AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರ್ದಿಕ್ ಪಾಂಡ್ಯ vs ಅರ್ಷದೀಪ್ ಸಿಂಗ್:  36 ಕೋಟಿ ರೂ. ಸ್ವಾಪ್ ಡೀಲ್..!

ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಸ್ವಾಪ್ ಡೀಲ್ ಅನ್ನು ಐಪಿಎಲ್ ಆಡಳಿತ ಮಂಡಳಿ ಅಧಿಕೃತಗೊಳಿಸಿದೆ. ಈ ಒಪ್ಪಂದದ ಮೂಲಕ ಮುಂಬೈ ಇಂಡಿಯನ್ಸ್​ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಪಂಜಾಬ್ ಕಿಂಗ್ಸ್ ಸೇರಿದರೆ, ಪಂಜಾಬ್ ಕಿಂಗ್ಸ್​ ತಂಡದಲ್ಲಿದ್ದ ಅರ್ಷ್‌ದೀಪ್ ಸಿಂಗ್ ಮುಂಬೈ ಇಂಡಿಯನ್ಸ್ ಪಾಳಯಕ್ಕೆ ಸೇರ್ಪಡೆಯಾಗಿದ್ದಾರೆ.

ಝಾಹಿರ್ ಯೂಸುಫ್
|

Updated on: Nov 11, 2026 | 10:33 AM

Share
ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-20ರ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಸ್ವಾಪ್ ಡೀಲ್ ಮಾಡಿಕೊಂಡಿದೆ. ಈ ಡೀಲ್ ಮೂಲಕ ಹಾರ್ದಿಕ್ ಪಾಂಡ್ಯರನ್ನು ಪಂಜಾಬ್ ಕಿಂಗ್ಸ್ ಖರೀದಿಸಿದರೆ, ಅರ್ಷದೀಪ್ ಸಿಂಗ್ ಅವರನ್ನು ಮುಂಬೈ ಇಂಡಿಯನ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. (PC: IPL)

1 / 6
ಐಪಿಎಲ್ ಆಡಳಿತ ಮಂಡಳಿಯು ಈ ಮೆಗಾ ಟ್ರೇಡ್ ಡೀಲ್ ಅನ್ನು ಅಧಿಕೃತವಾಗಿ ಖಚಿತಪಡಿಸಿದೆ. ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮತ್ತು ಮಹತ್ವದ ಒಪ್ಪಂದಗಳಲ್ಲಿ ಒಂದಾಗಿ ಇದು ದಾಖಲಾಗಿದೆ. ಅಂದರೆ, ಇಲ್ಲಿ ನಗದು ವಹಿವಾಟಿನ ಬದಲಿಗೆ ನೇರವಾಗಿ ಆಟಗಾರರ ವಿನಿಮಯ (ಸ್ವಾಪ್ ಡೀಲ್) ನಡೆದಿದ್ದು, ಇಬ್ಬರೂ ಆಟಗಾರರ ಒಟ್ಟು ಮೌಲ್ಯ ಬರೋಬ್ಬರಿ 36 ಕೋಟಿ ರೂಪಾಯಿಗಳಾಗಿದೆ. (PC: IPL)

2 / 6
ಹಾರ್ದಿಕ್ ಪಾಂಡ್ಯ (18 ಕೋಟಿ ರೂ.): ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದಲ್ಲಿ 16.35 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ಹಾರ್ದಿಕ್ ಪಾಂಡ್ಯ ಅವರ ಶುಲ್ಕವನ್ನು ಪರಿಷ್ಕರಿಸಿ, 18 ಕೋಟಿ ರೂ.ಗಳಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಹಸ್ತಾಂತರಿಸಲಾಗಿದೆ. (PC: IPL)

3 / 6
ಅರ್ಷ್‌ದೀಪ್ ಸಿಂಗ್ (18 ಕೋಟಿ ರೂ.): ಪಂಜಾಬ್ ಕಿಂಗ್ಸ್ ತಂಡದಲ್ಲಿ ಈಗಾಗಲೇ 18 ಕೋಟಿ ರೂ. ಒಪ್ಪಂದ ಹೊಂದಿದ್ದ ಅರ್ಷ್‌ದೀಪ್ ಸಿಂಗ್, ಅದೇ ಮೊತ್ತಕ್ಕೆ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಅಂದರೆ, ಈ ಇಬ್ಬರೂ ಆಟಗಾರರ ವಿನಿಮಯದ ಒಟ್ಟು ಮೌಲ್ಯವನ್ನು 36 ಕೋಟಿ ರೂ. ಎಂದು ನಿಗದಿಪಡಿಸಲಾಗಿದೆ. (PC: IPL)

4 / 6
36 ಕೋಟಿ ರೂ. ಸ್ವಾಪ್ ಡೀಲ್ ಐಪಿಎಲ್ ಇತಿಹಾಸದಲ್ಲೇ ಒಂದು ಹೊಸ ದಾಖಲೆ. ಅಂದರೆ, ಈವರೆಗೆ ಯಾವುದೇ ಎರಡು ಫ್ರಾಂಚೈಸಿಗಳು ಇಬ್ಬರು ಆಟಗಾರರಿಗೆ 36 ಕೋಟಿ ರೂ. ನಿಗದಿಪಡಿಸಿ ವಿನಿಮಯ ಮಾಡಿಕೊಂಡ ಇತಿಹಾಸವಿಲ್ಲ. ಇದಕ್ಕೂ ಮುನ್ನ ಐಪಿಎಲ್ 2025 ರಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸಿಎಸ್‌ಕೆ ನಡುವೆ ನಡೆದಿದ್ದ 34.4 ಕೋಟಿ ರೂ.ಗಳ ಸ್ವಾಪ್ ಡೀಲ್ ದಾಖಲೆಯಾಗಿತ್ತು. (PC: IPL)

5 / 6
ಆ ಡೀಲ್ ಮೂಲಕ ಸಂಜು ಸ್ಯಾಮ್ಸನ್ (18 ಕೋಟಿ ರೂ.) ರಾಜಸ್ಥಾನ್ ರಾಯಲ್ಸ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಹೋದರೆ, ಬದಲಾಗಿ ಸಿಎಸ್‌ಕೆ ತಂಡದಿಂದ ರವೀಂದ್ರ ಜಡೇಜಾ (14 ಕೋಟಿ ರೂ.) ಮತ್ತು ಸ್ಯಾಮ್ ಕರನ್ (2.4 ಕೋಟಿ ರೂ.) ರಾಜಸ್ಥಾನ್ ರಾಯಲ್ಸ್ ತಂಡ ಸೇರಿದ್ದರು. ಇದೀಗ ಈ 34.4 ಕೋಟಿ ರೂ.ಗಳ ದಾಖಲೆಯನ್ನು ಮುರಿದು, ಅರ್ಷ್‌ದೀಪ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ 36 ಕೋಟಿ ರೂ.ಗಳ ಸ್ವಾಪ್ ಡೀಲ್‌ನೊಂದಿಗೆ ಹೊಸ ಇತಿಹಾಸ ನಿರ್ಮಿಸಿದ್ದಾರೆ. (PC: IPL)

6 / 6
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us