AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಲಿಪ್​ಸ್ಟಿಕ್ ಆಂಟೀ ಎಲ್ಲದಕ್ಕೂ ಸೈಲಂಟ್ ಸೈಲಂಟ್ ಅಂತಾರೆ’ ಸಿಟ್ಟಿಗೆದ್ದ ಪುಟ್ಟಿ

Parenting : 'ಆ ಬಸ್​ ಆಂಟೀ, ಅದೇ ಆ ಲಿಪ್​ಸ್ಟಿಕ್ ಆಂಟಿಗೆ ನೀ ಬಯ್ಯು. ಅವರಿಗೆ ಹುಚ್ಚು ಹಿಡಿದಿದೆ' ಈ ಪರಿ ಈ ಕೂಸು ಕೋಪಿಸಿಕೊಂಡಿದ್ದು ಸಕಾರಣವಾಗಿಯೇ ಇದೆ. ನಿಮ್ಮ ಮನೆಯ ಮಗುವಿಗೆ ಇಷ್ಟು ಕೋಪ ಬಂದಿದ್ದರೆ ಏನು ಮಾಡುತ್ತಿದ್ದಿರಿ?

Viral Video: 'ಲಿಪ್​ಸ್ಟಿಕ್ ಆಂಟೀ ಎಲ್ಲದಕ್ಕೂ ಸೈಲಂಟ್ ಸೈಲಂಟ್ ಅಂತಾರೆ' ಸಿಟ್ಟಿಗೆದ್ದ ಪುಟ್ಟಿ
'ಸಣ್ಣ ವಿಷಯಕ್ಕೂ ನಗುವ ಹಾಗಿಲ್ಲ ನಾವು ಎಂದರೆ ಹೇಗೆ?' ಎಂದು ಪ್ರಶ್ನಿಸುತ್ತಿರುವ ಮಗು
ಶ್ರೀದೇವಿ ಕಳಸದ
|

Updated on:Aug 08, 2023 | 1:29 PM

Share

Childhood : ಮನೆಯನ್ನೇ ತಮ್ಮ ಜಗತ್ತಾಗಿಸಿಕೊಂಡು ಮನಬಂದಂತೆ ಇದ್ದ ಮಕ್ಕಳಿಗೆ ಶಾಲೆಗೆ ಹೋಗುವುದೆಂದರೆ ಒಮ್ಮೊಮ್ಮೆ ಕೋಪ ಬಂದುಬಿಡುತ್ತದೆ! ಪಕ್ಷಿಯಂತೆ ರೆಕ್ಕೆ ಬಿಚ್ಚಿ ಹಾರಾಡಿಕೊಂಡಿರುವ ಅವುಗಳನ್ನು ಶಿಸ್ತಿನ ನೆಪದಲ್ಲಿ ಪ್ರತೀ ಹಂತಕ್ಕೂ ಕಟ್ಟಿಹಾಕುತ್ತಿದ್ದರೆ ಹೇಗಾಗಬೇಡ ಮತ್ತೆ? ಅದಕ್ಕೆ ಒಮ್ಮೊಮ್ಮೆ ಟೀಚರ್​ ಮೇಲೆ ಕೋಪ ಬರುತ್ತದೆ. ವ್ಯಾನ್​ ಡ್ರೈವರ್ ಮೇಲೆ ಕೋಪ ಬರುತ್ತದೆ. ವ್ಯಾನ್ (Van) ಆಂಟೀಗಳ ಮೇಲೂ ಕೋಪ ಬರುತ್ತದೆ. ಆ ಕೋಪ ಹಾಗೇ ಮುಂದುವರಿದಿದ್ದರೆ ಅಮ್ಮ ಅಪ್ಪನ ಮೇಲೂ ಬರುತ್ತದೆ. ಒಟ್ಟಿನಲ್ಲಿ ಕೋಪ ಕೋಪ ಕೋಪ! ಇದೀಗ ಈ ಮುದ್ದಾದ ಹೆಣ್ಣುಮಗುವಿಗೆ ಯಾಕೆ ಕೋಪ ಬಂದಿದೆ ಅಂತ ಕೇಳಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Mihira| Fashion| Toys| Books (@babymihira)

‘ಯಾವಾಗಲೂ ಸೈಲಂಟ್ ಆಗಿರು ಅಂತ ಹೇಳ್ತಾನೇ ಇರ್ತಾರೆ ಬಸ್ ಆಂಟೀ. ಸಣ್ಣ ವಿಷಯಕ್ಕೂ ಚೂರೂ ಮಾತಾಡೋ ಹಾಗಿಲ್ಲ, ನಗುವ ಹಾಗೂ ಇಲ್ಲ. ನನಗೆ ಕೋಪ ಬಂದಿದೆ ಅವರ ಮೇಲೆ. ಆ ಲಿಪ್​ಸ್ಟಿಕ್ ಆಂಟೀ ಜೊತೆ ನೀ ಮಾತಾಡು. ನನಗೆ ಬೇಜಾರಾಗಿ ಹೋಗಿದೆ. ಯಾವಾಗಲೂ ಸೈಲಂಟ್ ಆಗಿರು ಅಂತಾರೆ, ಹುಚ್ಚು ಹಿಡಿದಿದೆ ಅವರಿಗೆ.’ ಅಮ್ಮನಿಗೆ ಈ ಮಗು ಮುದ್ದುಮುದ್ದಾಗಿ ಹೀಗೆ ಕಂಪ್ಲೆಂಟ್ ಹೇಳಿದೆ.

ಇದನ್ನೂ ಓದಿ : Viral: ‘ನನ್ನ ಮಾಜಿ ಪ್ರೇಮಿಯೊಂದಿಗೆ ಮಲಗಬೇಕು’ ಹೆಂಡತಿಯ ಕೊನೆಯ ಆಸೆ; ನೆಟ್ಟಿಗರ ಸಲಹೆ ಏನು?

ಈತನಕ ಈ ವಿಡಿಯೋ ಅನ್ನು 1.9 ಲಕ್ಷ ಜನರು ಲೈಕ್ ಮಾಡಿದ್ದಾರೆ. ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದು ತಮಾಷೆ ಅಲ್ಲ. ನಿಜಕ್ಕೂ ಮಗು ತುಂಬಾ ಬೇಸರದಲ್ಲಿದೆ, ಭಾರತೀಯ ಶಾಲೆಗಳ ವಸ್ತುಸ್ಥಿತಿ ಇದು ಎಂದಿದ್ದಾರೆ ಒಬ್ಬರು. ಹತ್ತನೇ ಕ್ಲಾಸಿನಲ್ಲಿರುವ ಮಕ್ಕಳು ಕೂಡ ಇಷ್ಟೊಂದು ಚೆನ್ನಾಗಿ ಇಂಗ್ಲಿಷ್ ಮಾತನಾಡಲಾರರು ಎಂದಿದ್ದಾರೆ ಮತ್ತೊಬ್ಬರು. ಆ ಏರು ಧ್ವನಿ, ಕೈ ಮಾಡಿ ಮಾತಾಡುವ ರೀತಿ, ಮುಖದ ಮೇಲಿನ ಆ ಭಾವ ಎಲ್ಲವೂ ಬಹಳ ಮುದ್ದಾಗಿದೆ. ತಮಗಾದ ನೋವನ್ನು ಹೀಗೆ ಮಕ್ಕಳು ವ್ಯಕ್ತಪಡಿಸಬೇಕು ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral Video: ಕಥಕ್​ನಲ್ಲಿ ಕಾಮ್ ಡೌನ್; ನಿಜಕ್ಕೂ ಇದು ಕಣ್ಣಿಗೆ ಕಿವಿಗೆ ಹಬ್ಬವೇ ಎನ್ನುತ್ತಿರುವ ನೆಟ್ಟಿಗರು

ಮಕ್ಕಳೊಂದಿಗೆ ಪೋಷಕರು ಹೀಗೆಯೇ ಮಾತನಾಡಬೇಕು. ಮಕ್ಕಳು ತಮಗನ್ನಿಸಿದ್ದನ್ನು ಹೇಳುವಾಗ ತಡೆಯಬಾರದು. ಅಳು ಬಂದರೆ ಅಳಲಿ, ಕೋಪ ಬಂದರೆ ವ್ಯಕ್ತಪಡಿಸಲಿ ಆದರೆ ಹತ್ತಿಕ್ಕಬೇಡಿ. ಬೆಳವಣಿಗೆಯಲ್ಲಿ ಈ ಎಲ್ಲ ಪ್ರಕ್ರಿಯೆಯೂ ನಡೆಯುತ್ತಿರಬೇಕು ಎಂದಿದ್ದಾರೆ ಮತ್ತೊಬ್ಬರು. ಒಟ್ಟಿನಲ್ಲಿ ಮಕ್ಕಳ ಕೋಪ, ಬೇಸರ, ನೋವನ್ನು ಎಂದಿಗೂ ಕಡೆಗಣಿಸಬಾರದು. ಅದು ಅವರೊಳಗೆ ಬೇರೂರುವ ಮೊದಲು ಅದನ್ನು ಚಿವುಟಿ ಮಕ್ಕಳ ಹೃದಯದಲ್ಲಿ ಹೂವನ್ನರಳಿಸುವ ಕೆಲವನ್ನು ಪೋಷಕರೂ, ಶಿಕ್ಷಕರೂ ಮಾಡಲೇಬೇಕು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:24 pm, Tue, 8 August 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ