Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಸಾಕಿದ ಸೊಕ್ಕಿನ ಬೆಕ್ಕು ಹೀಗೆ ವ್ಯಾಘ್ರವಾಗಿ ಬಿಟ್ಟರೆ ಗತಿಯೇನು? ವಿಡಿಯೋ ನೋಡಿ

ಮನೆ ಬೆಕ್ಕಿಗೆ ಇದ್ದಕ್ಕಿದ್ದಂತೆ ಅದೇನಾಯಿತೋ ಮೃಗದಂತೆ ವರ್ತಿಸುತ್ತದೆ. ಮನೆ ಯಜಮಾನ ನಿಜಕ್ಕೂ ಆಘಾತಕ್ಕೊಳಗಾಗುತ್ತಾನೆ ಮತ್ತು ಭಯದಿಂದ ಪರದೆಯ ಹಿಂದೆ ಅಡಗಿಕೊಳ್ಳುತ್ತಾನೆ. ಅಲ್ಲಿಗೂ ಬಿಡದೆ ಆತನ ಹಿಂದೆಯೇ ಬೆಕ್ಕು ಬಂದು ದಾಳಿ ಮಾಡಿದೆ. ಅಲ್ಲಿ ಇಲ್ಲಿ ಅಂತೆಲ್ಲಾ ಬಚ್ಚಿಟ್ಟುಕೊಂಡು ಬೆಕ್ಕಿನ ದಾಳಿಯಿಂದ ಬಚಾವಾಗಲು ಆತ ಪ್ರಯುತ್ನಿಸುತ್ತಾನೆ.

ಮನೆಯಲ್ಲಿ ಸಾಕಿದ ಸೊಕ್ಕಿನ ಬೆಕ್ಕು ಹೀಗೆ ವ್ಯಾಘ್ರವಾಗಿ ಬಿಟ್ಟರೆ ಗತಿಯೇನು? ವಿಡಿಯೋ ನೋಡಿ
ಸೊಕ್ಕಿನ ಬೆಕ್ಕು ಹೀಗೆ ವ್ಯಾಘ್ರವಾಗಿ ಬಿಟ್ಟರೆ ಗತಿಯೇನು?
Follow us
ಸಾಧು ಶ್ರೀನಾಥ್​
|

Updated on:Aug 08, 2023 | 8:57 AM

Watch Video: ಅನೇಕರು ತಮ್ಮ ಮನೆಗಳಲ್ಲಿ ನಾಯಿಗಳನ್ನು ಸಾಕುತ್ತಾರೆ. ಕೆಲವರು ಬೆಕ್ಕುಗಳನ್ನು ಸಾಕುತ್ತಾರೆ. ಬೆಕ್ಕುಗಳು ಅನೇಕ ಮನೆಗಳಲ್ಲಿ ಕಂಡುಬರುತ್ತವೆ. ಈ ಬೆಕ್ಕಿನ ಮರಿಗಳನ್ನು ಸಾಕಿದರೆ ಮನೆಗಳಲ್ಲಿ ಜಗಳದ ಗೊಡವೆ ಇರೋಲ್ಲ ಎಂಬ ಕಾರಣಕ್ಕೆ ಅನೇಕರು ಇದರ ಮರಿಗಳನ್ನು ತಂದು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಹವ್ಯಾಸವಾಗಿ ಬೆಕ್ಕುಗಳನ್ನು (Pet Cat) ಸಾಕುತ್ತಾರೆ. ಬೆಕ್ಕುಗಳನ್ನು ನಗರ ಪ್ರದೇಶಗಳಲ್ಲಿ ಮತ್ತು ಹಳ್ಳಿಗಳಲ್ಲಿಯೂ ಸಾಕಲಾಗುತ್ತದೆ. ಇನ್ನೊಂದು ವಿಷಯವೆಂದರೆ ನಾಯಿಗಳು ಹೇಗೆ ಸ್ವಾಮಿನಿಷ್ಠೆ, ನಂಬಿಕೆ (Owner) ತೋರಿಸುತ್ತವೆಯೋ.. ಬೆಕ್ಕುಗಳು ಸಹ ಹಾಗೆಯೇ ತಮ್ಮ ಮಾಲೀಕರ ಮೇಲೆ ನಂಬಿಕೆಯನ್ನು ತೋರಿಸುತ್ತವೆ. ಮನೆಯ ಸುತ್ತಮುತ್ತ ಅನುಮಾನಾಸ್ಪದವಾಗಿ ಏನಾದರೂ ಕಂಡರೆ ಇವು ಮಾರುದೂರ ಓಡಿಸಿಬಿಡುತ್ತೆ (wild).

ಆದರೆ ಈ ವೀಡಿಯೋ ನೋಡಿದರೆ ಬೆಕ್ಕುಗಳೆಂದರೆ ಇಷ್ಟೊಂದು ಭಯ ಹುಟ್ಟಿಸಬಹುದೇ ಎಂದು ಆಶ್ಚರ್ಯ ಪಡುತ್ತೀರಿ. ಬೆಕ್ಕೊಂದು ಕಾಡುಪ್ರಾಣಿಯಂತೆ ನಡೆದುಕೊಂಡ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿವರಗಳಿಗೆ ಹೋದರೆ, ಒಂದು ಮನೆಯಲ್ಲಿ ದಂಪತಿಯಿದ್ದು, ಮನೆಯಲ್ಲಿ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತಾ ಮನೆಯನ್ನು ಒಪ್ಪಓರಣ ಮಾಡುತ್ತಿರುತ್ತಾರೆ. ಮನೆಯಲ್ಲಿ ಸಾಕಿದ ಬೆಕ್ಕು ಕೂಡ ಅವರ ಮಧ್ಯೆ ಸುಳಿದಾಡುತ್ತಿರುತ್ತದೆ. ಈ ಮಧ್ಯೆ ಮನೆಯ ಯಜಮಾನ ಫ್ರಿಡ್ಜ್ ಹತ್ತಿರ ಕೆಲಸ ಮಾಡುತ್ತಿರುತ್ತಾರೆ. ಆತನ ಕಾಲುಗಳ ಬಳಿ ಬೆಕ್ಕು ಇದೆ.

ಆದರೆ ಅದೇ ಸಮಯದಲ್ಲಿ ಅದಕ್ಕೆ ಇದ್ದಕ್ಕಿದ್ದಂತೆ ಅದೇನಾಯಿತೋ ಮೃಗದಂತೆ ವರ್ತಿಸುತ್ತದೆ. ಆತ ನಿಜಕ್ಕೂ ಆಘಾತಕ್ಕೊಳಗಾಗುತ್ತಾನೆ ಮತ್ತು ಭಯದಿಂದ ಪರದೆಯ ಹಿಂದೆ ಅಡಗಿಕೊಳ್ಳುತ್ತಾನೆ. ಅಲ್ಲಿಗೂ ಬಿಡದೆ ಆತನ ಹಿಂದೆಯೇ ಬೆಕ್ಕು ಬಂದು ದಾಳಿ ಮಾಡಿದೆ. ಅಲ್ಲಿ ಇಲ್ಲಿ ಅಂತೆಲ್ಲಾ ಬಚ್ಚಿಟ್ಟುಕೊಂಡು ಬೆಕ್ಕಿನ ದಾಳಿಯಿಂದ ಬಚಾವಾಗಲು ಆತ ಪ್ರಯುತ್ನಿಸುತ್ತಾನೆ. ಆದರೂ ಬೆಕ್ಕು ಆತನ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಲೇ ಇರುತ್ತದೆ. ಕೊನೆಗೂ ಬೆಕ್ಕಿನ ದಾಳಿಯಿಂದ ತಪ್ಪಿಸಿಕೊಳ್ಳುತ್ತಾನೆ. ಆದರೆ ಅಷ್ಟುಹೊತ್ತಿಗೆ ದಂಪತಿಯಿಬ್ಬರೂ ಹೈರಾಣಗೊಂಡಿರುತ್ತಾರೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ಬೇಡಿಕೆ ಏನು? ಸಿಎಂ ಸಿದ್ದರಾಮಯ್ಯ ನೀಡಿರುವ ಭರವಸೆ ಏನು? ಇನ್ ಸೈಡ್ ಸುದ್ದಿ ನೋಡಿ

ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಈಗಾಗಲೇ 9.4 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಅಸಲಿಗೆ ಯಾವುದೇ ಪ್ರಚೋದನೆ ಇಲ್ಲದೆ, ಕಾರಣವಿಲ್ಲದೆ ಬೆಕ್ಕು ತನ್ನ ಮಾಲೀಕನ ಮೇಲೆ ಏಕೆ ದಾಳಿ ಮಾಡಿದೆ ಎಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ವಿಭಿನ್ನ ರೀತಿಯ ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ. ಕೆಲವರು ಮಾಲೀಕರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ತಮ್ಮ ಬೆಕ್ಕುಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೀವೂ ಆ ವಿಡಿಯೋ ನೋಡಿ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:56 am, Tue, 8 August 23

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್