ಪ್ರವಾದಿಯನ್ನು ನಿಂದಿಸುವವರ ಶಿರಚ್ಛೇದ ಮಾಡಿ ಎಂಬ ವಿಡಿಯೋ ವೈರಲ್; ಆರೋಪಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹ

Karnataka Instagram Influencer's Controversial statement; ಸೈಯದ್ ಕರ್ನಾಟಕದವ ಎನ್ನಲಾಗಿದ್ದು, ಹಿಂದೂ ಜನಜಾಗೃತಿ ಸಮಿತಿ ಮುಖಂಡ ಮೋಹನ್ ಗೌಡ ಅವರು ಡಿಜಿಪಿ ಅಲೋಕ್ ಮೋಹನ್ ಅವರನ್ನು ಟ್ಯಾಗ್ ಮಾಡಿ ಸೈಯದ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ‘ಪ್ರವಾದಿಯನ್ನು ನಿಂದಿಸುವವರ ಶಿರಚ್ಛೇದ ಮಾಡಿ’ ಎಂದು ಸೈಯದ್ ಹೇಳಿರುವುದು ವಿಡಿಯೋದಲ್ಲಿದೆ.

ಪ್ರವಾದಿಯನ್ನು ನಿಂದಿಸುವವರ ಶಿರಚ್ಛೇದ ಮಾಡಿ ಎಂಬ ವಿಡಿಯೋ ವೈರಲ್; ಆರೋಪಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ವೈರಲ್ ವಿಡಿಯೋದ ಸ್ಕ್ರೀನ್​​ಗ್ರ್ಯಾಬ್
Follow us
TV9 Web
| Updated By: Ganapathi Sharma

Updated on: Aug 08, 2023 | 5:13 PM

ಬೆಂಗಳೂರು: ಸೈಯದ್ ಅಲಿ ಅಕ್ಬರ್ ಜಾಗೀರದಾರ್ ಎಂಬ ಇನ್‌ಸ್ಟಾಗ್ರಾಮ್ ಇನ್​ಫ್ಲೂಯೆನ್ಸರ್​​​ (Instagram Influencer) ನೀಡಿರುವ ವಿವಾದಾತ್ಮಕ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗುತ್ತಿದೆ. ಇದಕ್ಕೆ ಅನೇಕ ಕಮೆಂಟ್​​ಗಳು ಬಂದಿದ್ದು, ಹಿಂದೂ ಸಂಘಟನೆಗಳು ಮತ್ತು ಬಲಪಂಥೀಯ ಗುಂಪುಗಳು ಸೈಯದ್ ಅಲಿ ಅಕ್ಬರ್ ಜಾಗೀರದಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿವೆ. ಸೈಯದ್ ಕರ್ನಾಟಕದವ ಎನ್ನಲಾಗಿದೆ. ಹೀಗಾಗಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪೊಲೀಸರನ್ನು ಟ್ವಿಟರ್ ಬಳಕೆದಾರರು ಆಗ್ರಹಿಸಿದ್ದಾರೆ.

ಸೈಯದ್ ಕರ್ನಾಟಕದವ ಎನ್ನಲಾಗಿದ್ದು, ಹಿಂದೂ ಜನಜಾಗೃತಿ ಸಮಿತಿ ಮುಖಂಡ ಮೋಹನ್ ಗೌಡ ಅವರು ಡಿಜಿಪಿ ಅಲೋಕ್ ಮೋಹನ್ ಅವರನ್ನು ಟ್ಯಾಗ್ ಮಾಡಿ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

‘ಪ್ರವಾದಿಯನ್ನು ನಿಂದಿಸುವವರ ಶಿರಚ್ಛೇದ ಮಾಡಿ’ ಎಂದು ಸೈಯದ್ ವಿಡಿಯೋದಲ್ಲಿ ಹೇಳಿದ್ದಾನೆ. ಮತ್ತೊಂದು ವೀಡಿಯೊದಲ್ಲಿ, ‘ಕುರಾನ್ ಪ್ರಕಾರ ಕಾಫಿರರಿಗೆ ಇರುವ ಏಕೈಕ ಸ್ಥಳವೆಂದರೆ ನರಕ’ ಎಂದು ಹೇಳಿದ್ದಾನೆ.

ಎರಡು ದಿನಗಳ ಹಿಂದೆ ಸೈಯದ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಅಪ್‌ಲೋಡ್ ಆಗಿತ್ತು.

ಇನ್​ಸ್ಟಾಗ್ರಾಂ ಖಾತೆಯಲ್ಲಿ ಅಪ್​ಲೋಡ್ ಆಗಿದ್ದ, ಸದ್ಯ ವೈರಲ್ ಆಗಿರುವ ವೀಡಿಯೊಗಳ ಸತ್ಯಾಸತ್ಯತೆಯನ್ನು ‘ಟಿವಿ9’ ಪರಿಶೀಲಿಸಲು ಸಾಧ್ಯವಾಗಲಿಲ್ಲ.

ವಲ್ಲಭನ್ ಎಂಬ ಬಳಕೆದಾರರು ಪೊಲೀಸರು ಏಕೆ ವಿಚಾರಣೆ ನಡೆಸುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ದುರದೃಷ್ಟವಶಾತ್, ಕರ್ನಾಟಕದಲ್ಲಿ ಖಟ್ಟರ್ ಅಥವಾ ಯೋಗಿ ಇಲ್ಲ ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

ಇದನ್ನೂ ಓದಿ: ನರ್ಸ್​​ಗಳನ್ನು ಗುರಿಯಾಗಿಸಿಕೊಂಡು ರೀಲ್ಸ್​: ಹುಬ್ಬಳ್ಳಿಯ ಕಿಮ್ಸ್​ನ 11 ಎಂಬಿಬಿಎಸ್​ ವಿದ್ಯಾರ್ಥಿಗಳು ಅಮಾನತು

ರಾಜ್ಯದಲ್ಲಿ ಇತ್ತೀಚೆಗೆ ಕೋಮು ಸೂಕ್ಷ್ಮ ಪ್ರಕರಣಗಳು ಹೆಚ್ಚಾಗುತ್ತಿವೆ. ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಮಾಡಿದ್ದ ವಿಚಾರ ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅದರ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿಯೂ ಅಂಥದ್ದೇ ಕೃತ್ಯ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ನೈತಿಕ ಪೊಲೀಸ್ ಗಿರಿ ಹಾವಳಿಯೂ ಮಿತಿ ಮೀರಿದೆ. ಕಾನೂನು ಬಾಹಿರ ಕೃತ್ಯ ಎಸಗುವವರ, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಬಾರಿ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ಇಂಥ ಕೃತ್ಯಗಳು ವರದಿಯಾಗುತ್ತಲೇ ಇವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ