AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ಬೆಲೆ ಹೆಚ್ಚಳ ಆಯ್ತು ಈಗ ಬಾಡಿಗೆ ದರವೂ ಏರಿಕೆ!

ಕೆಎಸ್​ಆರ್​ಟಿಸಿ ಬಸ್ ಟಿಕೆಟ್ ಬೆಲೆ ಹೆಚ್ಚಳ ಆಯ್ತು ಈಗ ಬಾಡಿಗೆ ದರವೂ ಏರಿಕೆ!

ಕಿರಣ್​ ಸೂರ್ಯ
| Edited By: |

Updated on: Nov 12, 2026 | 12:41 PM

Share

ಟಿಕೆಟ್ ದರ ಏರಿಕೆ ನಂತರ, ಕೆಎಸ್‌ಆರ್‌ಟಿಸಿ ತನ್ನ ಬಸ್ ಬಾಡಿಗೆ ದರಗಳನ್ನು ಪರಿಷ್ಕರಿಸಿದೆ. ಪ್ರವಾಸ ಮತ್ತು ಮದುವೆ ಸಮಾರಂಭಗಳಿಗೆ ಬಸ್ ಬಾಡಿಗೆ ಹೆಚ್ಚಿಸಲಾಗಿದ್ದು, ರಾಜ್ಯದೊಳಗೆ ಹಾಗೂ ಅಂತರಾಜ್ಯ ಸಂಚಾರಕ್ಕೆ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ. ವಾರಾಂತ್ಯದಲ್ಲಿ ಬಾಡಿಗೆ ದರಗಳು ಮತ್ತಷ್ಟು ಹೆಚ್ಚಾಗಲಿವೆ ಎಂದು ಸಂಸ್ಥೆ ತಿಳಿಸಿದೆ.

ಬೆಂಗಳೂರು, ನವೆಂಬರ್ 12: ಇತ್ತೀಚೆಗಷ್ಟೇ ಬಸ್ ಟಿಕೆಟ್ ದರಗಳನ್ನು ಹೆಚ್ಚಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಇದೀಗ ಬಸ್ ಬಾಡಿಗೆ ದರಗಳನ್ನೂ ಪರಿಷ್ಕರಿಸಿದೆ. ಪ್ರವಾಸಗಳು, ಮದುವೆ ಸಮಾರಂಭಗಳು ಮತ್ತು ಇತರೆ ಕಾರ್ಯಕ್ರಮಗಳಿಗಾಗಿ ಬಸ್ ಬಾಡಿಗೆಗೆ ಪಡೆಯುವವರಿಗೆ ಈ ದರ ಏರಿಕೆ ಅನ್ವಯವಾಗಲಿದೆ. ರಾಜ್ಯದೊಳಗೆ ಮತ್ತು ಅಂತರಾಜ್ಯ ಸಂಚಾರಕ್ಕೆ ಪ್ರತ್ಯೇಕ ದರಗಳನ್ನು ನಿಗದಿಪಡಿಸಲಾಗಿದ್ದು, ಕಿಲೋಮೀಟರ್‌ಗೆ ಬಸ್ ಮಾದರಿಯ ಆಧಾರದ ಮೇಲೆ ದರವನ್ನು ನಿರ್ಧರಿಸಲಾಗಿದೆ. ವಿಶೇಷವಾಗಿ ವಾರಾಂತ್ಯದಲ್ಲಿ ಬಸ್ ಬಾಡಿಗೆ ದರಗಳು ಹೆಚ್ಚಾಗಲಿವೆ.

ಕೆಎಸ್‌ಆರ್‌ಟಿಸಿ ಪ್ರಕಟಿಸಿರುವ ಹೊಸ ದರಗಳ ಪ್ರಕಾರ, ಸಾಮಾನ್ಯ ಬಸ್‌ಗೆ ರಾಜ್ಯದೊಳಗೆ ಪ್ರತಿ ಕಿಲೋಮೀಟರ್‌ಗೆ 62 ರೂಪಾಯಿ ಹಾಗೂ ಅಂತರಾಜ್ಯಕ್ಕೆ 66 ರೂಪಾಯಿ ನಿಗದಿಯಾಗಿದೆ. ಅಶ್ವಮೇಧ ಬಸ್‌ಗೆ ರಾಜ್ಯದೊಳಗೆ 67 ರೂಪಾಯಿ ಮತ್ತು ಅಂತರಾಜ್ಯಕ್ಕೆ 70 ರೂಪಾಯಿ ದರವಿದೆ. ರಾಜಹಂಸ ಬಸ್‌ಗೆ ರಾಜ್ಯದೊಳಗೆ 68 ರೂಪಾಯಿ ಹಾಗೂ ಅಂತರಾಜ್ಯಕ್ಕೆ 72 ರೂಪಾಯಿ ಬಾಡಿಗೆ ನಿಗದಿಪಡಿಸಲಾಗಿದೆ. ನಾನ್-ಎಸಿ ಸ್ಲೀಪರ್ ಬಸ್‌ಗೆ ರಾಜ್ಯದೊಳಗೆ 80 ರೂಪಾಯಿ ಮತ್ತು ಅಂತರಾಜ್ಯಕ್ಕೆ 85 ರೂಪಾಯಿ ದರವಿದೆ. ಪಲ್ಲಕ್ಕಿ ಬಸ್‌ಗೆ ರಾಜ್ಯದೊಳಗೆ 85 ರೂಪಾಯಿ ಮತ್ತು ಅಂತರಾಜ್ಯಕ್ಕೆ 90 ರೂಪಾಯಿ ಆಗಿದೆ. ಐರಾವತ ಬಸ್‌ಗೆ ರಾಜ್ಯದೊಳಗೆ 85 ರೂಪಾಯಿ ಮತ್ತು ಅಂತರಾಜ್ಯಕ್ಕೆ 90 ರೂಪಾಯಿ ದರವಿದೆ. ಅಂಬಾರಿ ಉತ್ಸವ ಸ್ಲೀಪರ್ ಬಸ್‌ಗೆ ರಾಜ್ಯದೊಳಗೆ ಮತ್ತು ಅಂತರಾಜ್ಯಕ್ಕೆ ಎರಡಕ್ಕೂ 160 ರೂಪಾಯಿ ನಿಗದಿಯಾಗಿದೆ. ಐರಾವತ ಕ್ಲಬ್ ಕ್ಲಾಸ್ 2.0 ಬಸ್‌ಗೆ ರಾಜ್ಯದೊಳಗೆ 125 ರೂಪಾಯಿ ಹಾಗೂ ಅಂತರಾಜ್ಯಕ್ಕೆ 130 ರೂಪಾಯಿ ದರ ನಿಗದಿಪಡಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More