Viral Video: ವೃದ್ಧರೊಬ್ಬರ ಕಾಲ್ಪನಿಕ ಕ್ರಿಕೆಟ್​; ನೆಟ್ಟಿಗರಲ್ಲಿ ಚಿಮ್ಮಿದ ಉತ್ಸಾಹ

Imagination : ತಮ್ಮ ಪಾಡಿಗೆ ತಾವು ರಸ್ತೆಯಲ್ಲಿ ಈ ವೃದ್ಧರು ಕ್ರಿಕೆಟ್ ಆಟದಲ್ಲಿ ಮುಳುಗಿದ್ದಾರೆ. ಇವರು ಪಾಕಿಸ್ತಾನದವರೋ ಭಾರತದವರೋ ಎಂಬ ಜಿಜ್ಞಾಸೆ ನೆಟ್ಟಿಗರಲ್ಲಿ ಹುಟ್ಟಿಕೊಂಡಿದೆ. ಅನೇಕರು ಇವರನ್ನು ಹುರಿದುಂಬಿಸಿದ್ದಾರೆ. ನೀವು?

Viral Video: ವೃದ್ಧರೊಬ್ಬರ ಕಾಲ್ಪನಿಕ ಕ್ರಿಕೆಟ್​; ನೆಟ್ಟಿಗರಲ್ಲಿ ಚಿಮ್ಮಿದ ಉತ್ಸಾಹ
ಕಲ್ಪನೆಯಲ್ಲಿ ಕ್ರಿಕೆಟ್ ಆಡುತ್ತಿರುವ ವೃದ್ಧ
Follow us
ಶ್ರೀದೇವಿ ಕಳಸದ
|

Updated on:Aug 08, 2023 | 2:30 PM

Cricket : ಭಾರತ ಎಂದಾಕ್ಷಣ ಒಂದು ಬಾಲಿವುಡ್ ಇನ್ನೊಂದು ಕ್ರಿಕೆಟ್​. ಈ ಎರಡು ಸಂಗತಿಗಳೇ ಭಾರತವನ್ನು ಬದುಕಿಸುತ್ತಿರುವುದು ಎಂಬ ಸಾಮಾನ್ಯ ಹೇಳಿಕೆಯೊಂದಿದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡುತ್ತಿದ್ದರೆ ಇದು ನಿಜವೇ?! ಎನ್ನಿಸುವಂತಿದೆ. ಬೌನ್ಸರ್​ನಿಂದ ಸಿಕ್ಸರ್ (Sixer) ಹೊಡೆದೆ ಎಂಬಂತೆ ಕೈಯಲ್ಲಿ ಬ್ಯಾಟ್​ ಹಿಡಿದಂತೆ ನಟಿಸುತ್ತಿರುವ ಈ ವೃದ್ಧರ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇವರ ಉತ್ಸಾಹವನ್ನು, ಕ್ರಿಕೆಟ್ಟಿನ ಹುಚ್ಚನ್ನು ನೆಟ್ಟಿಗರು ಪದೇಪದೇ ನೋಡುತ್ತ ಆನಂದಿಸುತ್ತಿದ್ದಾರೆ.

@theprayagtiwari ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ‘ಕ್ರಿಕೆಟ್ ಎನ್ನುವುದು ಭಾವನೆಗಳ ಆಟ’ ಎಂಬ ಒಕ್ಕಣೆಯಿರುವ ಈ ವಿಡಿಯೋ ಅನ್ನು ಈತನಕ 2 ಮಿಲಿಯನ್ ಜನರು ನೋಡಿದ್ದಾರೆ. ಈ ವಯೋವೃದ್ಧರು ಪಾಕಿಸ್ತಾನದವರೇ ಅಥವಾ ಭಾರತದವರೇ ಎಂಬ ಬಗ್ಗೆ ಖಚಿತತೆ ಇಲ್ಲ. ಆದರೆ ಇವರು ಕ್ರಿಕೆಟ್​ನ ಅಪ್ಪಟ ಅಭಿಮಾನಿ ಎನ್ನುವುದು ಮಾತ್ರ ನಿಜ.

ಇದನ್ನೂ ಓದಿ : Viral Video: ‘ಲಿಪ್​ಸ್ಟಿಕ್ ಆಂಟೀ ಎಲ್ಲದಕ್ಕೂ ಸೈಲಂಟ್ ಸೈಲಂಟ್ ಅಂತಾರೆ’ ಸಿಟ್ಟಿಗೆದ್ದ ಪುಟ್ಟಿ

ಅನೇಕರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಶ್ರೇಯಸ್ ಅಯ್ಯರ್​ಗಿಂತ ಒಳ್ಳೆಯ ಆಟಗಾರ ಎಂದಿದ್ದಾರೆ ಒಬ್ಬರು. ಚಾಚಾಜಾನ್​ ಎಂದು ಹರ್ಷ ವ್ಯಕ್ತಪಡಿಸಿದ್ಧಾರೆ ಒಂದಿಷ್ಟು ಜನ. ಕ್ರಿಕೆಟ್ ಎನ್ನುವುದು ದಕ್ಷಿಣ ಏಷ್ಯಾದವರಿಗೆ ಎಮೋಷನ್! ಎಂದಿದ್ದಾರೆ ಮತ್ತೊಬ್ಬರು. ಆಹಾ ಇದು ಸಿಕ್ಸರ್ ಎಂದಿದ್ದಾರೆ ಮಗದೊಬ್ಬರು. ನಿಜಕ್ಕೂ ಈ ಅಜ್ಜನ ಉತ್ಸಾಹ ಈಗಿನವರಿಗೆ ಮಾದರಿ ಎಂದಿದ್ದಾರೆ ಹಲವಾರು ಜನ.

ಇದನ್ನೂ ಓದಿ : Viral: ‘ನನ್ನ ಮಾಜಿ ಪ್ರೇಮಿಯೊಂದಿಗೆ ಮಲಗಬೇಕು’ ಹೆಂಡತಿಯ ಕೊನೆಯ ಆಸೆ; ನೆಟ್ಟಿಗರ ಸಲಹೆ ಏನು?

14,700 ಜನರು ಇದನ್ನು ಲೈಕ್ ಮಾಡಿದ್ದಾರೆ. 1,450 ಜನರು ರೀಟ್ವೀಟ್ ಮಾಡಿದ್ದಾರೆ. ಇವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದಿದ್ದಾರೆ ಕೆಲವರು. ಹಾಗೇನಿಲ್ ಅವರು ಅವರ ಜಗತ್ತಿನಲ್ಲಿ ಆರಾಮಾಗಿದ್ದಾರೆ, ಅವರನ್ನು ಹಾಗೆಯೇ ಇರಲು ಬಿಡಿ. ಅವರು ಯಾರಿಗೂ ಹಾನಿ ಮಾಡಿಲ್ಲ ಎಂದಿದ್ದಾರೆ ಎಂದಿದ್ದಾರೆ ಮತ್ತೊಂದಿಷ್ಟು ಜನ. ನಾ ಕೂಡ ಮುಂದೆ ಹೀಗೇ ಆಗಬಹುದೇನೋ, ನನಗೂ ಇಷ್ಟೇ ಕ್ರಿಕೆಟ್ ಹುಚ್ಚಿದೆ ಎಂದಿದ್ದಾರೆ ಇನ್ನೊಬ್ಬರು.

ಇದನ್ನೂ ಓದಿ : Viral Video: ಕಥಕ್​ನಲ್ಲಿ ಕಾಮ್ ಡೌನ್; ನಿಜಕ್ಕೂ ಇದು ಕಣ್ಣಿಗೆ ಕಿವಿಗೆ ಹಬ್ಬವೇ ಎನ್ನುತ್ತಿರುವ ನೆಟ್ಟಿಗರು

ಬಹುಶಃ ಇವರು ಪಾಕಿಸ್ತಾನದವರೇ, ಹಿಂದೆ ಒಳ್ಳೆಯ ಆಟಗಾರರು ಆಗಿದ್ದರೆಂದು ಅನ್ನಿಸುತ್ತಿದೆ ಎಂದಿದ್ದಾರೆ ಒಬ್ಬರು. ಇವರ ಈ ಆಟದ ಮುಂದೆ ನಿಜವಾದ ಕ್ರಿಕೆಟ್ಟಿಗರೆಲ್ಲರೂ ಮಕಾಡೆ ಮಲಗುತ್ತಾರೆ ಎಂದಿದ್ದಾರೆ ಇನ್ನೊಬ್ಬರು.

ಈ ವಿಡಿಯೋ ನೋಡಿದ ನಿಮ್ಮಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:28 pm, Tue, 8 August 23