Viral Video: ಸಂಗೀತಪ್ರೇಮಿ ಮಂಗಗಳ ಸಂಗದಲ್ಲಿ ಹೀಗೊಬ್ಬ ಪಿಯಾನೋಸಂತ
Music Lover : ಈ ಕಲಾವಿದ ಹೀಗೆ ಪಿಯಾನೋ ನುಡಿಸಲು ಆರಂಭಿಸಿದರೆ ಎಲ್ಲೆಲ್ಲೋ ಅಲೆದಾಡಲು ಹೋಗಿದ್ದ ಮಂಗಗಳೆಲ್ಲ ಬಂದು ಸುತ್ತುವರಿಯುತ್ತವೆ. ಅವನು ನುಡಿಸುವ ಒಂದೊಂದು ಸ್ವರವನ್ನೂ ಕುತೂಹಲದಿಂದ ಆಲಿಸುತ್ತವೆ. ಅವನ ಮೇಲೆ ಹತ್ತಿ ಎಷ್ಟೇ ಮಂಗಾಟವಾಡಿದರೂ ಅವನ ಮಾತ್ರ ಸ್ವರಗಳಲ್ಲಿ ತಲ್ಲೀನ. ನೋಡಿ ಈ ವಿಡಿಯೋ.

Monkey : ಕಲೆಗಳ ಒಡನಾಟದಲ್ಲಿ ನಾವಿರುವುದಕ್ಕೇ ಮನುಷ್ಯರಾಗಲು ಪ್ರಯತ್ನಿಸುತ್ತಿದ್ದೇವೆ. ಅದರಲ್ಲೂ ಸಂಗೀತ ನಮ್ಮ ದೇಹದ ತಂತುತಂತುಗಳೊಂದಿಗೆ ಬೆಸೆದುಕೊಂಡು ನಮ್ಮನ್ನು ದುಷ್ಟಶಕ್ತಿಗಳಿಂದ ತಪ್ಪಿಸಿಕೊಂಡು ಜೀವಿಸುವುದು ಹೇಗೆ ಎಂಬುದನ್ನು ಕಲಿಸುತ್ತಿದೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಇಲ್ಲೊಬ್ಬ ಕಲಾವಿದ ಪಿಯಾನೋದಲ್ಲಿ ಮುಳುಗಿದ್ದಾನೆ. ಅವನ ಸುತ್ತಲೂ ಕೋತಿಗಳ ದಂಡು ಸುತ್ತುವರಿದಿದೆ. ಒಂದು ತಲೆಮೇಲೆ ಹೆಗಲಮೇಲೆ ಕುಳಿತರೆ ಇನ್ನೊಂದು ತೊಡೆಯ ಮೇಲೆ. ಮತ್ತೊಂದು ಪಿಯಾನೋ (Piano) ಮೇಲೆ, ಮಗದೊಂದು ಪಿಯಾನೋ ಕೀಗಳ ಮೇಲೆ… ಒಂದೇ ಎರಡೇ! ಆದರೂ ಈತ ತನ್ನ ಲೋಕದಲ್ಲಿ ತಾ.
View this post on Instagram
ಈ ವಿಡಿಯೋ ನೋಡಿದ ಅನೇಕರು ಸಂಗೀತವಿಲ್ಲದೇ ಜೀವನವೇ ಇಲ್ಲ ಮತ್ತು ಸಂಗೀತವೆಂದರೆ ಏನು ಎನ್ನುವುದರ ಸುತ್ತ ಚರ್ಚಿಸಿದ್ದಾರೆ. ಸಂಗೀತವಿಲ್ಲದಿದ್ದರೆ ಜೀವನ ಅತ್ಯಂತ ಘೋರವಾಗಿರುತ್ತಿತ್ತು ಎಂದಿದ್ದಾರೆ ಒಬ್ಬರು. ಪ್ರಾಣಿಗಳು ಸಂಪತ್ತು, ಮಕ್ಕಳಂತೆ ಅವುಗಳನ್ನು ಜೋಪಾನಿಸಬೇಕು ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: ಇದು ಮಸಾಲೆ ಸುದ್ದಿ; ಇಂದೇ ನೋಡಿ ಈ ‘ಏಲಕ್ಕಿ ಮಹಾತ್ಮೆ’
ಸಂಗೀತವು ಎಲ್ಲಾ ಜೀವಿಗಳಿಗೆ ಅರ್ಥವಾಗುವ ಭಾಷೆಯಾಗಿದೆ. ನೀವು ನಿಮ್ಮ ತೋಟದಲ್ಲಿ ಕುಳಿತು ಹಾಡಿದರೆ ಅಥವಾ ವಾದ್ಯವನ್ನು ನುಡಿಸಿದರೆ ನಿಮ್ಮ ಗಿಡಗಳು ಸಾಕಷ್ಟು ತರಕಾರಿ ಹಣ್ಣುಗಳನ್ನು ಕೊಡುತ್ತವೆ. ಹೇರಳವಾಗಿ ಹೂಗಳು ಅರಳುತ್ತವೆ. ಇದನ್ನು ವಿಜ್ಞಾನಿಗಳು ಸಾಬೀತುಪಡಿಸಿದ್ದಾರೆ ಎಂದಿದ್ದಾರೆ ಇನ್ನೊಬ್ಬರು.
ಇದನ್ನೂ ಓದಿ : Viral: ಕ್ಯಾಬ್ ಡ್ರೈವರ್ ಆದ ಮೇಲೆ ಹೆಚ್ಚು ಗಳಿಸುತ್ತಿದ್ದೇನೆ ಎಂದ ಎಂಜಿನಿಯರ್
ಜನರು ಕಾಡಿನ ಪ್ರಾಣಿಗಳಿಗಾಗಿ ಸಂಗೀತವನ್ನು ಪ್ರಸ್ತುತಪಡಿಸುವುದನ್ನು ಈತನಕ ನಾನು ನೋಡಿರಲಿಲ್ಲ. ನಿಜಕ್ಕೂ ಇದು ಅದ್ಭುತವಾದ ವಿಡಿಯೋ. ಮಧುರ ಮತ್ತು ಸಾಮರಸ್ಯದ ಭಾಷೆಯಂತೆ ಈ ಸಂಗೀತ. ಇವರಿಗೆ ಒಳಿತಾಗಲಿ ಎಂದಿದ್ದಾರೆ ಮತ್ತೊಬ್ಬರು. ಇದನ್ನು ವಿಡಿಯೋ ಮಾಡಿ ಎಡಿಟ್ ಮಾಡಿದವರಿಗೆ ಧನ್ಯವಾದ ಎಂದು ಕೆಲವರು ಹೇಳಿದ್ದಾರೆ.
ಇದನ್ನೂ ಓದಿ : Viral: ‘ಭಯ ಒಳ್ಳೆಯದು’ ಸುನೀಲ್ ಶೆಟ್ಟಿ ಲಿಂಕ್ಡ್ಇನ್ ಪೋಸ್ಟ್ ವೈರಲ್
ಸಂಗೀತವು ಆತ್ಮಗಳ ಭಾಷೆ ಎಂದಿದ್ದಾರೆ ಖಲೀಲ್ ಗಿಬ್ರಾನ್ ಎಂದು ಇನ್ನೊಬ್ಬರು ಹೇಳಿದ್ದಾರೆ. ಪಿಯಾನೋ ನುಡಿಸುತ್ತಿರುವ ವ್ಯಕ್ತಿಯ ಬಗ್ಗೆ ನನಗೆ ಪ್ರೀತಿ ಉಂಟಾಗುತ್ತಿದೆ. ಅವನು ಪ್ರತಿಭಾವಂತ ಮತ್ತು ಶಾಂತ ಸ್ವಭಾವದವ. ಸಂಗೀತದಷ್ಟೇ ಪ್ರಾಣಿಗಳನ್ನು ಪ್ರೀತಿಸುತ್ತಾನೆ ಎಂದಿದ್ದಾರೆ ಮಗದೊಬ್ಬರು.
ಈ ವಿಡಿಯೋ ನೋಡಿದ ನೀವೇನಂತೀರಿ? ನಿಮಗೆ ಸಂಗೀತ ಇಷ್ಟವೇ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ