Viral Video: ಎಣ್ಣೆಡಬ್ಬಿಯನ್ನೇ ಎತ್ತಿ ಸುರಿಯುವುದು ಈತನ ಪರಾಠಾ ವೈಶಿಷ್ಟ್ಯ!?
Street Food : ಹೃದಯಾಘಾತಕ್ಕೆ ಶಾರ್ಟ್ಕಟ್ ಎಂದು ಕೆಲವರು. ಈ ಪರಾಠಾವನ್ನು ತಿಂದವರೆಲ್ಲರ ಗತಿ? ಹೋಗಲಿ ಇದನ್ನು ಸ್ವತಃ ತಿನ್ನುತ್ತಾನೋ ಈತ? ಎಂದು ಇನ್ನೂ ಕೆಲವರು. ವಿಡಿಯೋ ನೋಡಿ ನೀವು ಆಘಾತಕ್ಕೆ ಬೀಳಬೇಡಿ!
Parata: ಮೃದುತನವೂ, ಗರಿಗರಿತನವೂ ಒಟ್ಟಿಗೆ ಮೇಳೈಸಿದ ಪದರಪದರುಳ್ಳ ಬಗೆಬಗೆಯ ಪರಾಠಾಗಳೆಂದರೆ ಎಂಥವರ ಹಸಿವೂ ದುಪ್ಪಟ್ಟಾಗುತ್ತದೆ. ಸಾಮಾನ್ಯವಾಗಿ ಹೊಟೆಲ್, ರೆಸ್ಟೋರೆಂಟ್ ಅಥವಾ ಬೀದಿಬದಿಯಲ್ಲಿ ಮಾಡಿದ ರುಚಿರುಚಿಯಾದ ಪರಾಠಾದ ವ್ಯಾಮೋಹಕ್ಕೆ ಸಿಲುಕಿದಿರೋ ಮತ್ತೆ ಮತ್ತೆ ಅಲ್ಲಿಗೆ ಹೋಗಬೇಕೆನ್ನಿಸುತ್ತದೆ. ಚಮಚಗಟ್ಟಲೆ ಎಣ್ಣೆ ಹುಯ್ಯುವುದನ್ನು ನೋಡಿದರೂ ಸರಿ, ತಿಂದ ದಿನ ಬೇಕಿದ್ದರೆ ಹೆಚ್ಚು ವರ್ಕೌಟ್ (Workout) ಮಾಡಿದರಾಯಿತು ಎನ್ನಿಸುತ್ತದೆ. ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದರೆ ಏನೆನ್ನುತ್ತೀರಿ? ಎಣ್ಣೆಡಬ್ಬಿಯನ್ನೇ ಎತ್ತಿ ಪರಾಠಾದ ಮೇಲೆ ಸುರಿದಿದ್ದಾನೆ ಈ ಬೀದಿಬದಿ ತಿಂಡಿತಯಾರಕ.
ಇದನ್ನೂ ಓದಿView this post on Instagram
ಗುರ್ವಿಂದರ್ ಸಿಂಗ್ ಎನ್ನುವ ಫುಡ್ಬ್ಲಾಗರ್ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಅನ್ನು ಮೇ 20ರಂದು ಅಪ್ಲೋಡ್ ಮಾಡಲಾಗಿದೆ. ಈತನಕ ಸುಮಾರು 28,000 ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ಲಕ್ಷ ಜನರು ಇದನ್ನು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿ ಈ ಬೀದಿಬದಿಯ ತಿಂಡಿ ತಯಾರಕನನ್ನು ಬೈದಿದ್ದಾರೆ.
ಇದನ್ನೂ ಓದಿ : Viral Video: ಗಿನ್ನೀಸ್ ವಿಶ್ವ ದಾಖಲೆ; ಈಕೆ ತೇಗು ತೆಗೆದ ಶಬ್ದ ದ್ವಿಚಕ್ರವಾಹನದ ಸದ್ದಿಗೆ ಸಮ!
ಹೃದಯಾಘಾತಕ್ಕೆ ಶಾರ್ಟ್ಕಟ್ ಎಂದಿದ್ದಾರೆ ಒಬ್ಬರು. ಪರಾಠಾ ಜಾಸ್ತಿ ಆಯ್ತು ಸ್ವಲ್ಪ ಕಡಿಮೆ ಮಾಡಿ ಎಂದು ಕಾಲೆಳೆದಿದ್ದಾರೆ ಇನ್ನೊಬ್ಬರು. ಇದನ್ನು ತಿನ್ನುವ ಜನರ ಆರೋಗ್ಯ ಹೇಗಿದೆಯೋ ಎಂದು ಮತ್ತೊಬ್ಬರು. ಕೊಳಕು! ಬೇರೆ ಪದ ಹೊಳೆಯುತ್ತಿಲ್ಲ ಎಂದು ಮಗದೊಬ್ಬರು. ಯಾರು ತಿನ್ನುತ್ತಾರೆ ಇದನ್ನು, ಮಾಡಿದವನೇ ತಿನ್ನುತ್ತಾನೆಯೇ? ಎಂದು ಕೇಳಿದ್ದಾರೆ ಇನ್ನೂ ಒಬ್ಬರು. ನಿಮ್ಮಲ್ಲಿ ಯಾರಾದರೂ ಈ ಪರಾಠಾ ತಿನ್ನಲು ಪ್ರಯತ್ನಿಸುವಿರೇ? ಎಂದು ಕೇಳಿದ್ದಾರೆ ಹಲವರು.
ಇದನ್ನೂ ಓದಿ : Viral Video: ಫಿಟ್ನೆಸ್; 68ನೇ ವಯಸ್ಸಿಗೆ ಜಿಮ್ ವರ್ಕೌಟ್ ಶುರು ಮಾಡಿದ ಮಹಿಳೆ
ಇದೇ ಕಾರಣಕ್ಕೆ ನಾನು ಇಂಥ ತಿಂಡಿ ತಿನಿಸುಗಳಿಂದ ದೂರ. ಅನೇಕರು ಆಹಾರ ಶೈಲಿಯಿಂದಾಗಿಯೇ ತಮ್ಮ ಆರೋಗ್ಯಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:11 pm, Thu, 3 August 23