Viral Video: ಬಂಡೀಪುರ; ಕಾರ್ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಲೆತ್ನಿಸಿದ ಪುಂಡರ ವಿಡಿಯೋ ವೈರಲ್

Road Rage : ಬಂಡೀಪುರ ಅರಣ್ಯ ಪ್ರದೇಶದಲ್ಲಿ ಚಲಿಸುತ್ತಿದ್ದ ಕಾರ್​ ಅನ್ನು ಅಡ್ಡಗಟ್ಟಿದ ಪುಂಡರು ಕಾರಿನೊಳಗಿದ್ದ ಕುಟುಂಬ ಸದಸ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದಾಳಿ ಮಾಡಲು ಯತ್ನಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.

Viral Video: ಬಂಡೀಪುರ; ಕಾರ್ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಲೆತ್ನಿಸಿದ ಪುಂಡರ ವಿಡಿಯೋ ವೈರಲ್
ಬಂಡಿಪುರದಲ್ಲಿ ಕಾರಿನ ಮೇಲೆ ದಾಳಿ ನಡೆಸಲು ಯತ್ನಿಸುತ್ತಿರುವ ದುಷ್ಕರ್ಮಿಗಳು
Follow us
ಶ್ರೀದೇವಿ ಕಳಸದ
|

Updated on: Aug 08, 2023 | 4:56 PM

Bandipur : ಬಂಡೀಪುರದ ರಸ್ತೆಯಲ್ಲಿ ಹೊರಟಿದ್ದ ಕಾರಿನ ಡ್ಯಾಶ್​ಕ್ಯಾಮ್​ನಲ್ಲಿ ಈ ಪ್ರಕರಣ ದಾಖಲಾಗಿದೆ. ವೈರಲ್ ಆಗಿರುವ ಈ ವಿಡಿಯೋ ಅನ್ನು ನೆಟ್ಟಿಗರು ಗಾಬರಿಯಿಂದ ನೋಡುತ್ತಿದ್ದಾರೆ ಮತ್ತು ಪ್ರತಿಕ್ರಿಯಿಸುತ್ತಿದ್ದಾರೆ. ಈ ಕಾರಿನ ಮುಂದೆ ಹೊರಟಿರುವ ಮಹೀಂದ್ರಾ ಥಾರ್​ ಇದ್ದಕ್ಕಿದ್ದ ಹಾಗೆ ಈ ಕಾರನ್ನು ಅಡ್ಡಗಟ್ಟುತ್ತದೆ. ನಂತರ ಅದರಿಂದ ಇಳಿದು ಬಂದ ದುಷ್ಕರ್ಮಿಗಳು ಈ ಕಾರಿನ ಚಾಲಕ  ಮತ್ತು ಅವನ ಕುಟುಂಬದವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದಾಳಿ ಮಾಡಲು ಯತ್ನಿಸುತ್ತದೆ. ಈ ವಿಡಿಯೋ ಅನ್ನು ThirdEye ಎಂಬ ಟ್ವೀಟಿಗರು ಹಂಚಿಕೊಂಡಿದ್ದು, ಈ ವಿಡಿಯೋ ಕಳಿಸಿದ ಚಾಲಕನ ಮಾತುಗಳನ್ನು ಥ್ರೆಡ್​ನಲ್ಲಿ ಈ ಕೆಳಗಿನಂತೆ ದಾಖಲಿಸಿದ್ದಾರೆ.

‘ಕುಟುಂಬ ಸಮೇತ ನಾನು ಪ್ರಯಾಣಿಸುತ್ತಿದ್ದಾಗ ಮಹೀಂದ್ರಾ ಥಾರ್​ನಲ್ಲಿರುವ ಈ ಯುವಕರು ಬಂಡೀಪುರದದಲ್ಲಿ ನನ್ನ ಕಾರನ್ನು ಅಡ್ಡಗಟ್ಟಿ ನಮ್ಮ ಮೇಲೆ ಗುಂಪುದಾಳಿ ನಡೆಸಿದ್ದಾರೆ. ಇಷ್ಟೇ ಅಲ್ಲ ಪ್ರಯಾಣದುದ್ದಕ್ಕೂ ನಮ್ಮ ವಾಹನವನ್ನು ಮುಂದೆ ಚಲಿಸದಂತೆ ಸತಾಯಿಸಿದ್ದಾರೆ. ತಮ್ಮ ಕಾರ್​ ಅನ್ನು ಓವರ್​ಟೇಕ್ ಮಾಡಿ ತಮ್ಮ ಕುಟುಂಬದ ಮೇಲೆ ದೌರ್ಜನ್ಯ ಎಸಗಿದ್ದಾರೆ. ಈ ಸಂದರ್ಭದಲ್ಲಿ ನನ್ನ ಪತ್ನಿ ದುಷ್ಕರ್ಮಿಗಳನ್ನು ಕಿಟಕಿಯಿಂದ ಹೊರತಳ್ಳಲು ಪ್ರಯತ್ನಿಸಿದಾಗ ಆಕೆಯ ಕೈಗಳು ಗಾಯಗೊಂಡಿವೆ.’

Shocking Road Rage caught on Car Dashcam at Bandipura Video went viral

ದಾಳಿ ನಡೆಸಲೆತ್ನಿಸಿದ ಪುಂಡರ ಮಹೀಂದ್ರಾ ಥಾರ್​

‘ಡ್ಯಾಶ್​ಕ್ಯಾಮ್​ನಲ್ಲಿ ಈ ಘಟನೆಯು ರೆಕಾರ್ಡ್​ ಆಗುತ್ತಿರುವುದನ್ನು ಗಮನಿಸಿದ ಅವರುಗಳು ಕ್ಯಾಮೆರಾಗೆ ಹಾನಿಯುಂಟು ಮಾಡಲು ಪ್ರಯತ್ನಿಸಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ಕೊಡಬೇಕೆಂದರೆ ಅದಾಗಲೇ ನಮ್ಮ ಕಾರು ತಮಿಳುನಾಡಿನ ಗಡಿಯನ್ನು ಸಮೀಪಿಸಿತ್ತು. ಅಲ್ಲಿಯ ಪೊಲೀಸರು ಹೆಚ್ಚಿನ ಸಹಾಯ ಮಾಡಲಿಲ್ಲ.’ ಎಂದಿದ್ದಾರೆ.

ಇದನ್ನೂ ಓದಿ : ‘Viral Video: ದೆಹಲಿ ತಿರುಪತಿ ಎಕ್ಸ್​ಪ್ರೆಸ್​ ರೈಲಿನಲ್ಲಿ ‘ಜಿರಳೆದೇವೋಭವ’

ThirdEye ಟ್ವೀಟಿಗರು ಈ ವಿವರಗಳನ್ನು ದಾಖಲಿಸಿ, ದಯವಿಟ್ಟು ಈ ಪ್ರಕರಣವನ್ನು ಸಂಪೂರ್ಣ ತನಿಖೆ ಮಾಡಿ. ಡ್ಯಾಶ್​ಕ್ಯಾಮ್​ ಕಾರಿನ ಚಾಲಕರು ಈ ಪ್ರಕರಣದ ವಿರುದ್ಧ ಎಫ್​ಐಆರ್​ ದಾಖಲಿಸಲು ಮತ್ತು ಸಂಪರ್ಕ ವಿವರಗಳನ್ನು ಹಂಚಿಕೊಳ್ಳಲು ತಯಾರಿದ್ದಾರೆ, ದಯವಿಟ್ಟು ತಕ್ಷಣ ಸಹಾಯ ಮಾಡಿ ಎಂದು ಎಜಿಡಿಪಿ ಅಲೋಕಕುಮಾರ ಮತ್ತು ಕರ್ನಾಟಕದ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ‘ಲಿಪ್​ಸ್ಟಿಕ್ ಆಂಟೀ ಎಲ್ಲದಕ್ಕೂ ಸೈಲಂಟ್ ಸೈಲಂಟ್ ಅಂತಾರೆ’ ಸಿಟ್ಟಿಗೆದ್ದ ಪುಟ್ಟಿ

ಈ ಘಟನೆ ನಡೆದಾಗ ಪೊಲೀಸರು ಮತ್ತು ಅರಣ್ಯ ಇಲಾಖೆಯವರನ್ನು ನೀವು ಯಾಕೆ ಸಂಪರ್ಕಿಸಿಲ್ಲ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಕುಟುಂಬದೊಂದಿಗೆ ನಗರದ ಹೊರವಲಯದಲ್ಲಿ ಪ್ರಯಾಣಿಸುವುದು ಕೆಲವೊಮ್ಮೆ ನಿಜಕ್ಕೂ ದುಸ್ತರವಾಗಿರುತ್ತದೆ. ಪ್ರವಾಸಿ ತಾಣಗಳಿಗೆ ಹೋಗುವ ರಸ್ತೆಗಳಲ್ಲಿ ಯುವಕರು, ಪುಂಡರು ಹೀಗೆಯೇ ವರ್ತಿಸುತ್ತಾರೆ. ಅವರೆಲ್ಲ ಒಟ್ಟಿಗೆ ಇರುವಾಗ ತಮ್ಮ ಮೇಲೆಯೇ ತಾವು ನಿಯಂತ್ರವಣವನ್ನು ಕಳೆದುಕೊಳ್ಳುತ್ತಾರೆ. ಆದಷ್ಟು ಅವರೊಂದಿಗೆ ಸಂಘರ್ಷಕ್ಕಿಳಿಯದಿರಿ ಎಂದು ಸಲಹೆ ನೀಡಿದ್ಧಾರೆ ಒಂದಿಷ್ಟು ಜನ.

ಇದನ್ನೂ ಓದಿ : Viral: ‘ನನ್ನ ಮಾಜಿ ಪ್ರೇಮಿಯೊಂದಿಗೆ ಮಲಗಬೇಕು’ ಹೆಂಡತಿಯ ಕೊನೆಯ ಆಸೆ; ನೆಟ್ಟಿಗರ ಸಲಹೆ ಏನು?

ಈ ಪುಂಡರು ಪಾನಮತ್ತರಾಗಿದ್ದಾರೆ ಎನ್ನುವುದನ್ನು ಇವರ ವರ್ತನೆಯಿಂದಲೇ ತಿಳಿದುಕೊಳ್ಳಬಹುದು. ಯಾರೇ ಆಗಲಿ ಅರಣ್ಯಪ್ರದೇಶದಲ್ಲಿ ಪ್ರಯಾಣಿಸುವಾಗ ಕಾರಿನಿಂದ ಕೆಳಗೆ ಇಳಿಯದಿರಿ. ಸಾಧ್ಯವಾದಷ್ಟು ಪರಿಸ್ಥಿತಿಯನ್ನು ನಿಭಾಯಿಸುವ ಜಾಣ್ಮೆ ತೋರಿ ನಂತರ ಈ ಕುರಿತು ಪೊಲೀಸರಿಗೆ ದೂರು ಕೊಡಿ ಎಂದಿದ್ದಾರೆ ಕೆಲ ನೆಟ್ಟಿಗರು.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ