Viral: ಈ ಕಾಲದಲ್ಲಿಯೂ ಇದೇನಿದು ಕಾರಿನ ಮೇಲೆ ಚೀಟಿ ಸಂಭಾಷಣೆ?

Neighbour : ದಯವಿಟ್ಟು ನಿಮ್ಮ ಕಾರನ್ನು ಇಲ್ಲಿಂದ ತೆಗೆಯಿರಿ ಎಂದು ಬರೆದ ಚೀಟಿಯನ್ನು ನೆರೆಮನೆಯಾತ ಕಾರಿನ ಮೇಲೆ ಅಂಟಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಈ ಕಾರಿನ ಚಾಲಕ ಏನು ಬರೆಯುತ್ತಾನೆ? ಮಜಾ ಇದೆ ಓದಿ ಈ ಸಂಭಾಷಣೆ ..

Viral: ಈ ಕಾಲದಲ್ಲಿಯೂ ಇದೇನಿದು ಕಾರಿನ ಮೇಲೆ ಚೀಟಿ ಸಂಭಾಷಣೆ?
ರಸ್ತೆಯಲ್ಲಿ ನಿಲ್ಲಿಸಿದ ಕಾರಿನ ಮೇಲೆ ನೆರೆಹೊರೆಯರಿಬ್ಬರ ಸಂಭಾಷಣೆ
Follow us
|

Updated on:Aug 04, 2023 | 1:15 PM

Car Parking : ನಿಮ್ಮ ಪಕ್ಕದ ಮನೆಯವರು ನಿಮ್ಮ ಮನೆಯ ಮುಂದೆಯೋ ರಸ್ತೆಯಲ್ಲಿಯೋ ಕಾರ್ ನಿಲ್ಲಿಸಿದರೆ ಏನು ಮಾಡುತ್ತೀರಿ? ನೇರ ಹೋಗಿ ಹೇಳುತ್ತೀರಿ, ಫೋನ್ (Phone) ಮಾಡುತ್ತೀರಿ ಅಥವಾ ಕಾಯುತ್ತೀರಿ. ಉಳಿದಂತೆ ನೋಡಿದ್ದೀರಿ, ಎಷ್ಟೋ ಜನರ ನಡುವೆ ವಾಗ್ವಾದಗಳಾಗುತ್ತವೆ. ಕೈಕೈ ಮಿಲಾಯಿಸುವ ಹಂತಕ್ಕೂ ಹೋಗುತ್ತದೆ. ಆದರೆ ಇದ್ಯಾವುದೂ ಇಲ್ಲಿ ಆಗಿಲ್ಲ. ಇಲ್ಲಿ ಆಗಿದ್ದನ್ನು ನೋಡಿ ನೆಟ್ಟಿಗರಂತೂ ಬಿದ್ದು ಬಿದ್ದು ನಗುತ್ತಿದ್ದಾರೆ. ನೀವೂ ನೋಡಿ, ನೋಡುವುದಷ್ಟೇ ಅಲ್ಲ ಓದಿ. ನಕ್ಕುನಕ್ಕು ಬಿದ್ದರೆ ನಾವಂತೂ ಹೊಣೆಯಲ್ಲ!

Follow me for episode 3 of this amazing story by u/buenocarallobueno in CasualUK

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಅಕ್ಕಪಕ್ಕದ ವ್ಯಕ್ತಿಗಳಿಬ್ಬರ ನಡುವೆ ನಡೆದ ಕಾರ್ ಪಾರ್ಕಿಂಗ್​ಗೆ ಸಂಬಂಧಿಸಿದ ಸಂದೇಶ ವಿನಿಮಯದ ಪ್ರಸಂಗವಿದು. ರೆಡ್ಡಿಟ್​ನಲ್ಲಿ ವೈರಲ್ ಆಗಿದೆ. ಈ ಫೋಟೋ ಮಾತ್ರ ಇದೆ ಆದರೆ ಇದು ಯಾವಾಗ ಎಲ್ಲಿ ನಡೆದಿತ್ತು ಎನ್ನುವ ವಿವರಗಳು ಇಲ್ಲ. ಆದರೆ ಇದನ್ನು ಪೋಸ್ಟ್ ಮಾಡಿದವರು ಬ್ರಿಟನ್​ ಮೂಲದವರು. ಸಾರ್ವಜನಿಕ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಕಾರಿನ ಕಿಟಕಿಗೆ ಈ ಚೀಟಿಯನ್ನು ಅಂಟಿಸಲಾಗಿದೆ. ಕಾರಿನ ಚಾಲಕ ಮತ್ತು ನೆರೆಯ ಮನೆಯವನೊಂದಿಗೆ ನಡೆದ ಸಂಭಾಷಣೆ ಇಲ್ಲಿದೆ.

ನಿಮ್ಮ ಕಾರನ್ನು ಇಲ್ಲಿಂದ ತೆಗೆಯಿರಿ.

ಧನ್ಯವಾದ, ಆದರೆ ಯಾಕೆ ಎಂದು ಕೇಳಬಹುದೆ? 

ತೆರಿಗೆ ಕಟ್ಟಲಾಗಿದೆ ವಿಮೆಯನ್ನೂ ಮಾಡಿಸಲಾಗಿದೆ ಮತ್ತು ನಾನು ವಾಸಿಸುವ ರಸ್ತೆಯಲ್ಲಿ ಇದು ಇದೆ. 

ಇಂತಿ ಪೌಲ್​ (ನಂ.31)

ಕೊನೇ ಪಕ್ಷ ನೀವು ಯಾರು ಎನ್ನುವುದಾದರೂ ಹೇಳಿ.

ಇದನ್ನೂ ಓದಿ : Viral Video: ಈ ಆನೆ ಇಲ್ಲಿ ಮಾಡಿದ್ದೇನು ಮತ್ತು ಓಡಿಹೋಗಿದ್ದು ಏಕೆ?

ಈ ಪೋಸ್ಟ್​ನಡಿ ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ”ಕೆಂಟ್‌ನಲ್ಲಿ ವಾಸಿಸುತ್ತಿದ್ದಾಗ ನನಗೆ ಇದೇ ರೀತಿಯ ಅನುಭವವಾಗಿತ್ತು. ಬಾಡಿಗೆ ಮನೆಯಲ್ಲಿದ್ದ ಕಾರಣಕ್ಕೆ ನಾನು ಕಾರ್ ಪಾರ್ಕಿಂಗ್​ ವಿಷಯವಾಗಿ ಇದೇ ರೀತಿ ಸಮಸ್ಯೆಯನ್ನು ಎದುರಿಸಿದ್ದೆ. ಪ್ರತೀ ದಿನ ಪೊಲೀಸ್, ಕೌನ್ಸಿಲ್​, ಎಸ್ಟೇಟ್​ ಮ್ಯಾನೇಜ್​ಮೆಂಟ್​ ಕಂಪೆನಿ, ಆಸ್ತಿ ನಿರ್ವಹಣಾ ಕಂಪೆನಿಗಳ ಹೆಸರಲ್ಲಿ ಯಾರೋ ಒಬ್ಬರು ನನ್ನ ಕಾರಿನ ಮೇಲೆ ನೋಟೀಸ್ ಅಂಟಿಸಿ ಹೋಗುತ್ತಿದ್ದರು.”

ಇದನ್ನೂ ಓದಿ : Viral Video: ಮೊದಲು ಎತ್ತಿಕೊಂಡವರಿಗೇ ಈ ನೋಟುಗಳು; ಮನಸೋತ ನೆಟ್ಟಿಗರು

”ಕೊನೆಗೆ ಒಂದು ದಿನ ಅವರನ್ನು ಪತ್ತೆ ಹಚ್ಚಿ ಎಚ್ಚರಿಕೆ ನೀಡಿದೆ. ಇನ್ನೊಮ್ಮೆ ಹೀಗೆ ಚೀಟಿ ಅಂಟಿಸಿದರೆ 1000 ಪೌಂಡ್​ ದಂಡ ಕಟ್ಟಬೇಕಾಗುತ್ತದೆ, ನೀವು ಚೀಟಿ ಅಂಟಿಸುವುದನ್ನು ನಾನು ವಿಡಿಯೋ ಮಾಡಿದ್ದೇನೆ ಎಂದು ಆಕೆಗೆ ವೈಯಕ್ತಿಕವಾಗಿ ತಿಳಿಸಿದೆ. ನಂತರ ಆಕೆ ಹೀಗೆ ಮಾಡುವುದನ್ನು ನಿಲ್ಲಿಸಿದರು’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ನಿಮಗೂ ಇಂಥ ಅನುಭವಗಳಾಗಿವೆಯೇ? ಹಂಚಿಕೊಳ್ಳಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:12 pm, Fri, 4 August 23