Viral Video: ಕಥಕ್​ನಲ್ಲಿ ಕಾಮ್ ಡೌನ್; ನಿಜಕ್ಕೂ ಇದು ಕಣ್ಣಿಗೆ ಕಿವಿಗೆ ಹಬ್ಬವೇ ಎನ್ನುತ್ತಿರುವ ನೆಟ್ಟಿಗರು

Calm Down : ಈ ಹಾಡಿನ ಲಯದಲ್ಲಿ ಮಾಂತ್ರಿಕತೆ ಇದೆ. ಸಾವಿರಾರು ಜನರು ಪಾಶ್ಚಾತ್ಯ ಶೈಲಿಯ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಆದರೆ ಕುಮಾರ್ ಶರ್ಮಾ ಎಂಬ ನೃತ್ಯಕಲಾವಿದರು ಈ ಹಾಡಿಗೆ ಕಥಕ್​ನಲ್ಲಿ ನೃತ್ಯಸಂಯೋಜನೆ ಮಾಡಿದ್ದಾರೆ.

Viral Video: ಕಥಕ್​ನಲ್ಲಿ ಕಾಮ್ ಡೌನ್; ನಿಜಕ್ಕೂ ಇದು ಕಣ್ಣಿಗೆ ಕಿವಿಗೆ ಹಬ್ಬವೇ ಎನ್ನುತ್ತಿರುವ ನೆಟ್ಟಿಗರು
ಕುಮಾರ್ ಶರ್ಮಾ ನೃತ್ಯ ಸಂಯೋಜನೆಯಲ್ಲಿ 'ಕಾಮ್ ಡೌನ್'
Follow us
ಶ್ರೀದೇವಿ ಕಳಸದ
|

Updated on:Aug 08, 2023 | 10:32 AM

Kathak : ರೆಮಾ ಮತ್ತು ಸೆಲೆನಾ ಗೊಮೇಝ್​ನ ಕಾಮ್​ ಡೌನ್ (Calm Down) ಪ್ರಪಂಚದಾದ್ಯಂತ ಅನೇಕರ ಹೃದಯವನ್ನು ಕದ್ದಿದೆ. ಸಾಕಷ್ಟು ಜನರು ಸೃಜನಶೀಲವಾಗಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕೆಲವರು ಶಾಸ್ತ್ರೀಯ ನೃತ್ಯಪದ್ಧತಿಯನ್ನು ಅಳವಡಿಸಿ ಪ್ರದರ್ಶಿಸಲು ಪ್ರಯತ್ನಿಸಿದ್ದಾರೆ. ಈ ಹಿಂದೆ ನರ್ತಕಿಯೊಬ್ಬರು ಈ ಹಾಡಿಗೆ ಕಥಕ್ ನೃತ್ಯ ಅಳವಡಿಸಿ ಪ್ರಸ್ತುಪಡಿಸಿ ಜನರ ಮನಸ್ಸನ್ನು ಗೆದ್ದಿದ್ದರು. ಇದೀಗ ಇದೇ ಹಾಡಿಗೆ ಕಥಕ್​ನಲ್ಲಿ ನೃತ್ಯತಂಡವು ನೆಟ್ಟಿಗರ ಗಮನ ಸೆಳೆಯುತ್ತಿದೆ. ನೃತ್ಯಕಲಾವಿದ ಕುಮಾರ್ ಶರ್ಮಾ ಸಾರಥ್ಯದಲ್ಲಿ ಈ ತಂಡ ಆಕರ್ಷಕವಾಗಿ ಹೆಜ್ಜೆ ಹಾಕಿದೆ.

ಕಥಕ್​ ಬೋಲ್​ಗಳ ಹಿನ್ನೆಲೆಯಲ್ಲಿ ಈ ಹಾಡು ಕೇಳಬರುತ್ತದೆ. ತಬಲಾದಲ್ಲಿ ಜಯಂತ ಪಟ್ನಾಯಕ್​ ಸಾಥ್ ನೀಡಿದ್ದಾರೆ. ಕುಮಾರ್ ಶರ್ಮಾ, ಅನ್ಮೋಲ್ ಸೂದ್, ರಾಹುಲ್ ಶರ್ಮಾ, ಯಾಷಿಕಾ ಚೂಮರ್, ಮೇಘನಾ ಠಾಕೂರ್, ಖುಷ್ಬೂ ಗುಪ್ತಾ, ಸ್ಮೃತಿ ಭಂಡಾರಿ, ಜಿದ್ನ್ಯಾಸಾ ಕುರ್ತಾಡ್ಕರ್, ನಂದಿನಿ ಸೋನಾವನೆ, ಏನಾಕ್ಷಿ, ಯೋಗೇಶ ಥಾಂಬ್ರೆ ಮತ್ತು ಹೃದಯ ಪರಶ್​ ಇಲ್ಲಿ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ರಿಚ್ಚಿ ಸಿನೆಮಾದ ಅಂಕಿತಾ ಕುಂಡು ಹಾಡಿರುವ ‘ಮೊಗದಲ್ಲಿ’ ನಾಳೆ ಬಿಡುಗಡೆ

ಆ. 4ರಂದು ಈ ವಿಡಿಯೋ ಅನ್ನು ಯೂಟ್ಯೂಬ್​ಗೆ ಅಪ್​ಲೋಡ್ ಮಾಡಲಾಗಿದೆ. ಈತನಕವೂ ಸುಮಾರು 22,000 ಜನರು ನೋಡಿದ್ದಾರೆ. ನೂರಾರು ಪ್ರತಿಕ್ರಿಯೆಗಳು ಇದಕ್ಕಿವೆ. ಅದ್ಭುತವಾದ ನೃತ್ಯಸಂಯೋಜನೆ. ಇದನ್ನು ಈ ರೀತಿಯಾಗಿ ಪ್ರಸ್ತುತಪಡಿಸಬಹುದು ಎಂಬ ಆಲೋಚನೆಯೇ ಬಂದಿರಲಿಲ್ಲ ನೋಡಿ ಎಂದು ಒಬ್ಬರು ಹೇಳಿದ್ದಾರೆ. ಒಬ್ಬೊಬ್ಬರ ಮುಖಭಾವವು ಎಷ್ಟೊಂದು ತಾಜಾತನದಿಂದ ಕೂಡಿದೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ವೊರ್ಲಿ ಲಿಂಕ್​ನಿಂದ ಗೇಟ್​ವೇ ಆಫ್​ ಇಂಡಿಯಾ; 36 ಕಿಮೀ ಈಜಿ ತಲುಪಿದ ಸುಚೇತಾ ಬರ್ಮನ್

ಈ ಹಾಡಿಗೆ ಮಾಡಿದ ಎಷ್ಟೋ ರೀಲ್ಸ್​​ ನೋಡಿದ್ದೇನೆ ಆದರೆ ಇಷ್ಟೊಂದು ಲೀಲಾಜಾಲ ನರ್ತನ, ಪರಿಪೂರ್ಣತೆಯನ್ನು ಎಲ್ಲಿಯೂ ನೋಡಿರಲಿಲ್ಲ. ಬಹಳ ಚೆನ್ನಾಗಿ ಈ ಸಂಯೋಜನೆ ಮಾಡಿದ್ದೀರಿ. ಎಲ್ಲ ಕಲಾವಿದರೂ ಅತ್ಯಂತ ಶ್ರದ್ಧೆಯಿಂದ ಇದನ್ನು ನಿರ್ವಹಿಸಿದ್ದಾರೆ ಎಂದಿದ್ದಾರೆ ಮಗದೊಬ್ಬರು.  ಇದು ನನ್ನ ಕಣ್ಣಿಗೆ ಕಿವಿಗೆ ಹಬ್ಬದಂತೆ ಭಾಸವಾಗಿದೆ. ನೀವು ಮತ್ತಷ್ಟು ಇಂಥ ಫ್ಯೂಷನ್​ ಮಾಡಿ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 10:32 am, Tue, 8 August 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ