Viral: ಕ್ಯಾಬ್ ಡ್ರೈವರ್ ಆದ ಮೇಲೆ ಹೆಚ್ಚು ಗಳಿಸುತ್ತಿದ್ದೇನೆ ಎಂದ ಎಂಜಿನಿಯರ್
Earning : ರಸ್ತೆಬದಿಯಲ್ಲಿರುವ ಚಹಾದ ಅಂಗಡಿಯವ, ಪಾನೀಪುರಿ ಅಂಗಡಿಯವ ತಿಂಗಳಿಗೆ ಲಕ್ಷಗಟ್ಟಲೆ ಗಳಿಸುತ್ತಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಹಾಗಿದ್ದರೆ ಇಂದು ಓದಿಗೂ ಗಳಿಕೆಗೂ ಸಂಬಂಧವೇ ಇಲ್ಲವೆಂದಾಯಿತಲ್ಲವೆ? ಕೌಶಲ, ಶ್ರಮ ಮತ್ತು ಬುದ್ಧಿವಂತಿಕೆ ಇದ್ದರೆ ಯಾರೂ ಎಷ್ಟು ಹಣವನ್ನಾದರೂ ಗಳಿಸಬಹುದೆ, ಏನಂತೀರಿ ನೀವು?
Cab Driver : ನೀವು ಏನೇ ಓದಿ ಯಾವುದೇ ಕೆಲಸ ಸೇರಿದರೂ ನಿಮ್ಮ ಬುದ್ಧಿಮತ್ತೆ ಮತ್ತು ಚಾಣಾಕ್ಷತೆಯಿಂದ ನೀವು ಅಂದುಕೊಂಡಿದ್ದನ್ನು ಸಾಧಿಸಬಹುದು, ಗಳಿಸಬಹುದು. ಹಣ (Money) ಎನ್ನುವುದು ಎಲ್ಲರಿಗೂ ಬದುಕಿನ ಅಗತ್ಯ. ಹಾಗಾಗಿ ಹಣಗಳಿಕೆಯ ಸುತ್ತ ಎಲ್ಲರ ಚಿತ್ತ ಸಾಮಾನ್ಯ. ಇದೀಗ ವೈರಲ್ ಆಗಿರುವ ಈ ಪೋಸ್ಟ್ ಗಮನಿಸಿ. ಮಹಿಳೆಯೊಬ್ಬರು ಕ್ಯಾಬ್ ಡ್ರೈವರ್ನೊಂದಿಗೆ ಮಾತಿಗಿಳಿದಾಗ ಹೊಮ್ಮಿದ ವಿಷಯ ಕೇಳಿ ಅಚ್ಚರಿಪಟ್ಟಿದ್ದಾರೆ. ಈ ವಿಷಯವನ್ನು ಅವರು X (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ.
I was in a cab yesterday and that driver was an engineer.
ಇದನ್ನೂ ಓದಿHe said he earns more from the cab driving than his corporate job at Qualcomm. ?
— Shweta Kukreja (@ShwetaKukreja_) August 6, 2023
‘ನಾನು ನಿನ್ನೆ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಡ್ರೈವರ್ನೊಂದಿಗೆ ಮಾತಿಗಿಳಿದೆ. ತಾನು ಅಮೆರಿಕದ ಮೂಲದ ಕ್ವಾಲ್‌ಕಾಮ್‌ನ (Qualcomm) ಕಾರ್ಪೊರೇಟ್ ಉದ್ಯೋಗಕ್ಕಿಂತ ಕ್ಯಾಬ್ ಡ್ರೈವಿಂಗ್‌ನಿಂದಲೇ ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದೇನೆ ಎಂದು ಹೇಳಿದ’ ಎಂದು ಶ್ವೇತಾ ಕುಕ್ರೇಜಾ ಟ್ವೀಟ್ ಮಾಡಿದ್ದಾರೆ. ನೆಟ್ಟಿಗರನೇಕರು ಆಸಕ್ತಿಕರವಾಗಿ ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ : Viral: ‘ಭಯ ಒಳ್ಳೆಯದು’ ; ಸುನೀಲ್ ಶೆಟ್ಟಿ ಲಿಂಕ್ಡ್ಇನ್ ಪೋಸ್ಟ್ ವೈರಲ್
ಈ ಪೋಸ್ಟ್ ಅನ್ನು ಆ. 6ರಂದು ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 7.8 ಲಕ್ಷ ಜನರು ಇದನ್ನು ನೋಡಿದ್ದಾರೆ. ಸುಮಾರು 7,000 ಜನರು ಲೈಕ್ ಮಾಡಿದ್ದಾರೆ. ಅನೇಕರು ಇದಕ್ಕೆ ಒಪ್ಪಿಗೆ ಸೂಚಿಸಿದರೆ ಈ ಪೋಸ್ಟ್ನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬೀದಿಬದಿಯ ಚಾಯ್ವಾಲಾನಿಗೆ ಮಾತನಾಡಿಸಿ, ಅವನು ಕ್ಯಾಬ್ ಡ್ರೈವರ್ಗಿಂತ ಹೆಚ್ಚು ಸಂಪಾದಿಸುತ್ತಿರಬಹುದು ಎಂದಿದ್ದಾರೆ ಟ್ವಿಟರ್ ಖಾತೆದಾರರೊಬ್ಬರು.
ಇದನ್ನೂ ಓದಿ : Viral Video: ಬಿಸ್ಮಿಲ್ಲಾಖಾನ್ರನ್ನು ನೆನಪಿಸಿದ ಸರ್ದಾರ್ಜೀಯ ಮಿಮಿಕ್ರಿ; ಶಭಾಷ್ ಎಂದ ನೆಟ್ಟಿಗರು
ಯಾಕೋ ನನಗಿದು ಅಸಾಧ್ಯವೆಂದು ಅನ್ನಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು. ಅವನು ಒಂದು ಸಂಖ್ಯೆಯನ್ನು ಹೆಚ್ಚಿಗೆ ಹೇಳಿದ್ದಾನೆಯೇ? ಪಾರ್ಟ್ಟೈಮ್ ಡ್ರೈವರ್ ಮತ್ತು ಫುಲ್ಟೈಮ್ ಎಂಜಿನಿಯರ್ ಆಗಿದ್ದಲ್ಲಿ ಇದು ಲಾಭದಾಯಕ ಎಂದಿದ್ದಾರೆ ಮತ್ತೊಬ್ಬರು. ನೀವು ತಪ್ಪಾಗಿ ಕೇಳಿಸಿಕೊಂಡಿರಬಹುದು. ಅವನು ಎಂಜಿನಿಯರ್ ಕೆಲಸದೊಂದಿಗೆ ಕ್ಯಾಬ್ ಡ್ರೈವಿಂಗ್ ಕೂಡ ಮಾಡುತ್ತಿರಬಹುದು ಎಂದಿದ್ಧಾರೆ ಇನ್ನೂ ಒಬ್ಬರು.
ಇದನ್ನೂಓದಿ : Viral Video: ನ್ಯೂಯಾರ್ಕ್; ಮೆಟ್ರೋದಲ್ಲಿ ಕುಟುಂಬವೊಂದರ ಮೇಲೆ ದಾಳಿ ಮಾಡಿದ ಹದಿಹರೆಯದ ಹುಡುಗಿಯರು
ಖಂಡಿತ ಇದು ನಿಜ, ಈ ಪೋಸ್ಟ್ ಅನ್ನು ನಾನು ಒಪ್ಪುತ್ತೇನೆ ಎಂದಿದ್ದಾರೆ ಮತ್ತೊಬ್ಬರು. ನಮ್ಮ ಏರಿಯಾದಲ್ಲಿರುವ ಪಾನೀಪುರಿ ಅಂಗಡಿಯವ ಓದಿದ್ದು ಕೇವಲ 6ನೇ ತರಗತಿ. ಆದರೆ ತಿಂಗಳಿಗೆ 3ರಿಂದ 4 ಲಕ್ಷ ಹಣವನ್ನು ಆತ ಗಳಿಸುತ್ತಾನೆ. ಸದ್ಯದಲ್ಲಿಯೇ ಇನ್ನೊಂದು ಏರಿಯಾದಲ್ಲಿ ಅಂಗಡಿ ತೆರೆಯುವವನಿದ್ದಾನೆ ಎಂದಿದ್ದಾರೆ ಮಗದೊಬ್ಬರು.
ಓದಿಗೂ ಗಳಿಕೆಗೂ ಸಂಬಂಧವೇ ಇಲ್ಲ ತಾನೆ? ಶ್ರಮ ಮತ್ತು ಬುದ್ಧಿವಂತಿಕೆ ಇದ್ದಲ್ಲಿ ಎಷ್ಟು ಬೇಕಾದರೂ ಹಣ ಗಳಿಸಬಹುದು. ನೀವೇನು ಹೇಳುತ್ತೀರಿ ಈ ವಿಷಯವಾಗಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:54 pm, Wed, 9 August 23