Viral: ಪಾಸ್​ಪೋರ್ಟ್​ ಹುಡುಕಿ; ಹದ್ದಿನ ಕಣ್ಣುಳ್ಳವರು ನೀವಾಗಿದ್ದರೆ ಖಂಡಿತ ಹುಡುಕುತ್ತೀರಿ

Passport : ಮತ್ತೆ ಬಂತಲ್ಲ ಮಂಡೇ! ತಲೆಬಿಸಿ ಮಾಡಿಕೊಳ್ಳುತ್ತಿರುವ ನಿಮಗೆ ಸಣ್ಣ ಚಟುವಟಿಕೆ ಕಾಯುತ್ತಿದೆ. ಇಲ್ಲಿ ಯಾರೋ ಒಬ್ಬರು ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ. ಕೊನೇ ಕ್ಷಣದಲ್ಲಿ ಅವರಿಗೆ ಪಾಸ್​ಪೋರ್ಟ್ ಸಿಗುತ್ತಿಲ್ಲ, ಸಹಾಯ ಮಾಡುವಿರಾ?

Viral: ಪಾಸ್​ಪೋರ್ಟ್​ ಹುಡುಕಿ; ಹದ್ದಿನ ಕಣ್ಣುಳ್ಳವರು ನೀವಾಗಿದ್ದರೆ ಖಂಡಿತ ಹುಡುಕುತ್ತೀರಿ
ಇಲ್ಲಿರುವ ವಸ್ತುಗಳ ರಾಶಿಯ ನಡುವೆ ಪಾಸ್​​ಪೋರ್ಟ್​ ಹುಡುಕಿ
Follow us
ಶ್ರೀದೇವಿ ಕಳಸದ
|

Updated on:Aug 07, 2023 | 10:31 AM

Brain Teaser : ಇಲ್ಲಿ ಯಾರೊ ಒಬ್ಬರು ಯಾವುದೋ ದೇಶದ ಪ್ರವಾಸಕ್ಕೆ (Foreign Trip) ಹೊರಡುವ ಸಿದ್ಧತೆ ನಡೆಸಿದ್ದಾರೆ. ಪ್ಯಾಕಿಂಗ್​ನ ಮೊದಲು ಎಲ್ಲ ಸಾಮಾನುಗಳನ್ನು ಹರಡಿಕೊಂಡಿದ್ದಾರೆ ಮೊಬೈಲ್​, ಕನ್ನಡಕ, ಟೋಪಿ, ಕ್ಯಾಮೆರಾ, ಚಾರ್ಜರ್​ ಮತ್ತು ಇನ್ನಿತರೇ ಅಗತ್ಯ ವಸ್ತುಗಳು. ಆದರೆ ಬಹುಮುಖ್ಯವಾದದ್ದು ಮಾತ್ರ ಎಷ್ಟು ಹುಡುಕಿದರೂ ಸಿಗುತ್ತಿಲ್ಲ. ವಿಮಾನಯಾನಕ್ಕೆ ಅದು ಬೇಕೇ ಬೇಕು. ಅದುವೇ ಪಾಸ್​ಪೋರ್ಟ್​. ನಿಮ್ಮ ಕಣ್ಣುಗಳು ಚುರುಕಾಗಿರುವುದರಿಂದ ನೀವು ಅವರಿಗೆ ಸಹಾಯ ಮಾಡುತ್ತೀರಿ ಎಂದುಕೊಂಡಿದ್ದೇವೆ. ನಿಮಗೆ ಕೊಟ್ಟಿರುವ ಸಮಯ 48 ಸೆಕೆಂಡುಗಳು.

ಇದನ್ನೂ ಓದಿ : Viral Video: ಅಲ್ಝೈಮರ್​; ಅಪ್ಪಾ, ನಮ್ಮ ನೌಕಾಯಾನದ ನೆನಪಿದೆಯೇ, ಈ ಟ್ಯಾಟೂ ನೋಡಿ

ದುರ್ಬೀನು, ಸನ್​ಸ್ಕ್ರೀನ್​ ಬಾಟಲಿ, ಪ್ರಯಾಣದ ಟಿಕೇಟು ಇನ್ನೂ ಏನೇನೋ ವಸ್ತುಗಳು ಇಲ್ಲಿ ಹರಡಿಕೊಂಡಿವೆ. ಆದರೆ ಇವುಗಳ ನಡುವೆಯೇ ಪಾಸ್​​ಪೋರ್ಟ್ ಅಡಗಿದೆ. ತಮ್ಮ ಮನೆಮಂದಿಯನ್ನೆಲ್ಲ ಕರೆಸಿ ಪಾಸ್​ಪೋರ್ಟ್​ ಹುಡುಕಲು ಅವರು ಸಹಾಯ ಕೊರಿದರೂ ಕೂಡ ಅದು ಸಿಕ್ಕಿಲ್ಲ. ಹಾಗಾಗಿ ನೀವು ಒಮ್ಮೆ ಪ್ರಯತ್ನಿಸಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral: ತಮ್ಮನ ಡೈರಿ ಪುಟ ಹಂಚಿಕೊಂಡ ಅಕ್ಕ; ನಿಜವಾಗಲೂ ನೀವೀಗ ಮೂರ್ಖ ಅಕ್ಕನೇ ಎನ್ನುತ್ತಿರುವ ನೆಟ್ಟಿಗರು

ಸಿಕ್ಕಿತಾ ಪಾಸ್​ಪೋರ್ಟ್​? ಇಲ್ಲವಾದರೆ ಸುಳಿವನ್ನು ಗಮನಿಸಿ. 48 ಸೆಕೆಂಡುಗಳಲ್ಲಿ ಹುಡುಕಲು ಕಷ್ಟವಾಗಿದ್ದರೆ ಮತ್ತೊಂದಿಷ್ಟು ಸೆಕೆಂಡುಗಳನ್ನು ಸೇರಿಸಿಕೊಳ್ಳಿ. ಚಿತ್ರದ ಬಲಭಾಗದ ಮೇಲಿನ ಮೂಲೆಯನ್ನು ಗಮನಿಸಿ. ಖಂಡಿತ ನಿಮಗೆ ಅಲ್ಲಿ ಪಾಸ್​ಪೋರ್ಟ್ ಸಿಕ್ಕೇ ಸಿಗುತ್ತದೆ. ಆದರೂ ಸಿಗಲಿಲ್ಲವಾದಲ್ಲಿ ಈ ಕೆಳಗಿನ ಚಿತ್ರವನ್ನು ಗಮನಿಸಿ.

Find the passport viral brain teaser for Monday blue

ಇಲ್ಲಿದೆ ಉತ್ತರ

ನಿಮಗೀಗ ಉತ್ತರ ಗೊತ್ತಾಯಿತಲ್ಲವಾ? ನಿಮ್ಮ ಸ್ನೇಹಿತರಿಗೆ, ಮನೆಮಂದಿಗೆ ಮತ್ತು ಮಕ್ಕಳಿಗೆ ಈ ಆಟದಲ್ಲಿ ಭಾಗಿಯಾಗುವಂತೆ ತಿಳಿಸಿ. ಯಾಕಪ್ಪಾ ಬಂತು ಈ ಸೋಮವಾರ ಎಂದು ಆಲಸ್ಯ ಹೊದ್ದುಕೊಂಡು ಕೂತಿರುವ ನೀವೀಗ ಮೆಲ್ಲನೆ ನಿಮ್ಮ ಕೆಲಸಕ್ಕೆ ತೆರಳಬಹುದು. ಎಲ್ಲ ಆಲಸ್ಯ, ಬೇಸರಗಳು ಇರುವುದು ತಲೆಯೊಳಗೇ! ಅಂದರೆ ನಿಮ್ಮ ಮೆದುಳಿನೊಳಗೆ. ಆ ಮೆದುಳನ್ನು ಇಂತಹ ಚಟುವಟಿಕೆಗಳ ದಿನವೂ ಚುರುಕುಗೊಳಿಸಿಕೊಂಡರೆ ಸಾಕು, ಸೋಮವಾರ ಅಷ್ಟೇ ಏಕೆ ಇಡೀ ವಾರ ನಿಮ್ಮನ್ನು ನೀವು ಉಲ್ಲಾಸದಿಂದ ಇಟ್ಟಕೊಳ್ಳಬಹುದು.

ಮತ್ತಷ್ಟು ವೈರಲ್​ ನ್ಯೂಸ್​​​ಗಾಗಿ ಕ್ಲಿಕ್ ಮಾಡಿ

Published On - 10:28 am, Mon, 7 August 23

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು