Viral Video: ಏಕಕಾಲಕ್ಕೆ ಸೈಕಲ್ ಓಡಿಸುತ್ತ ಪಿಯಾನೋ ನುಡಿಸುತ್ತಿರುವ ಈ ಮುಸಾಫಿರ್
Street Artist : 'ಯಾರೇ ಕೂಗಾಡಲಿ ಯಾರೇ ಹಾರಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ' ಎಂದು ಹೊರಟಂತಿದೆ ಈ ಅಜ್ಜ. ಹಣ್ಣುಹಣ್ಣಾದ ಈ ಆಧುನಿಕ ಗಂಧರ್ವನ ಕಲಾಸಾಹಸಪಯಣದಲ್ಲಿ ನೀವೂ ಜೊತೆಯಾಗಬೇಕೆ? ನೋಡಿ ಈ ವಿಡಿಯೋ.

Artist : ಕಲೆ ಎಂದರೆ ಹುಚ್ಚು, ಕಲೆ ಎಂದರೆ ಸಾಹಸ, ಕಲೆ ಎಂದರೆ ಪ್ರೀತಿ, ಕಲೆ ಎಂದರೆ ಬದುಕು, ಕಲೆ ಎಂದರೆ ಎದೆಗಂಟಿಕೊಂಡಂಥದ್ದು, ಅಂದರೆ ಕಲೆಯೇ ಉಸಿರು ಎನ್ನುವ ಅರ್ಥದಲ್ಲಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಹಣ್ಣುಹಣ್ಣಾದ ಈ ಅಜ್ಜ ದೊಡ್ಡದಾದ ಪಿಯಾನೋ ಅನ್ನು ತನ್ನ ಸೈಕಲ್ಲಿನಲ್ಲಿ ಅಳವಡಿಸಿಕೊಂಡು ಇತ್ತ ಪಿಯಾನೋ (Piano) ನುಡಿಸುತ್ತ ಮತ್ತು ಅಡ್ಡಡ್ಡವಾಗಿ ಸೈಕಲ್ ತುಳಿಯುತ್ತ ಹೊರಟಿದ್ದಾನೆ. ಹೊರಟಿರುವುದು ಯಾವುದೋ ಕಾಡಿನೊಳಗೆ ಅಲ್ಲ ಮತ್ತೆ ನಗರದ ಮುಖ್ಯ ರಸ್ತೆಯೊಳಗೆ! ಈ ವಯಸ್ಸಿನಲ್ಲಿಯೂ ಈತ ಈ ಬಹುಕೌಶಲವನ್ನು ಇಷ್ಟು ಜತನದಿಂದ ಕಾಪಾಡಿಕೊಂಡು ಬಂದಿದ್ದಾನೆಂದರೆ…
ಸೈಕಲ್ನ ಲಯ ತಪ್ಪದಂತೆ ಪಿಯಾನೋ ಬೇಸುರ್ ಆಗದಂತೆ ಈತ ಹೀಗೆ ನಿರಾಯಾಸವಾಗಿ ಚಲಿಸುವುದು ನಿಜಕ್ಕೂ ಬೆರಗು ಹುಟ್ಟಿಸುವಂತಿದೆ. ಎದುರಿಗೆ ನೋಡಿಕೊಂಡು ಗಾಡಿ ಓಡಿಸುವ ನಮಗೆ ಅದೆಷ್ಟೋ ಆತಂಕಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ತಲೆಯನ್ನು ಮೊಸರು ಗಡಿಗೆ ಮಾಡಿಕೊಂಡಿರುತ್ತೇವೆ. ಆದರೆ ಈ ಬೀದಿಕಲಾವಿದ ಮಾತ್ರ ಅಪ್ಪಟ ಸಾಹಸಿಗ. ಈಗಲೇ ಈತ ಹೀಗಿದ್ದಾನೆಂದರೆ ಇನ್ನು ವಯಸ್ಸಿನಲ್ಲಿ!
ಇದನ್ನೂ ಓದಿ : Viral Video: ಬಂಡೀಪುರ; ಕಾರ್ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಲೆತ್ನಿಸಿದ ಪುಂಡರ ವಿಡಿಯೋ ವೈರಲ್
17 ವರ್ಷಗಳಿಂದ ನಾನು ಕುಳಿತುಕೊಂಡು ಪಿಯಾನೋ ನುಡಿಸಲು ಪ್ರಯತ್ನಿಸುತ್ತಿದ್ದೇನೆ, ಇನ್ನೂ ನನ್ನ ಕೈಗಳು ಕೂತಿಲ್ಲ. ಆದರೆ ಈ ಅಜ್ಜ, ಅದ್ಭುತ! ನಿಮ್ಮ ಈ ಸಾಹಸ ಮತ್ತು ಕಲಾಮನೋಭಾವ ಹೀಗೇ ವೃದ್ಧಿಸಲಿ. ಈಗಿನ ಯುವಪೀಳಿಗೆಗೆ ಮಾದರಿಯಾಗಿರಲಿ ಎಂದು ಹೇಳಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ದೆಹಲಿ ತಿರುಪತಿ ಎಕ್ಸ್ಪ್ರೆಸ್ ರೈಲಿನಲ್ಲಿ ‘ಜಿರಳೆದೇವೋಭವ’
ನೆಟ್ಟಿಗರ ಕಣ್ಣಿಗೆ ಈ ಅಜ್ಜ ಇನ್ನೂ ಅಷ್ಟಾಗಿ ಬಿದ್ದಂತಿಲ್ಲ ಈತನಕ ಈ ವಿಡಿಯೋ ಕೇವಲ 750 ಜನರ ಕಣ್ಣಿಗೆ ಬಿದ್ದಿದೆ. ಈ ಡಿಜಿಟಲ್ ಕಾಲದಲ್ಲಿ ತನ್ನ ಸಂಗೀತವನ್ನು ಯಾರು ಕೇಳುತ್ತಾರೆ, ತನ್ನ ಈ ಕಲಾಸಾಹಸವನ್ನು ಯಾರು ಶ್ಲಾಘಿಸುತ್ತಾರೆ ಅಂತೆಲ್ಲ ಎಣಿಸದೆ ತನ್ನ ಪಾಡಿಗೆ ತಾನು ವಿಹರಿಸುತ್ತಿದ್ದಾನೆ. ಈ ವಯಸ್ಸಿನಲ್ಲಿ ಕುಳಿತಲ್ಲಿಂದ ನಾಲ್ಕು ಹೆಜ್ಜೆ ನಡೆಯುವುದೇ ಅನೇಕರಿಗೆ ದುಸ್ತರ. ಆದರೆ ಈತನ ಈ ನಾದಪಯಣ ಎಷ್ಟೊಂದು ಶ್ರಮದಾಯಕವಾಗಿದೆ ನೋಡಿ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ