Viral: ಒಂದೇ ಆಟೋ ಒಬ್ಬನೇ ಡ್ರೈವರ್ ಒಂದೇ ಸಮಯಕ್ಕೆ ಬೇರೆಬೇರೆ ಸ್ಥಳಗಳಲ್ಲಿ ಆಟೋ ಬುಕ್ ಆಗಿದ್ದು ಹೇಗೆ?
Auto Ride: ಬೆಂಗಳೂರಿನಲ್ಲಿ ಆಟೋ ಬುಕ್ ಮಾಡಿದ ಪ್ರಯಾಣಿಕರೊಬ್ಬರ ಅನುಭವವಿದು. ಯಾಕೆ ಹೀಗಾಗಿದೆ, ನಿಮಗೇನಾದರೂ ಗೊತ್ತೆ? ದಶರಥನಿಗೆ ಬೇಗ ಶ್ರೀಮಂತನಾಗಬೇಕೆನ್ನಿಸಿದೆ ಎಂದು ನೆಟ್ಟಿಗರೇನೋ ತಮಾಷೆ ಮಾಡುತ್ತಿದ್ದಾರೆ...
Bengaluru : ಆಟೋ, ಕ್ಯಾಬ್ ಪ್ರಯಾಣಕ್ಕೆ ಸಂಬಂಧಿಸಿದ ಅನೇಕ ರೀತಿಯ ಘಟನೆಗಳನ್ನು ಓದುತ್ತಿರುತ್ತೀರಿ. ಕೆಲವೊಮ್ಮೆ ನಿಮ್ಮ ಹೃದಯ ಮಿಡಿಯುತ್ತದೆ. ಕೆಲವೊಮ್ಮೆ ಕೋಪ ಬರುತ್ತದೆ. ಇನ್ನೂ ಕೆಲವೊಮ್ಮೆ ಅಚ್ಚರಿಯೂ ಆಗುತ್ತದೆ. ಇದೀಗ ಹೇಳಹೊರಟಿರುವ ಈ ಘಟನೆಗೆ ನೀವು ಹೇಗೆ ಸ್ಪಂದಿಸುತ್ತೀರಿ ಎಂಬ ಕುತೂಹಲ ನಮ್ಮದು. Harsh.fig ಎಂಬ X (Twitter) ಖಾತೆದಾರರು, ಆಟೋ ಚಾಲಕರೊಬ್ಬರು ಒಂದೇ ಸಮಯಕ್ಕೆ ಎರಡು ವಿಭಿನ್ನ ಆ್ಯಪ್ಗಳಲ್ಲಿ ಎರಡು ವಿಭಿನ್ನ ಸ್ಥಳಗಳಲ್ಲಿ ಮತ್ತು ಎರಡು ಪ್ರತ್ಯೇಕ ಮೊಬೈಲ್ಗಳಲ್ಲಿ ಆಟೋರೈಡ್ ಸ್ವೀಕರಿಸಿರುವ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ನೆಟ್ಟಿಗರಿಗಿದು ಉಚಿತ ಮನರಂಜನೆಯ ಸರಕಾಗಬಹುದೇನೋ.
2 different locations 2 different apps 2 different phones
ಇದನ್ನೂ ಓದಿSame auto Same driver @peakbengaluru much? pic.twitter.com/JhhoBg7c2J
— harsh.fig ? ? (@design_melon_) August 6, 2023
ಎರಡು ವಿಭಿನ್ನ ಸ್ಥಳಗಳಲ್ಲಿ, ಎರಡು ವಿಭಿನ್ನ ಅಪ್ಲಿಕೇಶನ್‌ಗಳಲ್ಲಿ, ಎರಡು ವಿಭಿನ್ನ ಫೋನ್‌ಗಳಲ್ಲಿ ಒಬ್ಬನೇ ಆಟೋ ಚಾಲಕ ಈ ರೈಡ್ ಅನ್ನು ಸ್ವೀಕರಿಸಿದ್ದು ಹೇಗೆ? ಎನ್ನುವ ಅಚ್ಚರಿಯಲ್ಲಿ ನೆಟ್ಟಿಗರು ಬಿದ್ದಿದ್ದಾರೆ. ದಶರಥ ಎಂದು ರೈಡರ್ನ ಹೆಸರನ್ನು ಮತ್ತು ಒಂದೇ ಆಟೋ ನಂಬರ್ ಅನ್ನು ಈ ಆ್ಯಪ್ಗಳು ತೋರಿಸಿವೆ.
ಇದನ್ನೂ ಓದಿ : Viral Video: ಏಕಕಾಲಕ್ಕೆ ಸೈಕಲ್ ಓಡಿಸುತ್ತ ಪಿಯಾನೋ ನುಡಿಸುತ್ತಿರುವ ಈ ಮುಸಾಫಿರ್
ಆ. 6ರಂದು ಹಂಚಿಕೊಂಡ ಈ ಪೋಸ್ಟ್ ಅನ್ನು ಈತನಕ 380 ಜನರು ನೋಡಿದ್ದಾರೆ. ಹಾಗೆ ನೋಡಿದರೆ ಇದು ಸಾಕಷ್ಟು ಜನರ ಕಣ್ಣಿಗೆ ಬಿದ್ದಂತಿಲ್ಲ. ದಶರಥ ಬೇಗ ಶ್ರೀಮಂತನಾಗಲು ಹೊರಟಿರುವಂತೆ ಕಾಣುತ್ತಿದೆ ಎಂದಿದ್ದಾರೆ ಒಬ್ಬರು. ಆಮೇಲೆ ಏನಾಯಿತು? ಈ ವಿಷಯವಾಗಿ ನೀವು ಅವರನ್ನು ವಿಚಾರಿಸಿದಿರೆ? ಅವರ ಆಟೋದಲ್ಲಿ ಪ್ರಯಾಣಿಸಿದಿರೆ? ಹಣವನ್ನು ಹೇಗೆ ಪಾವತಿ ಮಾಡಿದಿರಿ? ಎಂದು ಕೇಳಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಬಂಡೀಪುರ; ಕಾರ್ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಲೆತ್ನಿಸಿದ ಪುಂಡರ ವಿಡಿಯೋ ವೈರಲ್
ದಶರಥನ ಈ ಪ್ರಕರಣದ ಬಗ್ಗೆ ನಿಮಗೇನು ಅನ್ನಿಸುತ್ತದೆ? ಹೇಗೆ ಎರಡು ವಿಭಿನ್ನ ಆ್ಯಪ್ಗಳಲ್ಲಿ ಏಕಕಾಲಕ್ಕೆ ಬೇರೆ ಬೇರೆ ಸ್ಥಳದಲ್ಲಿ ರೈಡ್ ಸ್ವೀಕರಿಸಲು ಸಾಧ್ಯ? ಯೋಚಿಸಿ, ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:12 pm, Tue, 8 August 23