Viral Video: ‘ಭಾರತವನ್ನು ತೊರೆಯುವ ಕನಸು’; ಟ್ರೋಲ್ಗೆ ಒಳಗಾದ ವಿದ್ಯಾರ್ಥಿನಿಗೆ ಟ್ರ್ಯೂಕಾಲರ್ ಸಿಇಒ ಉದ್ಯೋಗ ಭರವಸೆ
Truecaller : ಭಾರತೀಯ ಮೂಲದ ಈ ವಿದ್ಯಾರ್ಥಿನಿ ಕೆನಡಾದ ಮಾಧ್ಯಮವೊಂದು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾಳೆ. ಟ್ರೋಲಿಗರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಧೃತಿಗೆಡಬೇಡ ಎಂದು ಈಕೆಯನ್ನು ಬೆಂಬಲಿಸಿದ್ದಾರೆ ಅಲನ್ ಮಮೆದಿ.
Troll : ‘ಜನರು ಈಕೆ ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡು ಈಕೆಯನ್ನು ಗೇಲಿ ಮಾಡುತ್ತಿದ್ದಾರೆ. ಆದರೆ ಇದು ಸರಿಯಲ್ಲ! ಏಕ್ತಾ, ಗೇಲಿ ಮಾಡುತ್ತಿರುವವ ಮಾತನ್ನು ಕೇಳಬೇಡಿ. ನೀವು ನಿಮ್ಮ ಕನಸಿನಂತೆ ಬದುಕುತ್ತಿದ್ದೀರಿ ಎಂದು ನಾನು ಭಾವಿಸಿದ್ದೇನೆ. ನೀವು ನಿಮ್ಮ ಕೋರ್ಸ್ ಮುಗಿಸುತ್ತಿದ್ದಂತೆ ಜಗತ್ತಿನಾದ್ಯಂತ ಇರುವ ನಮ್ಮ ಯಾವುದೇ ಟ್ರ್ಯೂಕಾಲರ್ ಕಚೇರಿಯಲ್ಲಿ ನೀವು ಕೆಲಸ ಮಾಡಬಹುದು, ಸ್ವಾಗತ.’ ಎಂದು ಟ್ರ್ಯೂಕಾಲರ್ ಕಂಪೆನಿಯ ಸಿಇಒ ಅಲನ್ ಮಮ್ಮೇದಿ (Alan Mamedi, CEO of Truecaller) ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.
People really want to misunderstand her to make fun of her. This is not OK!! Ekta, don’t listen to all these clowns making fun of you. I think you’re cool and living the dream! When you’re done with school, you’re welcome to work at Truecaller in any of our offices around the ? https://t.co/PuotNAMwKK
ಇದನ್ನೂ ಓದಿ— Alan Mamedi (@AlanMamedi) August 3, 2023
ಕೆನಡಾದಲ್ಲಿ ಜೈವಿಕ ತಂತ್ರಜ್ಞಾನದಲ್ಲಿ ಪದವಿ ಓದುತ್ತಿರುವ ಏಕ್ತಾ ಎಂಬ ಈ ವಿದ್ಯಾರ್ಥಿನಿ ಭಾರತೀಯ ಮೂಲದಾಕೆ. ಕೆನಡಾದ ಮಾಧ್ಯಮ ವರದಿಗಾರರೊಬ್ಬರು ಈಕೆಯೊಂದಿಗೆ ಸಹಜವಾಗಿ ಮಾತಿಗಿಳಿದು, ಇಲ್ಲಿಗೆ ಏಕೆ ಬಂದಿದ್ದೀರಿ, ಯಾವ ದೇಶದಿಂದ ಬಂದಿದ್ದೀರಿ, ಕೆನಡಾದಲ್ಲಿ ನಿಮಗಿಷ್ಟವಾದ ಸಂಗತಿ ಏನು? ಎಂದು ಕೇಳಿದ್ದಾರೆ, ‘ಕೆನಡಾದಲ್ಲಿ ವಿದ್ಯಾಭ್ಯಾಸ ಮಾಡುವುದು ನನ್ನ ಕನಸಾಗಿತ್ತು (ಭಾರತವನ್ನು ಬಿಟ್ಟು ಯಾವುದಾದರೂ ಹೊರದೇಶದಲ್ಲಿ ಓದಬೇಕು ಎನ್ನುವ ಅರ್ಥದಲ್ಲಿ), ಹಾಗಾಗಿ ಕೆನಡಾಗೆ ಬಂದೆ. ಬಯೋಟೆಕ್ ಕೋರ್ಸ್ ಮುಗಿಸಿದ ತಕ್ಷಣ ನಾನು ಉದ್ಯಮದಲ್ಲಿ ತೊಡಗಿಕೊಳ್ಳಬೇಕು ಎಂದುಕೊಂಡಿದ್ದೇನೆ. ಇನ್ನು ಕೆನಡಾದಲ್ಲಿರುವ ಸುಂದರ ಪ್ರಕೃತಿದೃಶ್ಯ; ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡುವುದು ನನ್ನಿಷ್ಟದ ಸಂಗತಿ’ ಎಂದಿದ್ದಾಳೆ.
ಇದನ್ನೂ ಓದಿ : Viral Video: ಮುಂಬೈ; ‘ಡ್ಯಾನ್ಸ್ ನಿಲ್ಲಿಸಿದರೆ ಮಾತ್ರ ಪ್ರಮಾಣಪತ್ರ’; ಪ್ರಾಧ್ಯಾಪಕರ ತಾಕೀತು
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ‘ಡ್ರೀಮ್ ಟು ಲೀವ್ ಇಂಡಿಯಾ- Dream to leave India’ದಡಿ ಈ ವಿದ್ಯಾರ್ಥಿಯನ್ನು ಟೀಕಿಸಿ ಟ್ರೋಲ್ ಮಾಡಲಾಯಿತು. ಇದನ್ನು ಗಮನಿಸಿದ ಟ್ರ್ಯೂಕಾಲರ್ ಸಿಇಒ ಅಲನ್ ಮಮೆಡಿ ತಮ್ಮ ಕಂಪೆನಿಯಲ್ಲಿ ಈಕೆಗೆ ಉದ್ಯೋಗದ ಭರವಸೆಯನ್ನು ನೀಡಿ ಬೆಂಬಲಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣಿಗಳು ಮಮೆಡಿಯವರ ಟ್ವೀಟ್ನಡಿ ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಇವರನ್ನು ಬೆಂಬಲಿಸಿದ್ದರೆ ಇನ್ನೂ ಕೆಲವರು ಶಬ್ದಪ್ರಹಾರಗಳಡಿ ಟೀಕಿಸಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:33 pm, Fri, 4 August 23