Viral Video: ಬರೀಗೈಯಲ್ಲಿ ಎರಡು ಹಾವುಗಳನ್ನು ಹಿಡಿದ ಮಹಿಳೆಯ ವಿಡಿಯೋ ವೈರಲ್

Woman : ಅವುಗಳ ಪಾಡಿಗೆ ಅವು ಆಟವಾಡಿಕೊಂಡಿವೆ. ಈಕೆ ಯಾಕೆ ಇಂಥ ದುಃಸ್ಸಾಹಸಕ್ಕೆ ಕೈಹಾಕಬೇಕು ಎಂದು ಕೆಲವರು. ಆಕೆ ಅವುಗಳನ್ನು ಧೈರ್ಯದಿಂದ ರಕ್ಷಿಸಿದ್ದಾಳೆ ಎಂದು ಕೆಲವರು. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

Viral Video: ಬರೀಗೈಯಲ್ಲಿ ಎರಡು ಹಾವುಗಳನ್ನು ಹಿಡಿದ ಮಹಿಳೆಯ ವಿಡಿಯೋ ವೈರಲ್
ಎರಡು ಹಾವುಗಳನ್ನು ಹಿಡಿಯುತ್ತಿರುವ ಮಹಿಳೆ
Follow us
ಶ್ರೀದೇವಿ ಕಳಸದ
|

Updated on: Aug 07, 2023 | 11:35 AM

Snakes : ಈಕೆಗೆ ಕಸದರಾಶಿಯ ನಡುವೆ ಎರಡು ಹಾವುಗಳು ಕಂಡಿವೆ. ನುಗ್ಗಿದವಳೇ ಬರೀಗೈಯಲ್ಲಿ ಎರಡೂ ಹಾವುಗಳನ್ನು ಹಿಡಿದಿದ್ದಾಳೆ. ಹಾವುಗಳು ಆಕೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿವೆ. ಆಕೆಯ ಮೇಲೆ ದಾಳಿ ಮಾಡಲು ಕೂಡ ಯತ್ನಿಸಿವೆ. ಆದರೂ ಆಕೆ ಅವುಗಳ ಬಾಲವನ್ನು ಗಟ್ಟಿಯಾಗಿ ಹಿಡಿದೆಳೆದು ಅವುಗಳೆರಡನ್ನೂ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾಳೆ. ಏ. 18ರಂದು @dekhbhai ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಇದನ್ನು ಪೋಸ್ಟ್ ಮಾಡಲಾಗಿದ್ದು ಈ ಹಳೆಯ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Dekh Bhai | Funny Memes | Videos by Om Patel (@dekhbhai)

ಈತನಕ ಸುಮಾರು 1 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ. ಈ ವಿಡಿಯೋ ನೋಡಿದ ಹೆಚ್ಚಿನ ಪಾಲು ಜನ ಈ ಮಹಿಳೆಯನ್ನು ಬೈದಿದ್ದಾರೆ. ತಮ್ಮ ಪಾಡಿಗೆ ತಾವು ಆಟವಾಡಿಕೊಂಡಿದ್ದ ಹಾವುಗಳನ್ನು ಈಕೆ ಹೀಗೆ ಹೋಗಿ ಹಿಡಿದದ್ದು ಸರಿಯಲ್ಲ. ಅಕಸ್ಮಾತ್​ ಏನಾದರೂ ಹೆಚ್ಚೂಕಡಿಮೆಯಾಗಿದ್ದರೆ? ಎಂದು ಕೇಳಿದ್ದಾರೆ. ಇನ್ನುಳಿದಂತೆ ಈಕೆಯ ಧೈರ್ಯವನ್ನು ಮೆಚ್ಚಿ ಕೊಂಡಾಡಿದ್ದಾರೆ.

ಇದನ್ನೂ ಓದಿ : Viral: ಪಾಸ್​ಪೋರ್ಟ್​ ಹುಡುಕಿ; ಹದ್ದಿನ ಕಣ್ಣುಳ್ಳವರು ನೀವಾಗಿದ್ದರೆ ಖಂಡಿತ ಹುಡುಕುತ್ತೀರಿ

ಅಯ್ಯೋ  ನನಗೆ ಈ ವಿಡಿಯೋ ನೋಡಿ ಆತಂಕ ಹೆಚ್ಚಾಗುತ್ತಿದೆ ಎಂದಿದ್ದಾರೆ ಒಬ್ಬರು. ಈಕೆಗೆ ಹಾವು ಹಿಡಿಯುವಲ್ಲಿ ಪರಿಣತಿ ಇರಬೇಕು ಅದಕ್ಕೆ ಹೀಗೆ ಎರಡೆರಡು ಹಾವುಗಳನ್ನು ಹಿಡಿದಿದ್ದಾರೆ, ಇಲ್ಲವಾದಲ್ಲಿ ಈಕೆ ಇಂಥ ಸಾಹಸಕ್ಕೆ ಮುನ್ನುಗ್ಗಿರಲಾರಳು ಎಂದಿದ್ದಾರೆ ಇನ್ನೊಬ್ಬರು. ಕನಸಿನಲ್ಲಿ ಹಾವು ಕಂಡರೇ ನಾನು ಸುಧಾರಿಸಿಕೊಳ್ಳೋಕೆ ಬಹಳ ದಿನಗಳನ್ನು ತೆಗೆದುಕೊಳ್ಳುತ್ತೇನೆ, ಇನ್ನು ಈಕೆ… ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : Viral Video: ಅಲ್ಝೈಮರ್​; ಅಪ್ಪಾ, ನಮ್ಮ ನೌಕಾಯಾನದ ನೆನಪಿದೆಯೇ, ಈ ಟ್ಯಾಟೂ ನೋಡಿ

ಯಾಕೋ ಅಕಾರಣವಾಗಿ ಈಕೆಯ ಮೇಲೆ ದ್ವೇಷ ಹುಟ್ಟುತ್ತಿದೆ ಎಂದು ಒಬ್ಬರು ಹೇಳಿದ್ದಾರೆ. ಹೌದು, ಪ್ರಕೃತಿಸಹಜವಾಗಿ ಆ ಹಾವುಗಳು ಒಂದಾಗಿದ್ದವು. ಈಕೆ ಅವುಗಳಿಗೆ ತೊಂದರೆ ನೀಡಿದಳು ಎಂದಿದ್ದಾರೆ ಮತ್ತೊಬ್ಬರು. ನಗರಪ್ರದೇಶದ ಜನರಿಗೆ ತಿಳಿವಳಿಕೆ ಇದೆ, ಆಕೆ ಅವುಗಳನ್ನು ರಕ್ಷಿಸಿದ್ದಾಳೆ ಎಂದು ಮಗದೊಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್