Viral Optical Illusion: ಬಾರ್ಬಿ; ಕಣ್ಣುಮುಚ್ಚಿ ನೋಡಿದರೆ ಮಾತ್ರ ಈ ಚಿತ್ರದೊಳಗಿನ ಪಾತ್ರ ಕಾಣುತ್ತದೆ

Barbie : ಸಿನೆಮಾದ ಪಾತ್ರವನ್ನು ಇಲ್ಲಿ ಭ್ರಮಾತ್ಮಕಗೊಳಿಸಿದ್ದಾರೆ ಕಲಾವಿದರೊಬ್ಬರು, ಸುಳಿವು ಬೇಕಾ? ಈ ಸಿನೆಮಾ ಅನೇಕ ರಾಜಕಾರಣಿಗಳಿಗೆ, ನಟನಟಿಯರಿಗೆ, ಕೇಕಿಗೆ, ಶವಪೆಟ್ಟಿಗೆಗೆ ಇನ್ನೂ ಯಾವುದಕ್ಕೆಲ್ಲ ಗುಲಾಬಿ ಜ್ವರವನ್ನು ಹರಡಿದೆ!

Viral Optical Illusion: ಬಾರ್ಬಿ; ಕಣ್ಣುಮುಚ್ಚಿ ನೋಡಿದರೆ ಮಾತ್ರ ಈ ಚಿತ್ರದೊಳಗಿನ ಪಾತ್ರ ಕಾಣುತ್ತದೆ
ಈ ಬಿಂದುವನ್ನು ದಿಟ್ಟಿಸಿ ನೋಡಿ ನಂತರ ಕಣ್ಣುಮುಚ್ಚಿ. ಯಾರು ಕಾಣುತ್ತಾರೆ ಹೇಳಿ.
Follow us
ಶ್ರೀದೇವಿ ಕಳಸದ
|

Updated on:Aug 07, 2023 | 3:39 PM

Optical Illusion : ಈವರೆಗೆ ನೀವು ಅನೇಕ ಆಪ್ಟಿಕಲ್ ಇಲ್ಲ್ಯೂಷನ್​ ಚಿತ್ರಗಳನ್ನು (Images) ನೋಡಿದ್ದೀರಿ. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ ನಿಮಗೆ ಎಷ್ಟೋ ಸಲ ಉತ್ತರವನ್ನು ಕಂಡುಕೊಳ್ಳುವಲ್ಲಿ ವಿಫಲರಾಗಿದ್ದೀರಿ. ಆದರೆ, ಇದೀಗ ಮತ್ತೊಂದು ಭ್ರಮಾತ್ಮಕ ಚಿತ್ರ ನಿಮ್ಮ ಮುಂದಿದೆ. ಆದರೆ ಕಣ್ಣು ಮುಚ್ಚಿಕೊಂಡು ನೋಡಿದರೆ ಮಾತ್ರ ಈ ಚಿತ್ರ ಕಾಣುತ್ತದೆ. ಅರೆ! ಅದು ಹೇಗೆ? ಎಂದು ಅಚ್ಚರಿಯಾಗುತ್ತಿದೆಯಾ, ಇದೇ ಅದರ ವೈಶಿಷ್ಟ್ಯತೆ. ಈ ಚಿತ್ರವನ್ನು ಕಲಾವಿದ ರಿಷಿ ಎನ್ನುವವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬಾರ್ಬಿ ಸಿನೆಮಾದ ಪಾತ್ರಧಾರಿಯನ್ನು ಈ ಚಿತ್ರದಲ್ಲಿ ಅಡಕಗೊಳಿಸಿದ್ದಾರೆ. ಯಾರವರು?

View this post on Instagram
ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

A post shared by Rishi Draws (@rishi.draws)

ನೆಟ್ಟಿಗರಂತೂ ಈ ಚಿತ್ರವನ್ನು ಅನೇಕ ಸಲ ಕಣ್ಣು ಮುಚ್ಚಿ ನೋಡೇ ನೋಡುತ್ತಿದ್ದಾರೆ. ಕೆಲವರಿಗೆ ಈ ಚಿತ್ರದೊಳಗಿನದು ಕಂಡಿದೆ, ಇನ್ನೂ ಕೆಲವರಿಗೆ ಕಂಡಿಲ್ಲ. ನೀವು ಪ್ರಯತ್ನಿಸಿದಿರಾ? ಇಲ್ಲವಾದಲ್ಲಿ ಈ ಚಿತ್ರದಲ್ಲಿ ಗುರುತು ಹಾಕಿರುವ ಬಿಂದುವಿನ ಮೇಲೆ ನಿಮ್ಮ ದೃಷ್ಟಿಯನ್ನು ಕೇಂದ್ರೀಕರಿಸಿ ನಂತರ ಕಣ್ಣು ಮುಚ್ಚಿ. ಹೇಳಿ ಬಾರ್ಬಿ ಚಿತ್ರದ ಯಾವ ಪಾತ್ರ ಇದರಲ್ಲಿ ಕಾಣುತ್ತದೆ ಎಂದು.

ಇದನ್ನೂ ಓದಿ : Viral Video: ಲಂಡನ್​ನ ಬೀದಿಯಲ್ಲಿ ಪೆಹ್ಲಾ ನಶಾ’; 17 ಮಿಲಿಯನ್​ ವೀಕ್ಷಕರನ್ನು ಸೆಳೆದ ಭಾರತೀಯ ‘ವಿಶ್’

ಆ. 5ರಂದು ಹಂಚಿಕೊಂಡ ಈ ಪೋಸ್ಟ್​ ಅನ್ನು ಈತನಕ 6.2 ಮಿಲಿಯನ್​ ಜನರು ನೋಡಿದ್ದಾರೆ. ಸುಮಾರು 4.7 ಲಕ್ಷ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಜನರು ಉತ್ತರ ಹೇಳಲು ಪ್ರಯತ್ನಿಸಿದ್ದಾರೆ. ಎಷ್ಟೋ ಸಲ ನಾನು ಕಣ್ಣು ಮಿಟುಕಿಸಿ ನೋಡಿಯೇ ನೋಡಿದೆ, ಗೊತ್ತಾಗುತ್ತಿಲ್ಲ ಎಂದಿದ್ದಾರೆ ಒಬ್ಬರು. ಕೆನ್​! ಮತ್ತೆ ಮತ್ತೆ ನೋಡಿದರೆ ಸಾಕ್ಷಾತ್ ಕೆನ್​ ಬಂದಹಾಗೆ ಆಗುತ್ತದೆ ಎಂದು ಮತ್ತೊಬ್ಬರು.

ಇದನ್ನೂ ಓದಿ : Viral Video: ಬರೀಗೈಯಲ್ಲಿ ಎರಡು ಹಾವುಗಳನ್ನು ಹಿಡಿದ ಮಹಿಳೆಯ ವಿಡಿಯೋ ವೈರಲ್

ಇದು ಕಲರ್ ನೆಗೆಟಿವ್​ನಂತಿದೆ. ಕಣ್ಣು ಮುಚ್ಚಿದರೆ ನಿಮ್ಮ ತಲೆಯೊಳಗೆ ಫೋಟೋ ಪ್ರಿಂಟ್ ಆಗುತ್ತದೆ ಎಂದಿದ್ದಾರೆ ಮಗದೊಬ್ಬರು. ಅದ್ಭುತವಾಗಿದೆ ಇದು ಎಂದು ಅನೇಕರು ತಿಳಿಸಿದ್ದಾರೆ.

ನಿಮಗೆ ಬಾರ್ಬಿಯ ಕೆನ್​ ಕಂಡನೇ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:29 pm, Mon, 7 August 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್