Viral Video: ಮ್ಯಾಷಪ್​; ನೆಟ್ಟಿಗರ ಮನಸೂರೆಗೊಂಡ ರ್ಯಾಂಡಮ್​ ಗರ್ಲ್ಸ್​

Farewell : 'ಫೇರ್​ವೆಲ್​ ಡ್ಯಾನ್ಸ್​​ 2023' ಎಂಬ ಶೀರ್ಷಿಕೆಯಲ್ಲಿ ಈ ಬೆಡಗಿಯರು ಬಾಲಿವುಡ್​ನ ಜನಪ್ರಿಯ ಟ್ರ್ಯಾಕ್​ಗಳಿಗೆ ಹೆಜ್ಜೆ ಹಾಕಿ 4 ಲಕ್ಷಕ್ಕಿಂತಲೂ ಹೆಚ್ಚು ಜನರ ಮನಸೂರೆಗೊಂಡಿದ್ದಾರೆ. ನೀವೂ ನೋಡಿ ಈ ವಿಡಿಯೋ.

Viral Video: ಮ್ಯಾಷಪ್​; ನೆಟ್ಟಿಗರ ಮನಸೂರೆಗೊಂಡ ರ್ಯಾಂಡಮ್​ ಗರ್ಲ್ಸ್​
ರ್ಯಾಂಡಮ್ ಗರ್ಲ್ಸ್​ ಅದಿತಿ ಮತ್ತು ರಿತಿಕಾ
Follow us
ಶ್ರೀದೇವಿ ಕಳಸದ
|

Updated on: Aug 02, 2023 | 11:26 AM

Dance : ಏನಾದರೂ ಕನಸು ಕಂಡರೆ ಅದನ್ನು ನನಸಾಗಿಸಿಕೊಳ್ಳಲು ಸಾಕಷ್ಟು ತಯಾರಿ ಬೇಕೇಬೇಕಾಗುತ್ತದೆ. ಹಂತಹಂತವಾಗಿ ಆ ಪ್ರಯತ್ನಗಳು ಕೈಗೂಡುತ್ತಿದ್ದಂತೆ ಇನ್ನಿಲ್ಲದ ಉತ್ಸಾಹ ಖುಷಿ ಆವರಿಸುತ್ತಾ ಹೋಗುತ್ತದೆ. ಒಂದೊಮ್ಮೆ ಅಂದುಕೊಂಡಿದ್ದು ಕಾರ್ಯಗತವಾಯಿತೋ ಆತ್ಮವಿಶ್ವಾಸ ಹೆಚ್ಚುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಜನಪ್ರಿಯ ಹಿಂದಿ ಹಾಡುಗಳಿಗೆ ಈ ಇಬ್ಬರು ತರುಣಿಯರು ಸಖತ್​ ಹೆಜ್ಜೆ ಹಾಕಿದ್ದಾರೆ. ಫೇರ್​ವೆಲ್​ ಡ್ಯಾನ್ಸ್​ 2023 ಎಂಬ ಶೀರ್ಷಿಕೆಯಲ್ಲಿ ದಿ ರ್ಯಾಂಡಮ್​ ಗರ್ಲ್ (The Random Girl)​ ಎಂಬ ಯೂಟ್ಯೂಬರ್​ ಈ ವಿಡಿಯೋ ಹಂಚಿಕೊಂಡಿದ್ದಾರೆ.

ನೃತ್ಯಕಲಾವಿದರಾದ ಅದಿತಿ ಮತ್ತು ರಿತಿಕಾ ಈ ವಿಡಿಯೋದಲ್ಲಿ ಬಾಲಿವುಡ್​ನ ಪ್ರಸಿದ್ಧ ಗೀತೆಗಳಿಗೆ ನರ್ತಿಸಿದ್ದಾರೆ. ದೋಸ್ತಾನಾ ಹಾಡಿನೊಂದಿಗೆ ಶುರು ಮಾಡಿ ಚಮ್ಮಕ ಚಲ್ಲೋ, ಗೋರಿ ಗೋರಿ, ಕುಕ್ಕಡ, ಕಾಲಾಚಶ್ಮಾದ ತನಕ ಬೇರೆ ಬೇರೆ ಹಿಂದೀ ಹಾಡುಗಳಿಗೆ ನರ್ತಿಸುತ್ತಾ ತಾರೆ ಜಿನ್​ ಜಿನ್​ನೊಂದಿಗೆ ಸಂಪನ್ನಗೊಳಿಸುತ್ತಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಈ ಮಗು ಯಾರು, ಭೇಟಿಯಾಗಬೇಕು, ಅಪ್ಪಿಕೊಳ್ಳಬೇಕು; ಶಂಕರ್ ಮಹಾದೇವನ್

ಮೇ 12 ರಂದು ಈ ವಿಡಿಯೋ ಅನ್ನು ಯೂಟ್ಯೂಬ್​ಗೆ ಅಪ್​ಲೋಡ್ ಮಾಡಲಾಗಿದೆ. ಈತನಕ ಸುಮಾರು 4.8 ಲಕ್ಷ ಜನರು ಈ ವಿಡಿಯ ಓನೋಡಿದ್ದಾರೆ. ಸುಮಾರು 10,000 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಇದು ಮಿಲಿಯನ್​ ಜನರನ್ನು ಖಂಡಿತ ತಲುಪುತ್ತದೆ ಎಂದಿದ್ದಾರೆ ಒಬ್ಬರು. ಇಬ್ಬರೂ ತುಂಬಾ ಅದ್ಭುತವಾಗಿ ನರ್ತಿಸಿದ್ದೀರಿ ಎಂದ ಇನ್ನೊಬ್ಬರು. ನಿಮ್ಮಿಬ್ಬರ ಸೀರೆ ಮತ್ತು ಸೀರೆಯಲ್ಲಿ ನೀವು ಬಹಳ ಚೆನ್ನಾಗಿ ನರ್ತಿಸಿದ್ದೀರಿ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ತೋಳದಂತೆ ಕಾಣಿಸಿಕೊಳ್ಳಲು ರೂ 20 ಲಕ್ಷ ಖರ್ಚು ಮಾಡಿದ ವ್ಯಕ್ತಿಯ ವಿಡಿಯೋ

ನೀವು ಮತ್ತಷ್ಟು ಡ್ಯಾನ್ಸ್​ ಅಪ್​ಲೋಡ್ ಮಾಡಿ, ನಾನು ನಿಮ್ಮ ಅಭಿಮಾನಿಯಾಗಿಬಿಟ್ಟೆ, ನಿಮ್ಮಿಬ್ಬರ ಜೋಡಿ ಚೆನ್ನಾಗಿ ಸಿಂಕ್ ಆಗುತ್ತದೆ ಎಂದಿದ್ದಾರೆ ಇನ್ನೊಬ್ಬರು. ಹೆಚ್ಚು ಆಡಂಬರವಿಲ್ಲದೆ ಸರಳವಾದ ಉಡುಗೆಯಲ್ಲಿ ಅತ್ಯಾಕರ್ಷಕವಾಗಿ ನರ್ತಿಸಿದ್ದೀರಿ ನಿಮಗೆ ಒಳ್ಳೆಯದಾಗಲಿ ಎಂದು ಅನೇಕರು ಹೇಳಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ