ಜೈಲಿನಿಂದ ಪರೋಲ್ ಮೇಲೆ ಹೊರಬಂದು ತಲೆಮರೆಸಿಕೊಂಡ ಜೀವಾವಧಿ ಶಿಕ್ಷೆ ಕೈದಿ
ಪರಪ್ಪನ ಅಗ್ರಹಾರ ಜೈಲಿನಿಂದ ಪೆರೋಲ್ ಮೇಲೆ ಹೋಗಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಸ್ಸಾಂ ಮೂಲದ ಖೈದಿ ಹುಸೇನ್ ಅಲಿಯಾಸ್ ನಸ್ರುಲ್ ಹುಸೇನ್ ತಲೆಮರೆಸಿಕೊಂಡಿದ್ದಾನೆ. ಸೆಪ್ಟೆಂಬರ್ 8ರಂದು ಜೈಲಿಗೆ ಶರಣಾಗಬೇಕಿದ್ದ ಕೈದಿ ಪರಾರಿಯಾಗಿದ್ದು, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಆನೇಕಲ್, ನವೆಂಬರ್ 12: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ತಲೆಮರೆಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಹುಸೇನ್ ಅಲಿಯಾಸ್ ನಸ್ರುಲ್ ಹುಸೇನ್ ಎಂಬಾತ ಪೆರೋಲ್ ಅವಧಿ ಮುಗಿದಿದ್ದರೂ ಜೈಲಿಗೆ ವಾಪಸ್ಸ್ ಆಗದೆ ಪರಾರಿಯಾಗಿದ್ದಾನೆ. ಹುಸೇನ್, ಕಿಡ್ನ್ಯಾಪ್ ಆ್ಯಂಡ್ ಮರ್ಡರ್ ಪ್ರಕರಣದ ಕೈದಿಯಾಗಿದ್ದು, 2021ರಲ್ಲಿ ಚಿಕ್ಕಬಳ್ಳಾಪುರ ಎರಡನೇ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 10,000 ರೂ ದಂಡ ವಿಧಿಸಿತ್ತು. ಸೆಪ್ಟೆಂಬರ್ 10ರಂದು ನ್ಯಾಯಾಲಯದ ಆದೇಶದ ಮೇರೆಗೆ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಈತ, ಸೆಪ್ಟೆಂಬರ್ 8ರಂದು ಜೈಲಿಗೆ ವಾಪಸಾಗಬೇಕಿತ್ತು. ಆದರೆ ಜೈಲಿಗೆ ಶರಣಾಗದೆ ತಲೆಮರೆಸಿಕೊಂಡಿದ್ದಾನೆ. ಕೈದಿಗೆ ಜಾಮೀನು ನೀಡಿದ್ದ ಗಂಗಣ್ಣ, ಕಣ್ಣಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು, ಪರಪ್ಪನ ಅಗ್ರಹಾರ ಪೊಲೀಸರು ಕೈದಿಗಾಗಿ ಹುಡುಕಾಟ ನಡೆಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

