Viral Video: ಗಿನ್ನೀಸ್ ವಿಶ್ವ ದಾಖಲೆ; ಈಕೆ ತೇಗು ತೆಗೆದ ಶಬ್ದ ದ್ವಿಚಕ್ರವಾಹನದ ಸದ್ದಿಗೆ ಸಮ!

Burp : ಅಮೆರಿಕದ 33 ವರ್ಷದ ಕಿಂಬರ್ಲಿ ವಿಂಟರ್ ತೇಗು ತೆಗೆಯುವಲ್ಲಿ ಗಿನ್ನೀಸ್​ ರೆಕಾರ್ಡ್​ ಮಾಡಿದ್ದಾರೆ. ಇವರು ತೇಗು ತೆಗೆಯಲು ಗಂಟಲಿನಿಂದ ಹೊರಡಿಸಿದ ಶಬ್ದದ ಪ್ರಮಾಣ 107.3 ಡೆಸಿಬಲ್​ನಷ್ಟಿತ್ತು. ನೋಡಿ ವಿಡಿಯೋ.

Viral Video: ಗಿನ್ನೀಸ್ ವಿಶ್ವ ದಾಖಲೆ; ಈಕೆ ತೇಗು ತೆಗೆದ ಶಬ್ದ ದ್ವಿಚಕ್ರವಾಹನದ ಸದ್ದಿಗೆ ಸಮ!
ಕಿಂಬರ್ಲಿ ವಿಂಟರ್
Follow us
ಶ್ರೀದೇವಿ ಕಳಸದ
|

Updated on:Aug 03, 2023 | 12:28 PM

GWR : ಗಿನ್ನೀಸ್ ದಾಖಲೆ ಮಾಡಿರುವವರ ಕೌಶಲ, ಸಾಹಸ ಮತ್ತು ಚಟುವಟಿಕೆಗಳನ್ನು ಗಮನಿಸಿದರೆ ಅಬ್ಬಬ್ಬಾ ಎನ್ನಿಸುವುದುಂಟು. ಖಂಡಿತ ಇವೆಲ್ಲ ಸಾಮಾನ್ಯರಿಂದ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅಚ್ಚರಿ, ಆತಂಕ ಹುಟ್ಟಿಸುತ್ತವೆ. ಇತ್ತೀಚೆಗಷ್ಟೇ ಜೀವಕ್ಕೆ ಅಪಾಯಕಾರಿ ಎನ್ನಿಸಿದ ದೀರ್ಘಚುಂಬನ ಸ್ಪರ್ಧೆಯನ್ನು ಗಿನ್ನೀಸ್​ ಪಟ್ಟಿಯಿಂದ ಕೈಬಿಟ್ಟ ಸುದ್ದಿಯನ್ನು ಓದಿದ್ದಿರಿ. ವಿಚಿತ್ರ ಕೌಶಲದಲ್ಲಿ ಗಿನ್ನೀಸ್​ ವಿಶ್ವ ದಾಖಲೆ ಮಾಡಿರುವ 33 ವರ್ಷದ ಅಮೆರಿಕದ ಕಿಂಬರ್ಲಿ ವಿಂಟರ್ (Kimberly Winter)​ ಸುದ್ದಿಯಲ್ಲಿರುವುದು ಏಕೆ ಎಂದು ಓದಿ ಮತ್ತು ನೋಡಿ. ಇವರು ಅತೀ ದೊಡ್ಡ ಪ್ರಮಾಣದಲ್ಲಿ ತೇಗಿನ (Burp) ಶಬ್ದವನ್ನು ಹೊರಡಿಸುವಲ್ಲಿ ದಾಖಲೆ ಮಾಡಿದ್ದಾರೆ. ಈಕೆ ತೆಗೆದ ತೇಗಿನ ಶಬ್ದ 107.3 ಡೆಲಿಬಲ್​, ಅಂದರೆ ದ್ವಿಚಕ್ರವಾಹನದ ಸದ್ದಿಗೆ ಸಮವಾಗಿತ್ತು.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

2009ರಲ್ಲಿ ಇಟಲಿಯ ಎಲಿಸಾ ಕಾಗ್ನೋನಿ 107 ಡೆಸಿಬಲ್​ ಪ್ರಮಾಣದಲ್ಲಿ ತೇಗು ತೆಗೆದು ದಾಖಲೆ ನಿರ್ಮಿಸಿದ್ದರು. ಕಿಂಬರ್ಲಿ ಈಗ 107.3 ಡೆಸಿಬಲ್​ ಪ್ರಮಾಣದ ತೇಗು ಹೊರಡಿಸಿ ಆಕೆಯ ದಾಖಲೆಯನ್ನು ಮುರಿದು ವಿಶ್ವದ ಗಮನ ಸೆಳೆದಿದ್ದಾರೆ. ವಿಂಟರ್,​ ರೆಕಾರ್ಡಿಂಗ್​ ರೂಮಿನಲ್ಲಿ ಮೈಕ್ರೋಫೋನ್​ನಿಂದ 2.5 ಮೀಟರ್​ ದೂರದಲ್ಲಿ ನಿಂತು ತೇಗಿನ ಧ್ವನಿಯನ್ನು ರೆಕಾರ್ಡ್ ಮಾಡಿದ್ದಾರೆ. 2021ರಲ್ಲಿ ಪುರುಷರ ವಿಭಾಗದಲ್ಲಿ ಗಿನ್ನೀಸ್​ ದಾಖಲೆ ಮಾಡಿದ ಆಸ್ಟ್ರೇಲಿಯಾದ ನೆವಿಲ್ಲೆ 112.4 ಡೆಸಿಬಲ್​ ತೇಗುಶಬ್ದ ಹೊರಡಿಸಿದ್ದರು. ಆ ಧ್ವನಿ ಎಲೆಕ್ಟ್ರಿಕ್ ಡ್ರಿಲ್ ಅಥವಾ ಟ್ರಂಬೋನ್​ಗಿಂತ ಜೋರಾಗಿ ಇತ್ತು. ಈ ಕೆಳಗಿನ ವಿಡಿಯೋದಲ್ಲಿ ಗಮನಿಸಿ.

ಮಹಿಳೆಯರ ವಿಭಾಗದಲ್ಲಿ ದಾಖಲೆ ಮುರಿದ ವಿಂಟರ್ ಕಾಫಿ, ಬಿಯರ್​, ಬೆಳಗಿನ ಉಪಹಾರ ಸೇವಿಸಿ ದೊಡ್ಡ ಪ್ರಮಾಣದಲ್ಲಿ ತೇಗಿನ ಶಬ್ದ ಹೊರಡಿಸಿ ಹಳೆಯ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಶಬ್ದ ಜೋರಾಗಿ ಹೊಮ್ಮಲು ಆಕೆ ಮೊದಲು ಆಳವಾಗಿ ಉಸಿರು ತೆಗೆದುಕೊಂಡು ನಂತರ ಕೌಶಲದಿಂದ ತೇಗನ್ನು ಹೊಮ್ಮಿಸುವುದಾಗಿ ಹೇಳಿದ್ದಾರೆ. ಹೀಗೆ ಜೋರಾಗಿ ತೇಗು ತೆಗೆಯುವ ಹುಚ್ಚು ಈಕೆಗೆ ಬಾಲ್ಯದಿಂದಲೇ ಇತ್ತು. ಯೂಟ್ಯೂಬ್​ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಈಕೆ ತನ್ನ ಈ ಕೌಶಲವನ್ನು ಪ್ರಚುರಪಡಿಸಿಕೊಳ್ಳುತ್ತ ಜೋರಾದ ಧ್ವನಿಯಲ್ಲಿ ತೇಗು ತೆಗೆಯುವ ವಿಶ್ವದ ಕೆಲವರಲ್ಲಿ ತಾನೂ ಒಬ್ಬಾಕೆ ಎನ್ನಿಸಿಕೊಂಡಿದ್ದರು.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 12:24 pm, Thu, 3 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ