Viral Video: 11 ವರ್ಷದ ಮಗ ವಿಮಾನ ಹಾರಿಸುತ್ತಿದ್ದ, ಅಪ್ಪ ಮದ್ಯ ಸೇವಿಸುತ್ತಿದ್ದ; ವೈರಲ್ ವಿಡಿಯೋ

Brazil : ಬ್ರೆಝಿಲ್​ನ ಈ ಅಪ್ಪ ಮಗ ಖಾಸಗೀ ವಿಮಾನದಲ್ಲಿ ಪ್ರಯಾಣ ಹೊರಟಿದ್ದಾರೆ. ನಂತರ ವಿಮಾನ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಈ ವಿಡಿಯೋ ಅಪಘಾತಕ್ಕಿಂತ ಮೊದಲೇ ಚಿತ್ರೀಕರಿಸಿರುವುದೇ? ಎಂದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಈ ಮಧ್ಯೆ ಗಂಡ ಮತ್ತು ಮಲಮಗನ ಸಾವಿನಿಂದಾಗಿ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Viral Video: 11 ವರ್ಷದ ಮಗ ವಿಮಾನ ಹಾರಿಸುತ್ತಿದ್ದ, ಅಪ್ಪ ಮದ್ಯ ಸೇವಿಸುತ್ತಿದ್ದ; ವೈರಲ್ ವಿಡಿಯೋ
11ರ ಮಗನ ಕೈಗೆ ವಿಮಾನ ಕೊಟ್ಟು ಮದ್ಯ ಸೇವಿಸುತ್ತಿರುವ ಅಪ್ಪ
Follow us
ಶ್ರೀದೇವಿ ಕಳಸದ
|

Updated on:Aug 09, 2023 | 12:10 PM

Father Son : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಖಾಸಗಿ ವಿಮಾನದಲ್ಲಿ ಅಪ್ಪ ಮಗ ಪ್ರಯಾಣಿಸುತ್ತಿದ್ದಾರೆ. 11 ವರ್ಷದ ಮಗನಿಗೆ ವಿಮಾನ ಹಾರಿಸುವುದನ್ನು ಹೇಳಿಕೊಡುತ್ತಿರುವ ಅಪ್ಪ ಮದ್ಯ ಸೇವಿಸುತ್ತಿದ್ದಾನೆ. ಆದರೆ ಈ ವಿಡಿಯೋ ಇದೀಗ ಗೊಂದಲವನ್ನು ಹುಟ್ಟುಹಾಕಿದೆ. ಏಕೆಂದರೆ Express.co.uk ಪ್ರಕಾರ, ವಿಮಾನ ಅಪಘಾತದಲ್ಲಿ ತಂದೆ ಮತ್ತು ಮಗ ಇಬ್ಬರೂ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ನಡೆಯುವ ಮುನ್ನ ಈ ವಿಡಿಯೋ ಚಿತ್ರೀಕರಿಸಲಾಗಿದೆ ಎನ್ನುವುದು ಪೊಲೀಸರ ಅಂಬೋಣ. ಆದರೂ ಖಚಿತ ಮಾಹಿತಿಗಾಗಿ ಅವರು ತನಿಖೆಯನ್ನು ಮುಂದುವರಿಸಿದ್ದಾರೆ.

ಜು. 29ರಂದು 42 ವರ್ಷದ ಸಂಶೋಧಕ ಗ್ಯಾರನ್ ಮಾಯಾ (Garon Maia) 11 ವರ್ಷದ ಮಗ ಫ್ರಾನ್ಸಿಸ್ಕೋ ಮಾಯಾ (Francisco Maia) ಟ್ವಿನ್​ ಎಂಜಿನ್ ಬೀಚ್‌ಕ್ರಾಫ್ಟ್ ಬ್ಯಾರನ್ 58 (Twin-engine Beechcraft Baron 58) ಕಾಡಿಗೆ ಅಪ್ಪಳಿಸಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಕುರಿತು ತನಿಖೆ ಕೈಗೊಂಡಿರುವ ಪೊಲೀಸರು, ಅಪಘಾತಕ್ಕೆ ಮೊದಲು ಈ ವಿಡಿಯೋ ಚಿತ್ರೀಕರಿಸಲಾಗಿತ್ತೆ? ಎನ್ನುವುದನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ : Viral: ಆನ್​ಲೈನ್​ ವಂಚನೆ; ಆಟೋ ಚಾಲಕನಿಂದ ರೂ 23000 ಸುಲಿಗೆ ಮಾಡಿದ 20ರ ಯುವತಿ

ಗ್ಯಾರನ್ ಮಾಯಾ ತನ್ನ ಖಾಸಗಿ ವಿಮಾನವನ್ನು ಹಾರಿಸಲು ಮಗನಿಗೆ ಸೂಚನೆಗಳನ್ನು ಕೊಡುತ್ತಾ ತಾನು ಬಿಯರ್ ಬಾಟಲಿಯನ್ನು ಕೈಗೆ ತೆಗೆದುಕೊಳ್ಳುತ್ತಾರೆ. ಬಿಯರ್ ಕುಡಿಯುತ್ತಾ ವಿಡಿಯೋ ಕೂಡ ಮಾಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿದ ಪೊಲೀಸರು, ವಿಮಾನ ಪತನಗೊಳ್ಳುವ ಸಮಯದಲ್ಲಿ ಅದು ಅಪ್ಪನ ನಿಯಂತ್ರಣದಲ್ಲಿತ್ತೋ ಮಗನ ನಿಯಂತ್ರಣದಲ್ಲಿತ್ತೋ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಇದೀಗ ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ : Viral: ಒಂದೇ ಆಟೋ ಒಬ್ಬನೇ ಡ್ರೈವರ್​ ಒಂದೇ ಸಮಯಕ್ಕೆ ಬೇರೆಬೇರೆ ಸ್ಥಳಗಳಲ್ಲಿ ಆಟೋ ಬುಕ್ ಆಗಿದ್ದು ಹೇಗೆ?

ಬ್ರೆಝಿಲಿಯನ್​ನ ಸ್ಥಳೀಯ ಮಾಧ್ಯಮದ ಪ್ರಕಾರ, ಗ್ಯಾರನ್ ನೋವಾ ಕಾನ್​ಕ್ವಿಸ್ಟಾದ ​ರೊಂಡೋನಿಯಾದಲ್ಲಿರುವ ತಮ್ಮ ಫಾರ್ಮ್​​ಹೌಸ್​ನಿಂದ ಮಗನೊಂದಿಗೆ ವಿಮಾನದಲ್ಲಿ ಹಾರಿ ಇಂಧನಕ್ಕಾಗಿ ವಿಲ್ಹೆನಾದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದರು. ನಂತರ ಮಾಟೋ ಗ್ರೊಸೊ ಡೋ ಸುಲ್​ನ ಕ್ಯಾಂಪೊ ಗ್ರ್ಯಾಂಡೇನಲ್ಲಿ ವಾಸಿಸುತ್ತಿರುವ ತಮ್ಮ ಹೆಂಡತಿಯ ಬಳಿ ಮಗನನ್ನು ಬಿಡಲು ಹೋಗುವವರಿದ್ದರು. ಏಕೆಂದರೆ ಆತ ಅಲ್ಲಿದ್ದುಕೊಂಡೇ ತನ್ನ ಶಾಲಾಭ್ಯಾಸ ಪೂರೈಸುತ್ತಿದ್ದ.

ಇದನ್ನೂ ಓದಿ : Viral Video: ಏಕಕಾಲಕ್ಕೆ ಸೈಕಲ್ ಓಡಿಸುತ್ತ ಪಿಯಾನೋ ನುಡಿಸುತ್ತಿರುವ ಈ ಮುಸಾಫಿರ್

ಈ ಎಲ್ಲದರ ಮಧ್ಯೆ ಮತ್ತೊಂದು ಆಘಾತಕಾರಿ ಘಟನೆ ಇವರ ಕುಟುಂಬದಲ್ಲಿ ಸಂಭವಿಸಿದೆ. ಗಂಡ ಮತ್ತು ಮಲಮಗನ ಅಂತ್ಯಸಂಸ್ಕಾರ ಪೂರೈಸಿದ ಕೆಲಗಂಟೆಗಳಲ್ಲೇ ಗ್ಯಾರನ್​ ಪತ್ನಿ ಅನಾ ಪ್ರಿಡೋನಿಕ್​ ಆ. 1ರಂದು ಆತ್ಮಹತ್ಯೆ ಮಾಡಿಕೊಂಡರು. ಬ್ರೆಝಿಲಿಯನ್​ ಕಾನೂನಿನ ಪ್ರಕಾರ, ಪ್ರೌಢಶಾಲೆ ಪೂರೈಸಿದ, ರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯಲ್ಲಿ ಹೆಸರನ್ನು ನೋಂದಾಯಿಸಿದ 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಮಾತ್ರ ವಿಮಾನವನ್ನು ಹಾರಿಸಲು ಅನುಮತಿಸಲಾಗುತ್ತದೆ.

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 12:10 pm, Wed, 9 August 23