Viral Video: ದೆಹಲಿ; ಪೊಲೀಸರಿಗೆ ಕಪಾಳಮೋಕ್ಷ ಮಾಡಿದ ಮಹಿಳೆ; ಕ್ರಮ ಕೈಗೊಳ್ಳಿ ಎಂದ ನೆಟ್ಟಿಗರು

Woman : ದೆಹಲಿಯ ಕರ್ತವ್ಯನಿರತ ಪೊಲೀಸರಿಗೆ ಈ ಮಹಿಳೆ ಕಪಾಳಿಗೆ ಹೊಡೆದಿದ್ದಾಳೆ. ಕಾರಣ ಏನೆಂದು ಬಹಿರಂಗಗೊಂಡಿಲ್ಲ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಪೊಲೀಸರನ್ನೂ ಈಕೆ ಬಿಟ್ಟಿಲ್ಲವೆಂದರೆ ಉಳಿದವರ ಕಥೆ ಏನು ಎಂದು ಚಿಂತಾಕ್ರಾಂತರಾಗಿದ್ದಾರೆ ನೆಟ್ಟಿಗರು. ಈಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ

Viral Video: ದೆಹಲಿ; ಪೊಲೀಸರಿಗೆ ಕಪಾಳಮೋಕ್ಷ ಮಾಡಿದ ಮಹಿಳೆ; ಕ್ರಮ ಕೈಗೊಳ್ಳಿ ಎಂದ ನೆಟ್ಟಿಗರು
ಕರ್ತವ್ಯನಿರತ ಪೊಲೀಸರ ಕಪಾಳಿಗೆ ಹೊಡೆದ ದೆಹಲಿ ಮಹಿಳೆ
Follow us
|

Updated on:Aug 11, 2023 | 1:23 PM

Delhi : ದೆಹಲಿಯ ಜನನಿಬಿಡ ರಸ್ತೆಯಲ್ಲಿ ಕರ್ತವ್ಯ ನಿರ್ತರಾಗಿದ್ದ ಪೊಲೀಸರೊಬ್ಬರ (Police) ಮೇಲೆ ಮಹಿಳೆಯೊಬ್ಬರು ಕಪಾಳಮೋಕ್ಷ ಮಾಡಿರುವ ಘಟನೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಆಕೆ ಪೊಲೀಸರ ಕಪಾಳಿಗೆ ಹೊಡೆದ ಮೇಲೆ ಅಲ್ಲಿದ್ದ ಜನರು ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಿದ್ದಾರೆ. ಹೀಗೆ ವರ್ತಿಸಿದರೆ ಕಾನೂನಿನ ತೊಡಕಿಗೆ ತಾನು ಒಳಗಾಗಬಹುದೆಂಬ ಅರಿವನ್ನೇ ಈಕೆ ಕಳೆದುಕೊಂಡಿದ್ದಾಳೆ. ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ಪೊಲೀಸರ ಮೇಲೆ ಕೈ ಎತ್ತಿದ್ದು ಅಕ್ಷಮ್ಯ ಅಪರಾಧ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಕ್ಷಣವೇ ಈ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ : Viral: Barbie; ‘ಅಪ್ಪಾ, ಬಾರ್ಬಿಯಂತೆ ಅಲಂಕರಿಸಿಕೋ’ ಮಗಳ ಸವಾಲಿಗೆ ಸೈ ಎಂದ ಅಪ್ಪ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಘರ್ ಕೆ ಕಾಲೇಶ್’ ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಟ್ವೀಟ್ ಮಾಡಲಾಗಿದೆ. ಆ. 8ರಂದು ಟ್ವೀಟ್ ಮಾಡಿದ ಈ ವಿಡಿಯೋ ಅನ್ನು ಈತನಕ ಸುಮಾರು 1.2 ಲಕ್ಷ ಜನರು ನೋಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ಆಕ್ರೋಶದಿಂದ ವರ್ತಿಸಿದ್ದಾರೆ. ಗಂಡಾಗಲಿ ಹೆಣ್ಣಾಗಲಿ ಅಥವಾ ಯಾವುದೇ ಲಿಂಗವಾಗಲೀ ಕಾನೂನಿನ ಎದುರು ಎಲ್ಲರೂ ಒಂದೇ ಎನ್ನುತ್ತಿದ್ದಾರೆ ಕೆಲವರು. ಆಕೆ ತನ್ನನ್ನು ತಾನು ಬಾಡಿ ಬಿಲ್ಡರ್ ಎಂದು ತಿಳಿದುಕೊಂಡಂತಿದೆ ಎಂದು ಹೇಳಿದ್ದಾರೆ ಒಬ್ಬರು.

ಈ ಮಹಿಳೆಗೆ ತಕ್ಷಣವೇ ಶಿಕ್ಷೆಯಾಗಬೇಕು, ದೆಹಲಿ ಪೊಲೀಸರು ಗಮನಹರಿಸಿ ಎಂದಿದ್ದಾರೆ ಮತ್ತೊಬ್ಬರು. ಇವೆಲ್ಲಾ ಏಕಪಕ್ಷೀಯ ಕಾನೂನಿನ ಪರಿಣಾಮಗಳು ಎಂದಿದ್ದಾರೆ ಇನ್ನೊಬ್ಬರು. ಆಕೆ ಮಹಿಳಾವಾದಿ! ಎಂದು ವ್ಯಂಗ್ಯವಾಡಿದ್ಧಾರೆ ಮತ್ತೊಬ್ಬರು. ಈ ವಿಷಯವಾಗಿ ನಿಮ್ಮ ಕಲ್ಪನೆ ತಪ್ಪು ಎಂದು ಪ್ರತಿಯಾಗಿ ಹೇಳಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಬೆಂಗಳೂರು; ಬೆಕ್ಕೇ ಬೆಕ್ಕೇ ಮುದ್ದಿನ ಮೂಟೆ ಅಮ್ಮನ ಬೆನ್ನೇರಿ ಹೊರಟಿಹೆ ಎಲ್ಲಿಗೆ?

ಕರ್ತವ್ಯದಲ್ಲಿರುವ ಪೊಲೀಸರಿಗೆ ಹೊಡೆಯುತ್ತಾಳೆಂದರೆ ಈಕೆಯ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದರ್ಥ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆಕೆಯ ಮತ್ತು ಉಳಿದವರ ಹಿತವನ್ನು ಕಾಪಾಡಬೇಕೆಂಬ ವಿನಂತಿ ಎಂದಿದ್ದಾರೆ ಒಬ್ಬರು. ದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಪಾಲನೆ ಆಗುತ್ತಿದೆಯೇ? ಎಂದು ಮತ್ತೊಬ್ಬರು ಕೇಳಿದ್ದಾರೆ.

ಇದನ್ನೂ ಓದಿ : Viral Brain Teaser: ಸ್ಮೆಲ್​ ಪದಗಳ ರಾಶಿಯಲ್ಲಿ ಸ್ವೆಲ್​ ಪದವೂ ಅಡಗಿದೆ, ಕಂಡುಹಿಡಿಯುವಿರೇ?

ಈಕೆಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ದಯವಿಟ್ಟು ಈಕೆಯನ್ನು ಆಸ್ಪತ್ರೆಗೆ ಸೇರಿಸಿ ಎಂದಿದ್ಧಾರೆ ಒಬ್ಬರು. ಹೌದು ಮೊದಲು ಪೊಲೀಸರು ಈಕೆಯನ್ನು ವಶಕ್ಕೆ ಪಡೆಯಲಿ ನಂತರ ಉಳಿದುದರ ಬಗ್ಗೆ ಯೋಚಿಸಲಿ ಎಂದಿದ್ದಾರೆ ಕೆಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 1:22 pm, Fri, 11 August 23

ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಮನೆಯೆದುರು ಇಟ್ಟಿದ್ದ ಚಪ್ಪಲಿಯೇ ಮಾಯ; ಈ ಕಳ್ಳನ ಕೆಲಸ ನೋಡಿ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಜಮ್ಮುವಿನ ಕತ್ರಾದಲ್ಲಿ ಭಾರೀ ಬಸ್‌ ಬೆಂಕಿ ದುರಂತ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಬೆಂಗಳೂರು: ಭೂಮಿ ಪೂಜೆಗೂ ಮುನ್ನ ಜಮೀರ್ ಪ್ರಾರ್ಥನೆ ಹೇಗಿತ್ತು ನೋಡಿ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜತೆ ನರಕದವರ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಕೆಳಗೆ ಬಿದ್ದ ಹಣವನ್ನು ಡಿಕೆ ಶಿವಕುಮಾರ್​ ಏನು ಮಾಡಿದರು ನೋಡಿ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಬೀದರ್​ನಲ್ಲಿ ರೌಡಿಶೀಟರ್​ಗಳ ಬೆವರಿಳಿಸಿದ ಎಸ್​ಪಿ; ವಿಡಿಯೋ ನೋಡಿ
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ