Viral Video: ಬಾಲಿವುಡ್ ಸ್ಟೈಲ್; ನೆಟ್ಟಿಗರ ಗಮನ ಸೆಳೆದ ಈ ವಧುವರರ ಡ್ಯಾನ್ಸ್

Kabhi Khushi Kabhi Gham : ಕಭಿ ಖುಷಿ ಕಭಿ ಘಮ್ ಸಿನೆಮಾದ ಬೋಲೆ ಚೂಡಿಯಾ ಹಾಡಿಗೆ ಈ ವಧುವರರು ಹೆಜ್ಜೆ ಹಾಕಿದ್ದಾರೆ. ಮೆಚ್ಚಿಗರು ಇವರ ನೃತ್ಯವನ್ನು ಮೆಚ್ಚಿ ಹಾರೈಸಿದ್ದಾರೆ.

Viral Video: ಬಾಲಿವುಡ್ ಸ್ಟೈಲ್; ನೆಟ್ಟಿಗರ ಗಮನ ಸೆಳೆದ ಈ ವಧುವರರ ಡ್ಯಾನ್ಸ್
ಬೋಲೆ ಚೂಡಿಯಾ ಹಾಡಿಗೆ ಹೆಜ್ಜೆ ಹಾಕುತ್ತಿರುವ ವಧುವರ
Follow us
ಶ್ರೀದೇವಿ ಕಳಸದ
|

Updated on:Aug 03, 2023 | 11:00 AM

Couple Dance: ಇತ್ತೀಚೆಗೆ ಮೇಲ್ಮಧ್ಯಮ ವರ್ಗದ ಮನೆತನದ ಮದುವೆಗಳು ಬಾಲಿವುಡ್​ ಸಿನೆಮಾ ಮತ್ತು ಹಿಂದೀ ಧಾರಾವಾಹಿಗಳ ಪ್ರಭಾವದಿಂದ ಪ್ರೇರೇಪಣೆಗೊಂಡಿರುವುದು ಸರ್ವೇ ಸಾಮಾನ್ಯ. ಅಲ್ಲದೆ ಮದುವೆ ಸಮಾರಂಭದ ಎಲ್ಲಾ ಹಂತಗಳೂ ಸಾಮಾಜಿಕ ಜಾಲತಾಣಗಳಲ್ಲಿ ಅನಾವಣಗೊಳ್ಳುವುದರಿಂದ ಉಳಿದವರೂ ಸಹಜವಾಗಿ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ತಕ್ಕಮಟ್ಟಿಗೆ ಸಿನೀಮೀಯ ಶೈಲಿಯಲ್ಲಿ ತಮ್ಮ ತಮ್ಮ ಮದುವೆಗಳನ್ನು ನೆರವೇರಿಸಿಕೊಂಡು ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಇದೀಗ ವೈರಲ್ (Viral) ಆಗಿರುವ ಈ ವಿಡಿಯೋದಲ್ಲಿ ವಧುವರರು ‘ಬೋಲೆ ಚೂಡಿಯಾ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Weddingz.in (@weddingz.in)

ಬೋಲ ಚೂಡಿಯಾ ಹಾಡು 2001ರಲ್ಲಿ ಬಿಡುಗಡೆಯಾದ ‘ ಕಭಿ ಖುಷಿ ಕಭಿ ಘಮ್ಮ್ಭೀ’ (KG3) ಚಿತ್ರದಿಂದ ಆಯ್ದುಕೊಳ್ಳಲಾಗಿದೆ. ಕರೀನಾ ಕಪೂರ್ ಮತ್ತು ಹೃತಿಕ್ ರೋಷನ್​, ಶಾರುಖ್ ಖಾನ್​, ಕಾಜೋಲ್​ ಮತ್ತು ಅಮಿತಾಬ್​ ಬಚ್ಚನ್​, ಜಯಾ ಬಚ್ಚನ್​ ಈ ಚಿತ್ರದಲ್ಲಿ ನಟಿಸಿದ್ದಾರೆ. ಆಕರ್ಷಕವಾಗಿ ಹೆಜ್ಜೆ ಹಾಕಿದ ವಧುವರರನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ : Viral Video: ರಷ್ಯಾ; ನಾಲ್ಕು ವರ್ಷದ ನನ್ನ ಮಗಳಷ್ಟೇ ಎತ್ತರ ಈ ನನ್ನ ಬೆಕ್ಕು

ಐದು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು 1.7 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಸುಮಾರು 10,000 ಜನರು ಲೈಕ್ ಮಾಡಿದ್ದಾರೆ. ತುಂಬಾ ಆಕರ್ಷಕವಾಗಿ ಇಬ್ಬರೂ ನರ್ತಿಸಿದ್ದೀರಿ, ನಿಮ್ಮ ದಾಂಪತ್ಯ ಸುಖಮಯವಾಗಿರಲಿ ಎಂದು ಅನೇಕರು ಹಾರೈಸಿದ್ದಾರೆ. ವರನು ವಧುವಿನೆಡೆ ನೋಡುತ್ತಲೇ ಇಲ್ಲ, ತನ್ನ ಗುಂಗಿನಲ್ಲಿ ಡ್ಯಾನ್ಸ್ ಮಾಡುತ್ತಿದ್ದಾನೆ ಎನ್ನಿಸುತ್ತಿಲ್ಲವೆ? ಎಂದಿದ್ದಾರೆ ಒಬ್ಬರು.

ಇದನ್ನೂ ಓದಿ : Viral Video: ಫಿಟ್​ನೆಸ್​; 68ನೇ ವಯಸ್ಸಿಗೆ ಜಿಮ್ ವರ್ಕೌಟ್ ಶುರು ಮಾಡಿದ ಮಹಿಳೆ

ಹಾಗೇನಿಲ್ಲ ಇಬ್ಬರ ನೃತ್ಯವೂ ಸಿಂಕ್ ಆಗಿದೆ ಎಂದಿದ್ದಾರೆ ಇನ್ನೊಬ್ಬರು. ವೃತ್ತಿಪರ ನೃತ್ಯಕಲಾವಿದರಂತೆಯೇ ಇಬ್ಬರೂ ಹೆಜ್ಜೆ ಹಾಕಿದ್ದಾರೆ, ಸಾಕಲ್ಲವೆ? ಎಂದು ಕೇಳಿದ್ದಾರೆ ಮತ್ತೊಬ್ಬರು. ಒಟ್ಟಾರೆಯಾಗಿ ತಮ್ಮ ಮದುವೆಯ ದಿನದ ಕನಸನ್ನು ಹೀಗೆ ನನಸಾಗಿಸಿಕೊಂಡು ಸಂಭ್ರಮಿಸಿದೆ ಈ ಜೋಡಿ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 10:59 am, Thu, 3 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ