರಿಗಿಂತ ಸಾಕುಪ್ರಾಣಿಗಳೇ ಉತ್ತಮ ಎಂದು ಒಬ್ಬರು ಹೇಳಿದ್ಧಾರೆ. ಈ ಮಗುವಿನ ಆರೋಗ್ಯವನ್ನು ಚೆನ್ನಾಗಿ ನೋಡಿಕೋ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ ಇನ್ನೊಬ್ಬರು. ಈ ನಾಲ್ಕು ವರ್ಷದ ಬೆಕ್ಕು, ನಾಲ್ಕು ವರ್ಷದ ಮಗುವಿಗಿಂತಲೂ ಚೆನ್ನಾಗಿ ಊಟ ಮಾಡುತ್ತದೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಫಿಟ್ನೆಸ್; 68ನೇ ವಯಸ್ಸಿಗೆ ಜಿಮ್ ವರ್ಕೌಟ್ ಶುರು ಮಾಡಿದ ಮಹಿಳೆ
ನಾನೂ ಇಂಥ ಬೆಕ್ಕನ್ನು ಸಾಕಬೇಕು ಎಂದುಕೊಂಡಿದ್ದೇನೆ, ಇವುಗಳನ್ನು ಹೇಗೆ ಎಲ್ಲಿ ಖರೀದಿಸುವುದು? ಎಂದು ಕೇಳಿದ್ದಾರೆ ಒಬ್ಬರು. ಇತರೇ ಬೆಕ್ಕುಗಳಂತೆಯೇ ಇವುಗಳನ್ನು ಸಾಕಬಹುದೆ? ಎಂದು ಮತ್ತೊಬ್ಬರು ಕೇಳಿದ್ದಾರೆ. ಅಮೆರಿಕ ಮೂಲಕ ಈ ಬೆಕ್ಕುಗಳು ಎಂಥ ಹವಾಮಾನಗಳಿಗೂ ಒಗ್ಗಿಕೊಳ್ಳುತ್ತವೆ. ಕಾರಣ ಇವುಗಳ ದಟ್ಟ ಮತ್ತು ಹೊಳಪುಳ್ಳ ರೋಮಗಳು ನೀರನ್ನು ಹೀರಿಕೊಳ್ಳಲಾರವು. ಪೊದೆಯಂತ ಬಾಲ ಮತ್ತು ಮೈತುಂಬ ಇರುವ ಉದ್ದ ರೋಮಗಳು ಚಳಿ ಮಳೆಯಿಂದ ಇವುಗಳನ್ನು ರಕ್ಷಿಸುತ್ತವೆ.
ನಿಮಗೂ ಬೇಕೆ ಇಂಥ ಬೆಕ್ಕು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:03 pm, Wed, 2 August 23