AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಲಂಡನ್​ನ ಬೀದಿಯಲ್ಲಿ ‘ಪೆಹ್ಲಾ ನಶಾ’; 17 ಮಿಲಿಯನ್​ ವೀಕ್ಷಕರನ್ನು ಸೆಳೆದ ಭಾರತೀಯ ‘ವಿಶ್​’

Bollywood Song : ಅದ್ಭುತವಾದ ಕಂಠ! ಹಾಗೆಯೇ ಆ ಕಲಾವಿದರ ಹಿಂದೆ ಬಂದು ಕುಳಿತುಕೊಳ್ಳುವ ಆ ಪುಟ್ಟ ಹುಡುಗಿಯರನ್ನು ಗಮನಿಸಿ. ಒಟ್ಟಿನಲ್ಲಿ ಈ ಗಾಯಕರ ಮತ್ತು ಪ್ರೇಕ್ಷಕರ ಸರಳತನ ಇಷ್ಟವಾಯಿತು ಎನ್ನುತ್ತಿದ್ದಾರೆ ನೆಟ್ಟಿಗರು.

Viral Video: ಲಂಡನ್​ನ ಬೀದಿಯಲ್ಲಿ 'ಪೆಹ್ಲಾ ನಶಾ'; 17 ಮಿಲಿಯನ್​ ವೀಕ್ಷಕರನ್ನು ಸೆಳೆದ ಭಾರತೀಯ 'ವಿಶ್​'
ಭಾರತೀಯ ಮೂಲದ ಬೀದಿ ಕಲಾವಿದ ವಿಶ್
ಶ್ರೀದೇವಿ ಕಳಸದ
|

Updated on:Aug 07, 2023 | 1:37 PM

Share

London : ಪೆಹಲಾ ನಶಾ ಈ ಹಾಡನ್ನು ಜೋ ಜೀತಾ ವೊಹೀ ಸಿಕಂದರ್ (Jo Jeeta Wohi Sikandar) ಸಿನೆಮಾದಲ್ಲಿ ಉದಿತ್ ನಾರಾಯಣ್ ಮತ್ತು ಸಾಧನಾ ಸರಗಮ್ ಹಾಡಿದ್ದಾರೆ. ಇದೇ ಹಾಡನ್ನು ಇದೀಗ ಇನ್​ಸ್ಟಾಗ್ರಾಂ ಕಲಾವಿದ ವಿಶ್ ಲಂಡನ್​ನ ಆಕ್ಸಫರ್ಡ್ ಬೀದಿಯಲ್ಲಿ ಹಾಡಿ ಲಂಡನ್​ ಮತ್ತು ನೆಟ್ಟಿಗರ ಮನಗೆದಿದ್ದಾರೆ. ಲಂಡನ್ನಿನ ಮೊದಲ ‘ಬಾಲಿವುಡ್ ಬಸ್ಕರ್’ (ಬೀದಿ ಕಲಾವಿದ)​ ಎಂದು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪರಿಚಯಿಸಿಕೊಂಡ ವಿಶ್​ನ ಈ ವಿಡಿಯೋ ಅನ್ನು ಈತನಕ ಸುಮಾರು 17 ಮಿಲಿಯನ್​ ಜನರು ನೋಡಿದ್ದಾರೆ. 2.6 ಲಕ್ಷಕ್ಕಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!
View this post on Instagram

A post shared by Vish (@vish.music)

ಲಂಡನ್​ನ ಫುಟ್​ಪಾತ್​ನಲ್ಲಿ ಕುಳಿತು ವಿಶ್ ಹಾಡುತ್ತಿದ್ದರೆ ಅವರ ಸುತ್ತಲೂ ಜನ ನಿಂತು ಕೇಳುತ್ತಿವುದಷ್ಟೇ ಅಲ್ಲ ಸ್ವತಃ ದನಿಗೂಡಿಸಿದ್ದಾರೆ. 1992ರಲ್ಲಿ ಬಿಡುಗಡೆಯಾದ ಈ ಸಿನೆಮಾದ ಈ ಹಾಡು ಈಗಿನ ಪೀಳಿಗೆಯವರನ್ನು ಆಕರ್ಷಿಸುತ್ತಿರುವುದಕ್ಕೆ ಇದರ ಸಾಹಿತ್ಯ ಸಂಗೀತ ಮತ್ತು ಗಾಯನವೇ ಕಾರಣ. ಒಂದು ವಾರದ ಹಿಂದೆ ಹಂಚಿಕೊಂಡ ಈ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯೆಗಳ ಮಳೆಯನ್ನೇ ಸುರಿಸಿದ್ದಾರೆ.

ಇದನ್ನೂ ಓದಿ : Viral: ಬ್ಯಾಕ್​ಪ್ಯಾಕ್​ ಹೊತ್ತು ಪ್ರವಾಸಕ್ಕೆ ಹೊರಟ ಪೆಂಗ್ವಿನ್​​ಗಳ ವಿಡಿಯೋ

ಯಾರೇ ಹಾಡಲಿ ಪ್ರತೀ ಬಾರಿಯೂ ಇದು ಹಿಟ್ ಆಗುತ್ತದೆ ಎಂದಿದ್ದಾರೆ ಒಬ್ಬರು. ನಾನಂತೂ ಈ ವೈಬ್​ ಅನುಭವಿಸುತ್ತಿದ್ದೇನೆ ಎಂದಿದ್ದಾರೆ ಮತ್ತೊಬ್ಬರು. ಅದ್ಭುತವಾದ ಧ್ವನಿ ಎಂದಿದ್ದಾರೆ ಇನ್ನೊಬ್ಬರು. ನೀವು ಬರೀ ಹಾಡಿಲ್ಲ, ಇದನ್ನು ಅನುಭವಿಸುತ್ತಿದ್ದೀರಿ, ನಿಮ್ಮ ಮುಖ ಮತ್ತು ಭಂಗಿಯೇ ಇದನ್ನು ಹೇಳುತ್ತಿದೆ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಬರೀಗೈಯಲ್ಲಿ ಎರಡು ಹಾವುಗಳನ್ನು ಹಿಡಿದ ಮಹಿಳೆಯ ವಿಡಿಯೋ ವೈರಲ್

ವಿಶ್​ ಹಿಂದೆ ಕುಳಿತ ಆ ಇಬ್ಬರು ಪುಟ್ಟ ಹುಡುಗಿಯರಿಂದ ಈ ವಿಡಿಯೋ ಇನ್ನಷ್ಟು ಕಳೆ ಬಂದಿದೆ. ಕಲಾವಿದರು ಮತ್ತು ಪ್ರೇಕ್ಷಕರ ಸರಳತೆಗೆ ಧನ್ಯವಾದ ಎಂದಿದ್ದಾರೆ ಇನ್ನೊಬ್ಬರು.  ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:33 pm, Mon, 7 August 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ