Viral Video: ನ್ಯೂಯಾರ್ಕ್; ಮೆಟ್ರೋದಲ್ಲಿ ಕುಟುಂಬವೊಂದರ ಮೇಲೆ ದಾಳಿ ಮಾಡಿದ ಹದಿಹರೆಯದ ಹುಡುಗಿಯರು
Assault : 'ಈ ಮೂವರೂ ಹುಡುಗಿಯರು ಎದುರಿಗೆ ಕುಳಿತಿದ್ದ ನಮ್ಮನ್ನು ನೋಡಿ ನಗಲು ಪ್ರಾರಂಭಿಸಿದರು. ನಂತರ ನಿಂದಿಸತೊಡಗಿದರು. ಅವಮಾನದ ಮೇಲೆ ಅವಮಾನ ಸಹಿಸಿದೆವು. ಆಗ ನನ್ನ ಗಂಡ, ನೀವು ಇದಕ್ಕಿಂತ ಒಳ್ಳೆಯ ಶಬ್ದಗಳನ್ನು ಹೇಳಬಹುದೇ? ಎಂದು ಕೇಳಿದರು. ಆಗ ಈ ಯುವತಿಯರು ಕೆರಳಿದರು'
New York: ಮ್ಯಾನ್ಹಾಟನ್ನ (Manhattan) ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಏಷಿಯನ್ ಕುಟುಂಬವೊಂದರ ಮೇಲೆ ಮೂವರು ಹುಡುಗಿಯರು ಏಕಾಏಕಿ ದಾಳಿ ಮಾಡಿದ್ದಾರೆ. ಗಂಡ ಹೆಂಡತಿ ಮತ್ತು ಅವರ 11 ವರ್ಷದ ಅವಳಿ ಹೆಣ್ಣುಮಕ್ಕಳ ಮೇಲೆ ಈ ಹುಡುಗಿಯರು ಕೂಗಾಡಿ, ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನ್ಯೂಯಾರ್ಕ್ ಪೊಲೀಸರು ತನಿಖೆಗಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಗುರುವಾರದಂದು ಗ್ರೀನ್ವಿಚ್ ವಿಲೇಜ್ನಲ್ಲಿ ಎಫ್ ರೈಲಿನಲ್ಲಿ ಈ ಘಟನೆ ಸಂಭವಿಸಿದೆ.
ಇದನ್ನೂ ಓದಿView this post on Instagram
ಈ ಮೂವರು ಯುವತಿಯರಲ್ಲಿ ಒಬ್ಬಾಕೆ ಆ ಕುಟುಂಬದ 51 ವರ್ಷದ ಏಷಿಯನ್ ಮಹಿಳೆ ಸ್ಯೂ ಯಂಗ್ ಮೇಲೆ ಹಲ್ಲೆ ಮಾಡಿ, ಆಕೆಯ ಕೂದಲನ್ನು ಹಿಡಿದೆಳೆದು ಆಕೆಗೆ ಒಂದೇ ಸಮ ಗುದ್ದಿದ್ದಾಳೆ. ‘ಈ ರೀಲ್ ಮಾಡಿದ ನಾನು ನಿಜಕ್ಕೂ ಆಘಾತಗೊಂಡಿದ್ದೇನೆ. ಈ ರೀಲ್ನ ಹೊರತಾಗಿಯೂ ಬರೆಯಲು ವಿಷಯಗಳಿದ್ದರೂ ನನಗೆ ಪದಗಳೇ ಎಟುಕುತ್ತಿಲ್ಲ. ಸ್ವಲ್ಪ ತಲೆ ಮತ್ತು ಬೆನ್ನು ನೋವಿದೆ, ಚೇತರಿಸಿಕೊಳ್ಳುತ್ತೇನೆ’ ಎಂದಿದ್ದಾರೆ ಈ ವಿಡಿಯೋ ಪೋಸ್ಟ್ ಮಾಡಿದ ಜೊನ್ನಾ ಲಿನ್.
ಇದನ್ನೂ ಓದಿ : Viral Video: 11 ವರ್ಷದ ಮಗ ವಿಮಾನ ಹಾರಿಸುತ್ತಿದ್ದ, ಅಪ್ಪ ಮದ್ಯ ಸೇವಿಸುತ್ತಿದ್ದ; ವೈರಲ್ ವಿಡಿಯೋ
‘ಈ ಮೂವರೂ ಹುಡುಗಿಯರು ಎದುರಿಗೆ ಕುಳಿತಿದ್ದ ನಮ್ಮನ್ನು ನೋಡಿ ನಗಲು ಪ್ರಾರಂಭಿಸಿದರು. ನಂತರ ನಿಂದಿಸತೊಡಗಿದರು. ಅವಮಾನದ ಮೇಲೆ ಅವಮಾನ ಸಹಿಸಿದೆವು. ಆಗ ನನ್ನ ಗಂಡ, ನೀವು ಇದಕ್ಕಿಂತ ಒಳ್ಳೆಯ ಶಬ್ದಗಳನ್ನು ಹೇಳಬಹುದೇ? ಎಂದು ಕೇಳಿದರು. ಆಗ ಕೆರಳಿದ ಯುವತಿಯರು ನಮ್ಮ ಮೇಲೆ ಹಲ್ಲೆ ನಡೆಸಿದರು’ ಎಂದಿದ್ದಾರೆ ಸ್ಯೂ ಯಂಗ್.
ಇದನ್ನೂ ಓದಿ : Viral: ಒಂದೇ ಆಟೋ ಒಬ್ಬನೇ ಡ್ರೈವರ್ ಒಂದೇ ಸಮಯಕ್ಕೆ ಬೇರೆಬೇರೆ ಸ್ಥಳಗಳಲ್ಲಿ ಆಟೋ ಬುಕ್ ಆಗಿದ್ದು ಹೇಗೆ?
ಜೊನ್ನಾ ಲಿನ್ ಈ ಎಲ್ಲವನ್ನೂ ಮೊಬೈಲ್ನಲ್ಲಿ ರೆಕಾರ್ಡ್ ಮಾಡುತ್ತಿದ್ದಾರೆ ಎನ್ನುವುದು ಈ ಮೂವರಿಗೂ ಗೊತ್ತಾಗಿ ಆಕೆಯನ್ನು ತಳ್ಳಿದರು. ಅಷ್ಟೇ ಅಲ್ಲ ಕೂದಲನ್ನು ಹಿಡಿದು ನೆಲಕ್ಕೆ ಬೀಳಿಸಿ ಬೆನ್ನಿನ ಮೇಲೆ ಸಾಕಷ್ಟು ಸಲ ಗುದ್ದಿದರು. ಈ ಸಂದರ್ಭದಲ್ಲಿ ಇತರೇ ಪ್ರಯಾಣಿಕರು ರಕ್ಷಣೆಗೆ ಧಾವಿಸಿದರೂ ಆ ಮೂವರು ಹುಡುಗಿಯರನ್ನು ತಡೆಯುವುದು ಅಸಾಧ್ಯವಾಗಿತ್ತು. ನಂತರ ಮುಂದಿನ ನಿಲ್ದಾಣದಲ್ಲಿ ಆ ಕುಟುಂಬವು ಇಳಿದು ಪೊಲೀಸರಿಗೆ ಈ ವಿಷಯ ತಿಳಿಸಿತು. ಇದೀಗ ನ್ಯೂಯಾರ್ಕ್ ಪೊಲೀಸರು ಈ ಕುರಿತು ತನಿಖೆ ಶುರು ಮಾಡಿದ್ಧಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ